Advertisement
“ಈಡನ್ ಗಾರ್ಡನ್ಸ್’ನಲ್ಲಿ ಶನಿವಾರ ಮೊದಲ್ಗೊಂಡ ರಣಜಿ ಸೆಮಿಫೈನಲ್‌ನಲ್ಲಿ ಬಂಗಾಲ 9 ವಿಕೆಟಿಗೆ 275 ರನ್ ಗಳಿಸಿದೆ. ಇದರಲ್ಲಿ ಮಜುಂದಾರ್ ಪಾಲು ಅಜೇಯ 120 ರನ್.
ರಣಜಿ ಕ್ವಾರ್ಟರ್ ಫೈನಲ್‌ನಲ್ಲಿ ಜೀವನಶ್ರೇಷ್ಠ 157 ರನ್ ಬಾರಿಸಿ ತಂಡವನ್ನು ಮೇಲೆತ್ತಿದ್ದ ಮಜುಮಾªರ್, ಸೆಮಿಫೈನಲ್‌ನಲ್ಲೂ ಆಪತಾºಂಧವನ ಪಾತ್ರ ವಹಿಸಿದರು. ಕೆಳ ಕ್ರಮಾಂಕದ ಆಟಗಾರರಾದ ಶಾಬಾಜ್ ಅಹ್ಮದ್, ಆಕಾಶ್ ದೀಪ್ ಅವರಿಂದ ಉತ್ತಮ ಬೆಂಬಲ ಪಡೆದ ಅವರು ಈಗಾಗಲೇ 173 ಎಸೆತ ನಿಭಾಯಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಅಮೋಘ ಬ್ಯಾಟಿಂಗ್ 18 ಬೌಂಡರಿ ಹಾಗೂ ಒಂದು ಸಿಕ್ಸರನ್ನು ಒಳಗೊಂಡಿದೆ.
Related Articles
Advertisement
ಸಂಕ್ಷಿಪ್ತ ಸ್ಕೋರ್: ಬಂಗಾಲ-9 ವಿಕೆಟಿಗೆ 275 (ಮಜುಂದಾರ್ ಬ್ಯಾಟಿಂಗ್ 120, ಆಕಾಶ್ ದೀಪ್ 44, ಶಾಬಾಜ್ 35, ಮಿಥುನ್ 65ಕ್ಕೆ 3, ಮೋರೆ 45ಕ್ಕೆ 2, ಪ್ರಸಿದ್ಧ್ ಕೃಷ್ಣ 62ಕ್ಕೆ 2, ಕೆ. ಗೌತಮ್ 88ಕ್ಕೆ 2).
ಬಂತು ಡಿಆರ್‌ಎಸ್!ಭಾರತದ ದೇಶಿ ಕ್ರಿಕೆಟ್‌ನಲ್ಲಿ ಮೊದಲ ಸಲ ಡಿಆರ್‌ಎಸ್ ನಿಯಮವನ್ನು ಅಳವಡಿಸಿದ್ದು ರಣಜಿ ಸೆಮಿಫೈನಲ್ ಪಂದ್ಯಗಳ ವಿಶೇಷವಾಗಿತ್ತು. ಸ್ವಾರಸ್ಯವೆಂದರೆ, ಕರ್ನಾಟಕ ತನ್ನ ಮೊದಲ ವಿಕೆಟನ್ನು ಡಿಆರ್‌ಎಸ್ ಮೂಲಕ ಉರುಳಿಸಿದ್ದು. ಔಟಾದವರು ಬಂಗಾಲದ ಆರಂಭಕಾರ ಅಭಿಷೇಕ್ ರಾಮನ್ (0). ಈ ವಿಕೆಟ್ ಮಿಥುನ್ ಪಾಲಾಯಿತು. ಸೌರಾಷ್ಟ್ರಕ್ಕೆ ಕಡಿವಾಣ ಹಾಕಿದ ಗುಜರಾತ್
ರಾಜ್‌ಕೋಟ್: ಗುಜರಾತ್ ಎದುರಿನ ಇನ್ನೊಂದು ರಣಜಿ ಸೆಮಿಫೈನಲ್‌ನಲ್ಲಿ ಆತಿಥೇಯ ಸೌರಾಷ್ಟ್ರ ನಿಧಾನ ಗತಿಯ ಬ್ಯಾಟಿಂಗ್ ನಡೆಸಿ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿದೆ. ಶೆಲ್ಡನ್ ಜಾಕ್ಸನ್ ಅಜೇಯ 69 ರನ್ ಬಾರಿಸಿ ತಂಡದ ನೆರವಿಗೆ ನಿಂತಿದ್ದಾರೆ (132 ಎಸೆತ, 9 ಬೌಂಡರಿ, 2 ಸಿಕ್ಸರ್).
ಸೌರಾಷ್ಟ್ರ ಸರದಿಯ ಅಷ್ಟೂ ಮಂದಿ ಉತ್ತಮ ಬ್ಯಾಟಿಂಗ್ ನಡೆಸಿದರೂ ಇದರಲ್ಲಿ ಬಿರುಸಿರಲಿಲ್ಲ. ಆರಂಭಿಕರಾದ ಹಾರ್ವಿಕ್ ದೇಸಾಯಿ (35), ಕಿಶನ್ ಪರ್ಮಾರ್ (37) ಮೊದಲ ವಿಕೆಟಿಗೆ 62 ರನ್ ಪೇರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕೀಪರ್ ಅವಿ ಬ ರೋಟ್ (27), ವಿಶ್ವರಾಜ್ ಜಡೇಜ (26) ಸಾಮಾನ್ಯ ಪ್ರದರ್ಶನ ನೀಡಿದರು.
ಗುಜರಾತ್ ಪರ ಅರ್ಜಾನ್ 40ಕ್ಕೆ 3, ಅಕ್ಷರ್ ಪಟೇಲ್ 47ಕ್ಕೆ 2 ವಿಕೆಟ್ ಉರುಳಿಸಿದರು.