Advertisement

ರಣಜಿ: ಕರ್ನಾಟಕ-ಪುದುಚೇರಿ ಮುಖಾಮುಖಿ

10:31 PM Mar 02, 2022 | Team Udayavani |

ಚೆನ್ನೈ: ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ 3ನೇ ಸುತ್ತಿನ ಲೀಗ್‌ ಪಂದ್ಯ ಗುರುವಾರ ಆರಂಭವಾಗಲಿದೆ. ಇದು ಅಂತಿಮ ಹಾಗೂ ನಿರ್ಣಾಯಕ ಲೀಗ್‌ ಮುಖಾಮುಖಿಯಾಗಿದ್ದು, ಕೆಲವು ದೊಡ್ಡ ತಂಡಗಳಿಗೆ ಭಾರೀ ಸವಾಲಾಗಿ ಕಾಡಲಿದೆ.

Advertisement

ಗ್ರೂಪ್‌ನಲ್ಲಿ ಅಗ್ರಸ್ಥಾನ ಪಡೆದ ತಂಡವಷ್ಟೇ ಕ್ವಾರ್ಟರ್‌ ಪ್ರವೇಶಿಸುವುದರಿಂದ ಇಲ್ಲಿ ಗೆಲುವು ಅನಿವಾರ್ಯ ಎಂಬಂಥ ಪರಿಸ್ಥಿತಿ ಇದೆ. ಮುಖ್ಯವಾಗಿ ರಣಜಿ ಕಿಂಗ್‌ ಮುಂಬಯಿ ಇಂಥದೊಂದು ಒತ್ತಡದಲ್ಲಿದೆ.

9 ಅಂಕಗಳೊಂದಿಗೆ “ಸಿ’ ವಿಭಾಗದ ಅಗ್ರಸ್ಥಾನಿಯಾಗಿರುವ ಕರ್ನಾಟಕ ದುರ್ಬಲ ಪುದುಚೇರಿಯನ್ನು ಎದುರಿಸಲಿದೆ. ಈ ತಂಡವನ್ನು ಮಣಿಸುವುದು ಮನೀಷ್‌ ಪಾಂಡೆ ಪಡೆಗೆ ದೊಡ್ಡ ಸವಾಲೇನೂ ಅಲ್ಲ. ಕರ್ನಾಟಕ ಗೆಲುವು ಹೊರತುಪಡಿಸಿ ಬೇರೆ ಯಾವುದೇ ಫ‌ಲಿತಾಂಶವನ್ನು ದಾಖಲಿಸದೆ ಹೋದರೆ ನಿರಾಯಾಸವಾಗಿ ನಾಕೌಟ್‌ ಪ್ರವೇಶಿಸಲಿದೆ.

“ಸಿ’ ವಿಭಾಗದ ಇನ್ನೊಂದು ಪಂದ್ಯ ಜಮ್ಮು ಕಾಶ್ಮೀರ-ರೈಲ್ವೇಸ್‌ ನಡುವೆ ನಡೆಯಲಿದೆ. ಇವು ಕ್ರಮವಾಗಿ 6 ಹಾಗೂ 4 ಅಂಕಗಳನ್ನು ಹೊಂದಿವೆ. ಎರಡೂ ಸಮಬಲದ ತಂಡಗಳು. ಯಾರೇ ಗೆದ್ದರೂ ಕರ್ನಾಟಕವನ್ನು ಮೀರಿಸುವುದು ಸುಲಭವಲ್ಲ.

ಮುಂಬಯಿ-ಸೌರಾಷ್ಟ ರೇಸ್‌
“ಡಿ’ ವಿಭಾಗದಲ್ಲಿರುವ ಮುಂಬಯಿ ಕೊನೆಯ ಲೀಗ್‌ ಪಂದ್ಯದಲ್ಲಿ ಒಡಿಶಾವನ್ನು ಎದುರಿಸಲಿದೆ. ಇನ್ನೊಂದು ಪಂದ್ಯದಲ್ಲಿ ಸೌರಾಷ್ಟ್ರ-ಗೋವಾ ಮುಖಾಮುಖೀ ಆಗಲಿವೆ. ಇಲ್ಲಿ ಮುಂಬಯಿ (9 ಅಂಕ) ಮತ್ತು ಹಾಲಿ ಚಾಂಪಿಯನ್‌ ಸೌರಾಷ್ಟ್ರ (8 ಅಂಕ) ನಡುವೆ ನಾಕೌಟ್‌ಗೆ ತೀವ್ರ ಸ್ಪರ್ಧೆ ಇದೆ.

Advertisement

ಸೌರಾಷ್ಟ್ರ ವಿರುದ್ಧ ಇನ್ನಿಂಗ್ಸ್‌ ಲೀಡ್‌ ಗಳಿಸಿರುವ ಮುಂಬಯಿ ತಂಡ ಗೋವಾವನ್ನು ಸೋಲಿಸಿದೆ. ಇನ್ನು ಒಡಿಶಾ ವಿರುದ್ಧವೂ ಗೆಲುವು ಅನಿವಾರ್ಯ. ಅಕಸ್ಮಾತ್‌ ಈ ಪಂದ್ಯ ಡ್ರಾಗೊಂಡು, ಗೋವಾವನ್ನು ಸೌರಾಷ್ಟ್ರ ಮಣಿಸಿದ್ದೇ ಆದರೆ ಆಗ ಮುಂಬಯಿ ಹೊರಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next