Advertisement
ಕರ್ನಾಟಕವೀಗ 25 ಅಂಕ ಗಳಿಸಿ 5ನೇ ಸ್ಥಾನದಲ್ಲಿದೆ. ಹೀಗಾಗಿ ಕ್ವಾರ್ಟರ್ ಫೈನಲ್ ಕನಸು ಜೀವಂತವಾಗಿದೆ. ಆದರೆ ಬರೋಡ ಈಗಾಗಲೇ ಕೂಟದಿಂದ ಹೊರಬಿದ್ದಿದೆ. ಮತ್ತೂಂದು ಕಡೆ 24 ಅಂಕ ಗಳಿಸಿ 6ನೇ ಸ್ಥಾನದಲ್ಲಿರುವ ಪಂಜಾಬ್ ಕೂಡ ನಾಕೌಟ್ ರೇಸ್‌ನಲ್ಲಿದೆ. ಅದು ಪಟಿಯಾಲದಲ್ಲಿ ಬಂಗಾಲವನ್ನು ಎದುರಿಸಲಿದೆ. ಎರಡೂ ತಂಡಗಳಿಗೂ ಈ ಪಂದ್ಯ ಮುಂದಿನ ಹಂತಕ್ಕೇರಲು ಮಹತ್ವದ್ದಾಗಿದೆ. ಹೀಗಾಗಿ ಕರ್ನಾಟಕ ಸೋಲುಂಡರೆ ಅಥವಾ ಮೊದಲ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದರೆ ಕ್ವಾರ್ಟರ್ ಫೈನಲ್ ಅವಕಾಶ ಕಳೆದುಕೊಳ್ಳಬೇಕಾಗಿ ಬರಬಹುದು. ಈ ಗುಂಪಿನಿಂದ ಅಗ್ರಸ್ಥಾನ ಪಡೆದ 5 ತಂಡಗಳಷ್ಟೇ ಮುಂದಿನ ಸುತ್ತು ತಲುಪಲಿವೆ.
Related Articles
ಆರಂಭದ 2 ಪಂದ್ಯಗಳಲ್ಲಿ ಬರೋಡ ಉತ್ತಮ ಆಟ ಪ್ರದರ್ಶಿಸಿತ್ತು. ಆದರೆ ಅನಂತರ ಡ್ರಾ ಹಾಗೂ ಸೋಲುಗಳು ಬರೋಡವನ್ನು ಹಳಿ ತಪ್ಪಿಸಿದವು. ಸೌರಾಷ್ಟ್ರ ವಿರುದ್ಧ 4 ವಿಕೆಟ್ ಸೋಲು, ತಮಿಳುನಾಡು ವಿರುದ್ಧ ಇನ್ನಿಂಗ್ಸ್ ಸೋಲು ಅನುಭವಿಸಿದ್ದು ಬರೋಡಕ್ಕೆ ಭಾರೀ ಹೊಡೆತ ನೀಡಿತು. ಕೃಣಾಲ್ ಪಾಂಡ್ಯ ಪಡೆಗೆ ಇದು ಕೇವಲ ಔಪಚಾರಿಕ ಪಂದ್ಯ
Advertisement