Advertisement

ಜಮ್ಮು ವಿರುದ್ಧ ಜಬರ್ದಸ್ತ್ ಪ್ರದರ್ಶನ: ಕರ್ನಾಟಕ ವಿಶ್ವಾಸ

09:58 AM Feb 21, 2020 | Sriram |

ಜಮ್ಮು: ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ನಾಕೌಟ್‌ ಹಣಾಹಣಿಗೆ ದೇಶದ 4 ಮೈದಾನಗಳು ಸಜ್ಜಾಗಿ ನಿಂತಿವೆ. ಗುರುವಾರದಿಂದ ಏಕಕಾಲಕ್ಕೆ 5 ದಿನಗಳ ಕ್ವಾರ್ಟರ್‌ ಫೈನಲ್‌ ಮುಖಾಮುಖೀ ಆರಂಭವಾಗಲಿದ್ದು, ಜಮ್ಮುವಿನಲ್ಲಿ ನೆಚ್ಚಿನ ಕರ್ನಾಟಕ ಆತಿಥೇಯ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ.

Advertisement

ಕರ್ನಾಟಕ ಲೀಗ್‌ ಹಂತದಲ್ಲಿ ಎಲೈಟ್‌ ಎ-ಬಿ ವಿಭಾಗದ ಅಜೇಯ ತಂಡವಾದರೆ, ಆಲ್‌ರೌಂಡರ್‌ ಪರ್ವೇಜ್‌ ರಸೂಲ್‌ ನಾಯಕತ್ವದ ಜಮ್ಮು ಕಾಶ್ಮೀರ ಎಲೈಟ್‌ ಸಿ ವಿಭಾಗದ ಅಗ್ರಸ್ಥಾನಿ ಯಾಗಿದೆ. ಮೇಲ್ನೋಟಕ್ಕೆ ಕರ್ನಾಟಕ ಅನುಭವಿ ತಂಡವಾದರೆ, ಜಮ್ಮು ಕಾಶ್ಮೀರ ಹೊಸ ಹುರುಪಿನ ಯುವ ಪಡೆಯಾಗಿ ಗೋಚರಿಸುತ್ತದೆ.

ಕಪ್ತಾನ ರಸೂಲ್‌ 403 ರನ್‌ ಪೇರಿಸುವ ಜತೆಗೆ 25 ವಿಕೆಟ್‌ ಕಿತ್ತು ಆಲ್‌ರೌಂಡ್‌ ಪ್ರದರ್ಶನ ನೀಡಿದ್ದಾರೆ. ಅಬ್ದುಲ್‌ ಸಮದ್‌ ಪ್ರಚಂಡ ಫಾರ್ಮ್ ನಲ್ಲಿರುವ ಮತ್ತೂಬ್ಬ ಆಟಗಾರ. ಅವರು ಲೀಗ್‌ನಲ್ಲಿ 547 ರನ್‌ ಪೇರಿಸಿ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಲೀಗ್‌ ಹಂತದಲ್ಲಿ ಅದು ಹರ್ಯಾಣ ವಿರುದ್ಧವಷ್ಟೇ ಸೋತಿತ್ತು.

ಕರ್ನಾಟಕಕ್ಕೆ ಪಾಂಡೆ ಬಲ
ನ್ಯೂಜಿಲ್ಯಾಂಡ್‌ ಪ್ರವಾಸ ಮುಗಿಸಿ ಬಂದಿರುವ ಮನೀಷ್‌ ಪಾಂಡೆ ಮರಳಿ ತಂಡವನ್ನು ಸೇರಿಕೊಂಡಿರುವುದರಿಂದ ಕರ್ನಾಟಕದ ಬ್ಯಾಟಿಂಗ್‌ ವಿಭಾಗಕ್ಕೆ ಹೆಚ್ಚಿನ ಬಲ ಬಂದಿದೆ. ಸಮರ್ಥ್, ಪಡಿಕ್ಕಲ್‌, ನಾಯರ್‌, ದೇಶಪಾಂಡೆ ಬ್ಯಾಟಿಂಗ್‌ ವಿಭಾಗದ ಉಳಿದ ಪ್ರಮುಖರು. ಸ್ಪಿನ್‌ ಆಲ್‌ರೌಂಡರ್‌ಗಳಾದ ಕೆ. ಗೌತಮ್‌, ಶ್ರೇಯಸ್‌ ಗೋಪಾಲ್‌; ವೇಗಿಗಳಾದ ಮಿಥುನ್‌, ಪ್ರಸಿದ್ಧ್ ಕೃಷ್ಣ, ಮೋರೆ ಅವರನ್ನೊಳಗೊಂಡ ತಂಡ ಹೆಚ್ಚು ವೈವಿಧ್ಯಮಯವೂ ಹೌದು.

