Advertisement
ತ್ರಿಪುರ ವಿರುದ್ಧದ ರಣಜಿ ಪಂದ್ಯ ಮುಗಿಸಿ ಸೂರತ್‌ಗೆ ವಿಮಾನದಲ್ಲಿ ಪ್ರಯಾಣಿಸುವಾಗ ಪಾನೀಯ ವೊಂದನ್ನು ಸೇವಿಸಿದ ಪರಿಣಾಮ ಅಗರ್ವಾಲ್ ತೀವ್ರ ಅಸ್ವಸ್ಥರಾಗಿದ್ದರು. ಅಗರ್ತಲಾ ಆಸ್ಪತ್ರೆಗೆ ದಾಖಲಾದ ಬಳಿಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದರು. ಇದರಿಂದ ರೈಲ್ವೇಸ್ ಎದುರಿನ ರಣಜಿ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ.
ಕರ್ನಾಟಕ – ತಮಿಳುನಾಡು ನಡು ವಿನ ರಣಜಿ ಪಂದ್ಯ ಫೆ. 9ರಂದು ಚೆನ್ನೈಯಲ್ಲಿ ಆರಂಭವಾಗಲಿದೆ. “ಸಿ’ ಗುಂಪಿನಲ್ಲಿ ಎರಡೂ ತಂಡಗಳು ತಲಾ 21 ಅಂಕ ಹೊಂದಿವೆ. ಆದರೆ ರನ್‌ರೇಟ್ ಲೆಕ್ಕಾಚಾರದಲ್ಲಿ ತಮಿಳುನಾಡು ಅಗ್ರಸ್ಥಾನಿಯಾಗಿದೆ (0.597). ಕರ್ನಾ ಟಕ 0.435 ರನ್‌ರೇಟ್ ಹೊಂದಿದೆ. ಪಡಿಕ್ಕಲ್ ಕೂಡ ಲಭ್ಯ
ಮಾಯಾಂಕ್ ಅಗರ್ವಾಲ್ ಪುನರಾಗ ಮನದಿಂದ ಕರ್ನಾಟಕದ ಬ್ಯಾಟಿಂಗ್ ಸರದಿ ಬಲಿಷ್ಠಗೊಳ್ಳಲಿದೆ. ಜತೆಗೆ ಇನ್‌ಫಾರ್ಮ್ ಬ್ಯಾಟರ್ ದೇವದತ್ತ ಪಡಿಕ್ಕಲ್ ಕೂಡ ಲಭ್ಯರಾಗುವರು. ಇಷ್ಟು ದಿನ ಅವರು ಭಾರತ “ಎ’ ತಂಡದ ಪರ ಆಡುತ್ತಿದ್ದರು. ಇವರಿಬ್ಬರಿಗಾಗಿ ಡೇಗ ನಿಶ್ಚಲ್ ಮತ್ತು ಅಭಿಷೇಕ್ ಶೆಟ್ಟಿ ಅವರನ್ನು ಕೈಬಿಡಲಾಗಿದೆ.
Related Articles
Advertisement
ಕೋಚ್: ಪಿ.ವಿ. ಶಶಿಕಾಂತ್