Advertisement
ಜಾರ್ಖಂಡ್ ಎದುರಿನ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ಅಂತಿಮ ದಿನವಾದ ಶುಕ್ರವಾರ ಮನೋಜ್ ತಿವಾರಿ 5ನೇ ಕ್ರಮಾಂಕ ದಲ್ಲಿ ಆಡಲಿಳಿದು 136 ರನ್ ಬಾರಿಸಿದರು. ಮಮತಾ ಬ್ಯಾನರ್ಜಿ ಸರಕಾರದಲ್ಲಿ ಕ್ರೀಡಾ ಸಚಿವರಾಗಿ ಕರ್ತವ್ಯ ನಿಭಾಯಿಸುತ್ತಿರುವ 36 ವರ್ಷದ ತಿವಾರಿ, 185 ಎಸೆತಗಳಿಂದ ಈ ಅಮೋಘ ಇನ್ನಿಂಗ್ಸ್ ಕಟ್ಟಿದರು. ಸಿಡಿಸಿದ್ದು 19 ಫೋರ್ ಹಾಗೂ 2 ಸಿಕ್ಸರ್. ಅಂತಿಮವಾಗಿ ರನೌಟ್ ಆಗಿ ನಿರ್ಗಮಿ ಸಿದರು. ಬಂಗಾಲದ ಮೊದಲ ಇನ್ನಿಂಗ್ಸ್ ನಲ್ಲಿ ತಿವಾರಿ 73 ರನ್ ಬಾರಿಸಿದ್ದರು.
Related Articles
2021ರ ವಿಧಾನಸಭಾ ಚುನಾವಣೆ ಯಲ್ಲಿ ಶಿಬ್‌ಪುರ್ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮನೋಜ್ ತಿವಾರಿ, ಬಿಜೆಪಿಯ ರತ್ನಿನ್ ಚಕ್ರವರ್ತಿ ವಿರುದ್ಧ ಗೆಲುವು ಸಾಧಿಸಿದ್ದರು. ರಾಜ್ಯದ ಕ್ರೀಡಾ ಸಚಿವರಾಗಿ ನೇಮಕಗೊಂಡರು.
Advertisement
ಮನೋಜ್ ತಿವಾರಿ ಕ್ರೀಡಾ ಸಚಿವರಾದ ಬಳಿಕ ಬಾರಿಸಿದ ಮೊದಲ ಸೆಂಚುರಿ ಇದಾಗಿದೆ. ಪ್ರಥಮ ದರ್ಜೆ ಕ್ರಿಕೆಟಿನ 28ನೇ ಶತಕ. ಇವರ ಕೊನೆಯ ಶತಕ 2019-20ರ ರಣಜಿ ಸೀಸನ್‌ನಲ್ಲಿ ಹೈದರಾಬಾದ್ ವಿರುದ್ಧ ದಾಖಲಾಗಿತ್ತು. ಅಂದು ಅಜೇಯ 303 ರನ್ ಹೊಡೆದಿದ್ದರು.
ತಿವಾರಿ ಭಾರತದ ಪರ 12 ಏಕದಿನ ಹಾಗೂ 3 ಟಿ20 ಪಂದ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. 98 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ. 2015ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಕೊನೆಯ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು.
ಸಂಕ್ಷಿಪ್ತ ಸ್ಕೋರ್: ಬಂಗಾಲ-7 ವಿಕೆಟಿಗೆ 773 ಡಿಕ್ಲೇರ್ ಮತ್ತು 7 ವಿಕೆಟಿಗೆ 318 (ಮನೋಜ್ ತಿವಾರಿ 136, ಶಾಬಾಜ್ ಅಹ್ಮದ್ 46, ಶಾಬಾಜ್ ನದೀಂ 59ಕ್ಕೆ 5). ಜಾರ್ಖಂಡ್-298.