ಕರ್ನಾಟಕ ಲೀಗ್‌ ಹಂತದ 8 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದೆ. ಸೋಲಿನ ಮುಖ ಕಂಡಿಲ್ಲ. ಉಳಿದ ನಾಲ್ಕನ್ನು ಡ್ರಾ ಮಾಡಿಕೊಂಡಿದೆ. ಸೋಲನ್ನು ತಪ್ಪಿಸಿಕೊಂಡದ್ದು, ಸೋಲಲಿರುವ ಪಂದ್ಯವನ್ನು ಗೆದ್ದದ್ದು ಕರ್ನಾಟಕದ ಅಭಿಯಾನದ ಪ್ರಮುಖ ಅಂಶಗಳು.

Advertisement

ಈ ಬಾರಿ ದೊಡ್ಡ ದೊಡ್ಡ ತಂಡಗಳು ನಾಕೌಟ್‌ ರೇಸ್‌ನಿಂದ ಹೊರಬಿದ್ದಿದ್ದು, ಕೆಲವೇ ಬಲಿಷ್ಠ ತಂಡಗಳು ಉಳಿದು ಕೊಂಡಿವೆ. ಹೀಗಾಗಿ ಕ್ವಾರ್ಟರ್‌ ಫೈನಲ್‌ನಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಹೆಚ್ಚು ಎಚ್ಚರಿಕೆಯಿಂದ ಆಡಬೇಕಾದ ಅಗತ್ಯವಿದೆ.

ರಣಜಿ ಸಂಭಾವ್ಯ ತಂಡಗಳು

ಕರ್ನಾಟಕ:
ಆರ್‌. ಸಮರ್ಥ್, ದೇವದತ್ತ ಪಡಿಕ್ಕಲ್‌, ಮನೀಷ್‌ ಪಾಂಡೆ, ಕರುಣ್‌ ನಾಯರ್‌ (ನಾಯಕ), ಪವನ್‌ ದೇಶಪಾಂಡೆ, ಬಿ.ಆರ್‌. ಶರತ್‌, ಶ್ರೇಯಸ್‌ ಗೋಪಾಲ್‌, ಕೃಷ್ಣಪ್ಪ ಗೌತಮ್‌, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಪ್ರಸಿದ್ಧ್ ಕೃಷ್ಣ/ಪ್ರತೀಕ್‌ ಜೈನ್‌.

ಜಮ್ಮು ಕಾಶ್ಮಿರ:
ಸೂರ್‍ಯಾಂಶ್‌ ರೈನಾ, ಜಿಯಾದ್‌ ಮಗ್ರಿ, ಶುಭಂ ಖಜುರಿಯಾ, ಶುಭಂ ಪುಂದಿರ್‌, ಪರ್ವೇಜ್‌ ರಸೂಲ್‌ (ನಾಯಕ), ಅಬ್ದುಲ್‌ ಸಮದ್‌, ಫ‌ಝಿಲ್‌ ರಶೀದ್‌, ಆಕಿಬ್‌ ನಬಿ, ರಾಮ್‌ ದಯಾಲ್‌, ಅಬಿದ್‌ ಮುಷ್ತಾಕ್‌/ಉಮರ್‌ ನಜೀರ್‌ ಮಿರ್‌, ಮುಜ¤ಬಾ ಯೂಸುಫ್.

Advertisement

Udayavani is now on Telegram. Click here to join our channel and stay updated with the latest news.

Next