Advertisement

ಕರ್ನಾಟಕಕ್ಕೆ ರಾಜಸ್ಥಾನ್‌ ಎದುರಾಳಿ

12:40 AM Jan 11, 2019 | |

ಬೆಂಗಳೂರು:  ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಜ. 15ರಿಂದ ನಾಕೌಟ್‌ ಕದನ ಆರಂಭವಾಗಲಿದ್ದು, ಕರ್ನಾಟಕ ಮತ್ತು ರಾಜಸ್ಥಾನ್‌ ಮುಖಾಮುಖೀಯಾಗಲಿವೆ. ರಾಜಸ್ಥಾನ್‌ “ಸಿ’ ವಿಭಾಗದಲ್ಲಿ 51 ಅಂಕ ಸಂಪಾದಿಸಿ ಅಗ್ರಸ್ಥಾನದ ಗೌರವ ಪಡೆದಿತ್ತು. ಇದು 2018-19ರ ರಣಜಿ ಲೀಗ್‌ ಹಂತದಲ್ಲಿ ತಂಡವೊಂದು ಪಡೆದ ಗರಿಷ್ಠ ಅಂಕವಾಗಿದೆ.

Advertisement

ಇದೇ ವೇಳೆ ಗುರುವಾರ ಮುಗಿದ ಪಂದ್ಯದಲ್ಲಿ ವಿದರ್ಭ ವಿರುದ್ಧ ಮೊದಲ ಇನ್ನಿಂಗ್ಸ್‌ ಮುನ್ನಡೆಗಾಗಿ 3 ಅಂಕ ಪಡೆದ ಸೌರಾಷ್ಟ್ರ, “ಎಲೈಟ್‌ ಎ’ ವಿಭಾಗದ ದ್ವಿತೀಯ ಸ್ಥಾನದೊಂದಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಎರಡೂ ತಂಡಗಳು ತಲಾ 29 ಅಂಕ ಸಂಪಾದಿಸಿದವು. ವಿದರ್ಭ ರನ್‌ರೇಟ್‌ನಲ್ಲಿ ಮುನ್ನಡೆ ಸಾಧಿಸಿದ್ದರಿಂದ ಎ ಮತ್ತು ಬಿ ವಿಭಾಗಗಳೆರಡನ್ನೂ ಒಳಗೊಂಡಂತೆ ಅಗ್ರಸ್ಥಾನ ಅಲಂಕರಿಸಿತು.

ಇದೇ ವೇಳೆ ಕರ್ನಾಟಕದ ಕ್ವಾರ್ಟರ್‌ ಫೈನಲ್‌ ಪ್ರವೇಶವೂ ಅಧಿಕೃತಗೊಂಡಿತು (27 ಅಂಕ). ತಲಾ 26 ಅಂಕ ಸಂಪಾದಿಸಿದ ಕೇರಳ ಮತ್ತು ಗುಜರಾತ್‌ ಕೂಡ ನಾಕೌಟ್‌ಗೆ ಲಗ್ಗೆ ಇರಿಸಿದವು. ಬರೋಡ ಕೂಡ 26 ಅಂಕ ಗಳಿಸಿದರೂ ರನ್‌ರೇಟ್‌ನಲ್ಲಿ ಗುಜರಾತ್‌ಗಿಂತ ಹಿಂದುಳಿದು ನಾಕೌಟ್‌ ಅವಕಾಶವನ್ನು ಕಳೆದುಕೊಂಡಿತು.

ಉಳಿದಂತೆ ವಿದರ್ಭ-ಉತ್ತರಾಖಂಡ್‌, ಸೌರಾಷ್ಟ್ರ-ಉತ್ತರಪ್ರದೇಶ ಮತ್ತು ಕೇರಳ-ಗುಜರಾತ್‌ ತಂಡಗಳು ಕ್ವಾರ್ಟರ್‌ ಫೈನಲ್‌ನಲ್ಲಿ ಎದುರಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next