2014-15ರಲ್ಲಿ ತಮಿಳುನಾಡನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದ ಕರ್ನಾಟಕವು ಆಬಳಿಕ ಫೈನಲ್‌ಗೂ ಏರಿಲ್ಲ ಎನ್ನುವು ದನ್ನು ಇಲ್ಲಿ ಗಮನಿಸಬೇಕು. ಇನ್ನು ವಿಜಯ್ ಹಜಾರೆ (ಏಕದಿನ), ಸೈಯದ್ ಮುಷ್ತಾಕ್ ಅಲಿ (ಟಿ20) ಕೂಟಗಳಲ್ಲೂ ಇತ್ತೀಚೆಗಿನ ವರ್ಷಗಳಲ್ಲಿ ಕರ್ನಾಟಕಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಹೆಚ್ಚು ಅಂದರೆ ಸೆಮಿಫೈನಲ್‌ನಲ್ಲೇ ಹೊರಬೀಳು ವುದು ಜಾಸ್ತಿಯಾಗಿದೆ.
Advertisement
ಹೆಚ್ಚು ಕಡಿಮೆ ಶನಿವಾರವೇ ಸೌರಾಷ್ಟ್ರ ಫೈನಲ್‌ಗೇರುವುದು ಖಚಿತವಾಗಿತ್ತು. ಕರ್ನಾಟಕದ ಮುಂದೆ ಇದ್ದಿದ್ದು ಎರಡೇ ಆಯ್ಕೆ. ಕಷ್ಟಪಟ್ಟು ಆಡಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು, ಇಲ್ಲವೇ ಸೋಲುವುದು. ಈ ಎರಡೂ ಸಾಧ್ಯತೆಗಳಲ್ಲಿ ಸೌರಾಷ್ಟ್ರವೇ ಫೈನಲ್‌ಗೇರು ತ್ತಿತ್ತು. ಗೆದ್ದರೆ ಮಾತ್ರ ಕರ್ನಾಟಕಕ್ಕೆ ಫೈನಲಿ ಗೇರುವ ಅವಕಾಶವಿತ್ತು. ಆದರೆ ಅದು ಬಾಕಿಯಿದ್ದ ಒಂದು ದಿನದಲ್ಲಿ ಅಸಾ ಧ್ಯವೇ ಎನ್ನಬಹುದಾದ ಮಟ್ಟದಲ್ಲಿತ್ತು. ಬಹುಶಃ 2ನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಇನ್ನೊಂದು 100 ರನ್ ಹೆಚ್ಚಿಗೆ ಗಳಿಸಿದ್ದರೆ ಗೆಲ್ಲುವ ಅವಕಾಶವಿದ್ದೇ ಇತ್ತು. ಆದರೆ ಪಿಚ್ ವರ್ತಿಸುತ್ತಿದ್ದ ರೀತಿ ನೋಡಿದರೆ 2ನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 234 ರನ್ ಗಳಿಸಿದ್ದೂ ದೊಡ್ಡ ಸಾಧನೆ.
Related Articles
Advertisement
ಫೈನಲಿಗೆ ಜೈದೇವ್ ಲಭ್ಯಕೋಲ್ಕತಾ: ವೇಗಿ ಜೈದೇವ್ ಉನಾದ್ಕತ್ ಅವರು ಕೋಲ್ಕತಾದಲ್ಲಿ ಫೆ. 16ರಿಂದ ಆರಂಭವಾಗುವ ಬಂಗಾಲ ವಿರುದ್ಧದ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ತಂಡದ ನಾಯಕತ್ವ ವಹಿಸಲು ಲಭ್ಯರಿರಲಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಭಾರತೀಯ ತಂಡದಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ರಣಜಿ ಟ್ರೋಫಿ ಫೈನಲ್‌ನಲ್ಲಿ ಆಡಲು ಜೈದೇವ್ ಬಯಸಿದ್ದರು. ಇದಕ್ಕಾಗಿ ಅವರು ಭಾರತೀಯ ತಂಡ ಆಡಳಿತಕ್ಕೆ ಮನವಿ ಮಾಡಿದ್ದರು. ಇದಕ್ಕಿಂತ ಮೊದಲು ಅವರ ಬಿಡುಗಡೆಗೆ ಆಯ್ಕೆಗಾರರು ಒಪ್ಪಿಗೆ ಸೂಚಿಸಿದ್ದರು. ಹಾಲಿ ಚಾಂಪಿಯನ್ ಮಧ್ಯಪ್ರದೇಶಕ್ಕೆ ಸೋಲು
