Advertisement
ಗೆಲುವಿಗೆ 321 ರನ್ ಗುರಿ ಪಡೆದಿರುವ ಮಧ್ಯ ಪ್ರದೇಶ 4ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 228 ರನ್ ಗಳಿಸಿದೆ. ಇನ್ನೂ 93 ರನ್ ಅಗತ್ಯವಿದೆ. ಆದರೆ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳೆಲ್ಲ ಪೆವಿಲಿಯನ್ ಸೇರಿರುವ ಕಾರಣ ಮಧ್ಯ ಪ್ರದೇಶದ ಹಾದಿ ಕಠಿನ ಎಂದೇ ಹೇಳಬೇಕಾಗುತ್ತದೆ.
ಆರಂಭಕಾರ ಯಶ್ ದುಬೆ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ಮಧ್ಯ ಪ್ರದೇಶದ ಗೆಲುವಿನ ಆಸೆಗೆ ನೀರೆರೆಯುತ್ತಲೇ ಇದ್ದರು. ಆದರೆ ದಿನದಾಟದ ಮುಕ್ತಾಯಕ್ಕೆ ಒಂದು ಓವರ್ ಉಳಿದಿರುವಾಗ ಆದಿತ್ಯ ಸರ್ವಟೆ ಈ ಬಹುಮೂಲ್ಯ ವಿಕೆಟ್ ಉಡಾಯಿಸುವುದರೊಂದಿಗೆ ವಿದರ್ಭದ ಕೈ ಮೇಲಾಗಿದೆ. ಅಲ್ಲದೇ ಮಧ್ಯ ಪ್ರದೇಶದ ಕೆಳ ಕ್ರಮಾಂಕದ ಆಟಗಾರರ್ಯಾರೂ ಬ್ಯಾಟಿಂಗ್‌ನಲ್ಲಿ ಹಿಡಿತ ಹೊಂದಿರುವವರಲ್ಲ. ಪ್ರಥಮ ಇನ್ನಿಂಗ್ಸ್ ನಲ್ಲಿ ಕೊನೆಯ ನಾಲ್ವರು ಆಟಗಾರರು ಒಟ್ಟು ಸೇರಿ ಗಳಿಸಿದ್ದು 25 ರನ್ ಮಾತ್ರ. ಹೀಗಾಗಿ ವಿದರ್ಭಕ್ಕೆ ಫೈನಲ್ ಅವಕಾಶ ಜಾಸ್ತಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಯಶ್ ದುಬೆ 212 ಎಸೆತಗಳನ್ನು ಎದುರಿಸಿ 94 ರನ್ ಕೊಡುಗೆ ಸಲ್ಲಿಸಿದರು (10 ಬೌಂಡರಿ). ವನ್‌ಡೌನ್ ಬ್ಯಾಟರ್ ಹರ್ಷ ಗಾವಿÛ ಗಳಿಕೆ 67 ರನ್ (80 ಎಸೆತ, 11 ಬೌಂಡರಿ). ದುಬೆ-ಗಾವಿÛ ದ್ವಿತೀಯ ವಿಕೆಟಿಗೆ 106 ರನ್ ಪೇರಿಸುವ ಮೂಲಕ ಮಧ್ಯ ಪ್ರದೇಶದ ಗೆಲುವಿನ ಅವಕಾಶವನ್ನು ತೆರೆದಿರಿಸಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸಿದ ಯಶ್ ಠಾಕೂರ್ ವಿದರ್ಭಕ್ಕೆ ದೊಡ್ಡ ಯಶಸ್ಸು ತಂದಿತ್ತರು; ತಂಡವನ್ನು ಹಳಿಗೆ ತಂದು ನಿಲ್ಲಿಸಿದರು. 100 ರನ್ ಅಂತರದಲ್ಲಿ ಮಧ್ಯ ಪ್ರದೇಶದ 5 ವಿಕೆಟ್ ಉರುಳಿತು.
Related Articles
Advertisement
ಯಶ್ ರಾಥೋಡ್ ಶತಕಇದಕ್ಕೂ ಮುನ್ನ 6ಕ್ಕೆ 343 ರನ್ ಮಾಡಿದಲ್ಲಿಂದ ದಿನದಾಟ ಮುಂದುವರಿಸಿದ ವಿದರ್ಭ, 402ರ ತನಕ ಸಾಗಿತು. ಯಶ್ ರಾಥೋಡ್ ಅವರ ಶತಕ ವಿದರ್ಭ ಸರದಿಯ ಆಕರ್ಷಣೆ ಆಗಿತ್ತು. ರಾಥೋಡ್ 97 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಭರ್ತಿ 200 ಎಸೆತಗಳನ್ನು ಎದುರಿಸಿದ ರಾಥೋಡ್ 141 ರನ್ ಹೊಡೆದರು (18 ಬೌಂಡರಿ, 2 ಸಿಕ್ಸರ್). ಸಂಕ್ಷಿಪ್ತ ಸ್ಕೋರ್: ವಿದರ್ಭ 170 ಮತ್ತು 402 (ಯಶ್ ರಾಥೋಡ್ 141, ಅಮನ್ ಮೋಖಡೆ 59, ಅಕ್ಷಯ್ ವಾಡ್ಕರ್ 77, ಧ್ರುವ ಶೋರಿ 40, ಅನುಭವ್ ಅಗರ್ವಾಲ್ 92ಕ್ಕೆ 5, ಕುಲ್ವಂತ್ ಖೆಜೊÅàಲಿಯ 64ಕ್ಕೆ 2, ಕುಮಾರ ಕಾರ್ತಿಕೇಯ 76ಕ್ಕೆ 2). ಮಧ್ಯ ಪ್ರದೇಶ-252 ಮತ್ತು 6 ವಿಕೆಟಿಗೆ 228 (ಯಶ್ ದುಬೆ 97, ಹರ್ಷ ಗಾವಿÛ 67, ವೆಂಕಟೇಶ್ ಅಯ್ಯರ್ 19, ಅಕ್ಷಯ್ ವಖಾರೆ 38ಕ್ಕೆ 3, ಆದಿತ್ಯ ಸರ್ವಟೆ 51ಕ್ಕೆ 2, ಯಶ್ ಠಾಕೂರ್ 48ಕ್ಕೆ 1).