Advertisement

Ranji Trophy Cricket: ಕರ್ನಾಟಕ – ರೈಲ್ವೇಸ್‌ ಹೋರಾಟ

12:21 AM Feb 02, 2024 | Team Udayavani |

ಸೂರತ್‌: ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ ಐದನೇ ಸುತ್ತಿನ ಪಂದ್ಯಗಳು ಶುಕ್ರವಾರದಿಂದ ವಿವಿಧ ತಾಣಗಳಲ್ಲಿ ಆರಂಭವಾಗಲಿವೆ. ಸೂರತ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ “ಸಿ’ ಬಣದ ಅಗ್ರಸ್ಥಾನಿ ಕರ್ನಾಟಕವು ರೈಲ್ವೇಸ್‌ ತಂಡವನ್ನು ಎದುರಿಸಲಿದೆ.

Advertisement

ತ್ರಿಪುರ ವಿರುದ್ಧದ ಪಂದ್ಯದ ಬಳಿಕ ಸೂರತ್‌ಗೆ ತೆರಳಲು ವಿಮಾನವೇರಿದ ಬಳಿಕ ಅಸ್ವಸ್ಥರಾಗಿ ಅಗರ್ತಲಾದಲ್ಲಿ ಆಸ್ಪತ್ರೆಗೆ ದಾಖಲಾದ ಮಾಯಾಂಕ್‌ ಅಗರ್ವಾಲ್‌ ಅವರು ರೈಲ್ವೇಸ್‌ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ. ಅವರ ಬದಲಾಗಿ ನಿಕಿನ್‌ ಜೋಸ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡ ರಲ್ಲಿ ಜಯ ಸಾಧಿಸಿದ್ದ ಕರ್ನಾಟಕ ತಂಡವು ಇನ್ನೆರಡರಲ್ಲಿ ಸೋಲು, ಡ್ರಾ ಸಾಧಿಸಿ ಒಟ್ಟಾರೆ 15 ಅಂಕ ಸಂಪಾದಿಸಿದೆ. ತಮಿಳುನಾಡು ಕೂಡ ಎರಡರಲ್ಲಿ ಜಯಿಸಿದ್ದು 15 ಅಂಕ ಹೊಂದಿದೆ. ಆದರೆ ಕರ್ನಾಟಕ ಉತ್ತಮ ರನ್‌ಧಾರಣೆಯ ಆಧಾರ ದಲ್ಲಿ ಅಗ್ರಸ್ಥಾನದಲ್ಲಿದೆ.

ಮುಂದಿನ ಹಂತಕ್ಕೇರಬೇಕಾದರೆ ಕರ್ನಾಟಕ ತಂಡವು ಮುಂದಿನ ಮೂರು ಪಂದ್ಯಗಳಲ್ಲಿ ಬಹಳ ಎಚ್ಚ ರಿಕೆ ಯಿಂದ ಆಡಬೇಕಾಗಿದೆ. ರೈಲ್ವೇಸ್‌ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ದಲ್ಲಿದ್ದರೆ ಗುಜರಾತ್‌ 13 ಅಂಕ ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಕರ್ನಾಟಕ ಮುಂದಿ ನೆರಡು ಪಂದ್ಯಗಳಲ್ಲಿ ರೈಲ್ವೇಸ್‌ ಮತ್ತು ತಮಿಳುನಾಡು ವಿರುದ್ಧ ಆಡ ಬೇಕಾ ಗಿದೆ. ಇಲ್ಲಿ ಕರ್ನಾಟಕ ಗೆಲುವಿಗೆ ಪ್ರಯತ್ನ ಪಡಬೇಕಾಗಿದೆ.

Advertisement

ಮುಂಬಯಿ ತಂಡಕ್ಕೆ ಮರಳಿದ ಪೃಥ್ವಿ ಶಾ
ಕೋಲ್ಕತಾ: ಗಾಯದ ಸಮಸ್ಯೆ ಯಿಂದ ಚೇತರಿಸಿಕೊಂಡು ರಾಷ್ಟ್ರೀಯ
ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಯಿಂದ ಆಡಲು ಅನುಮತಿ ಪಡೆದಿರುವ ಪೃಥ್ವಿ ಶಾ ಅವರನ್ನು ಮುಂಬಯಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಫೆ. 2ರಿಂದ ನಡೆಯಲಿರುವ ಬಂಗಾಲ ವಿರುದ್ಧದ ಪಂದ್ಯದಲ್ಲಿ ರಹಾನೆ ನೇತೃತ್ವದ ತಂಡದಲ್ಲಿ ಶಾ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next