ಇಂಧೋರ್: ಬಂಗಾಲ ತಂಡದ ಆಲ್‌ರೌಂಡ್ ಪ್ರದರ್ಶನದಿಂದಾಗಿ ಹಾಲಿ ಚಾಂಪಿಯನ್ ಮಧ್ಯ ಪ್ರದೇಶ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಸೆಮಿಫೈನಲ್ ಪಂದ್ಯದಲ್ಲಿ 306 ರನ್ನುಗಳಿಂದ ಸೋಲನ್ನು ಕಂಡಿದೆ. 1989-90ರ ಋತುವಿನಲ್ಲಿ ಈ ಹಿಂದೆ ಪ್ರಶಸ್ತಿ ಜಯಿಸಿದ್ದ ಬಂಗಾಲ ತಂಡವು ಫೈನಲ್‌ನಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ಸೌರಾಷ್ಟ್ರಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದ ಬಂಗಾಲ ತಂಡವು ಫೈನಲ್ ಪಂದ್ಯದ ಆತಿಥ್ಯ ವಹಿಸಲಿದೆ. ಇದು 2020ರ ಫೈನಲ್‌ನ ಪುನರಾವರ್ತನೆಯಾಗಲಿದೆ. ಆಕಾಶ್‌ದೀಪ್ ಅವರ ಅಮೋಘ ಬೌಲಿಂಗ್ ನಿರ್ವಹಣೆಯಿಂದಾಗಿ ಬಂಗಾಲ ತಂಡವು ಕಳೆದ ಮೂರು ಋತುಗಳಲ್ಲಿ ಎರಡನೇ ಬಾರಿ ಫೈನಲಿಗೇರಿದ ಸಾಧನೆ ಮಾಡಿತು. ಆಕಾಶ್ ಅವರಲ್ಲದೇ ಅನುಸ್ತುಪ್ ಮಜುಂದಾರ್ ಮತ್ತು ಸುದೀಪ್ ಕುಮಾರ್ ಘರಾಮಿ ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ್ದರು. ಅವರಿಬ್ಬರು ಅನುಕ್ರಮವಾಗಿ 200 ಮತ್ತುಎ 153 ರನ್ ಗಳಿಸಿದ್ದರಿಂದ ಬಂಗಾಲ ಮೊದಲ ಇನ್ನಿಂಗ್ಸ್‌ನಲ್ಲಿ 438 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.
ಪ್ರದಿಪ್ತ ಪ್ರಾಮಾಣಿಕ್ ಅವರ ಆಲ್‌ರೌಂಡ್ ನಿರ್ವಹಣೆ ಬಂಗಾಲದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅಜೇಯ 60 ರನ್ ಗಳಿಸಿದ್ದ ಅವರು ಮಧ್ಯಪ್ರದೇಶದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಿತ್ತು ಗಮನ ಸೆಳೆದರು.
ಅಂತಿಮ ದಿನವಾದ ರವಿವಾರ ಬಂಗಾಲ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 279 ರನ್ ಗಳಿಸಿತ್ತು. ಇದರಿಂದ ಮಧ್ಯಪ್ರದೇಶ ಗೆಲ್ಲಲು 548 ರನ್ ಗಳಿಸುವ ಗುರಿ ಪಡೆದಿತ್ತು. ಆದರೆ ಮಧ್ಯಪ್ರದೇಶ 39.5 ಓವರ್‌ಗಳಲ್ಲಿ 241 ರನ್ನಿಗೆ ಆಲೌಟಾದ ಕಾರಣ ಬಂಗಾಲ 306 ರನ್ನುಗಳಿಂದ ಜ¿¸ಭೇರಿ ಬಾರಿಸಿತು. ಸಂಕ್ಷಿಪ್ತ ಸ್ಕೋರು: ಬಂಗಾಲ 438 ಮತ್ತು 279; ಮಧ್ಯ ಪ್ರದೇಶ 170 ಮತ್ತು 241 (ರಜತ್ ಪಟಿದಾರ್ 52, ಪ್ರದಿಪ್ತ ಪ್ರಾಮಾಣಿಕ್ 51ಕ್ಕೆ 5, ಮುಕೇಶ್ ಕುಮಾರ್ 35ಕ್ಕೆ 2).