Advertisement

ರಾಣಿಪುರಂ-ಎಡಕ್ಕಾನಂ :ಕೇಬಲ್‌ ಕಾರು,ಗ್ಲಾಸ್‌ ಹೌಸ್‌ ನಿರ್ಮಾಣ

12:30 AM Dec 29, 2018 | |

ಕಾಸರಗೋಡು: ಚಾರಣಧಾಮ ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವ ಕಾಸರಗೋಡು ಜಿಲ್ಲೆಯ ರಾಣಿಪುರ – ಎಡಕ್ಕಾನಂನಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುವ ಉದ್ದೇಶದಿಂದ ಕೇಬಲ್‌ ಕಾರ್‌ ಮತ್ತು ಗ್ಲಾಸ್‌ ಹೌಸ್‌ ನಿರ್ಮಾಣ ಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರ ನೇತೃತ್ವದಲ್ಲಿ ತಜ್ಞರ ತಂಡ ಎಡಕ್ಕಾನಂಗೆ ತೆರಳಿ ಸಾಧ್ಯತೆಯನ್ನು ಅವಲೋಕಿಸಿತು. ಈ ಯೋಜನೆಗೆ ಸುಮಾರು 100 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. 

Advertisement

ಎಡಕ್ಕಾನಂ-ರಾಣಿಪುರಂ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದ ಯೋಜನೆ ವರದಿ ಯನ್ನು  ಒಂದು ತಿಂಗಳೊಳಗೆ ಸಲ್ಲಿಸುವಂತೆ ಜಿಲ್ಲಾಧಿ ಕಾರಿ ಡಾ| ಡಿ. ಸಜಿತ್‌ಬಾಬು ಅವರು ತಾಂತ್ರಿಕ ತಜ್ಞರಿಗೆ ನಿರ್ದೇಶ ನೀಡಿದ್ದಾರೆ. ಅಲ್ಲದೆ ಎರಡು ತಿಂಗಳೊಳಗೆ ಸಮಗ್ರ ಯೋಜನೆಯ ರೂಪುರೇಷೆ (ಡಿ.ಪಿ.ಆರ್‌.) ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ಕಲ್ಲಿಕೋಟೆಯ ಪ್ರಶಾಂತ್‌ ಅಸೋಸಿಯೇಶನ್‌ಗೆ ಯೋಜನೆಯ ರೂಪುರೇಷೆ ತಯಾರಿಸುವ ಹೊಣೆಗಾರಿಕೆಯನ್ನು ವಹಿಸಿಕೊಡಲಾಗಿದೆ. 

ಕೇಬಲ್‌ ಕಾರ್‌ ನಿರ್ಮಾಣ
ಚಾರಣಧಾಮ ರಾಣಿಪುರಂ – ಎಡಕ್ಕಾನವನ್ನು ಜೋಡಿಸುವ ಕೇಬಲ್‌ ಕಾರ್‌ ನಿರ್ಮಿಸುವುದು ಯೋಜನೆಯ ಪ್ರಮುಖ ಗುರಿಯಾಗಿದೆ. ಇದಕ್ಕಾಗಿ 100 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ. ಇದಕ್ಕೆ ಹೊಂದಿಕೊಂಡು ಅನುಬಂಧ ಅಭಿವೃದ್ಧಿಯನ್ನು ನಡೆಸಲಾಗುವುದು. 

ರಾಣಿಪುರಂ-ಎಡಕ್ಕಾನಂ ಪ್ರವಾಸಿಗಳ ಸ್ವರ್ಗವನ್ನಾಗಿ ಪರಿವರ್ತಿಸುವ ಹಿನ್ನೆಲೆಯಲ್ಲಿ ಕಲ್ಲಿಕೋಟೆಯಿಂದ ಆಗಮಿಸಿದ ಶಿಲ್ಪಿಗಳೊಂದಿಗೆ ಜಿಲ್ಲಾಧಿಕಾರಿ ಸಾಧ್ಯತೆಯ ಬಗ್ಗೆ ಚರ್ಚಿಸಿದರು. ಪ್ರವಾಸೋದ್ಯಮ ಯೋಜನೆಯನ್ನು ಅಭಿವೃದ್ಧಿ ಪಡಿಸಲು  ರಾಣಿಪುರಂ-ಎಡಕ್ಕಾನಂ ಸೂಕ್ತ ಪ್ರದೇಶವೆಂದು ತೀರ್ಮಾನಕ್ಕೆ ಬರಲಾಯಿತು. 3 ಕಿ.ಮೀ. ದೂರದಿಂದ ಕೇಬಲ್‌ ಕಾರ್‌ ನಿರ್ಮಿಸಲಾಗುವುದು. ಅಲ್ಲದೆ ಸಾಹಸ ಕ್ರೀಡೆಗಳ ಉತ್ತೇಜನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಚಂಗನಶ್ಯೆàರಿಯ ಅಪ್ಲೈಡ್‌ ಪ್ರಾಪರ್ಟಿಸ್‌ ಆ್ಯಂಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ ಅ ಧಿಕಾರಿಗಳು ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರನ್ನು ತಿಂಗಳ ಹಿಂದೆ ಭೇಟಿ ಮಾಡಿ ಉಚಿತವಾಗಿ ಭೂ ಸ್ಥಳದ ರೇಖಾಚಿತ್ರವನ್ನು ಹಸ್ತಾಂತರಿಸಿದ್ದರು. 

ಕಾಸರಗೋಡು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕೆಂಬ ಉತ್ಸುಕತೆಯಲ್ಲಿರುವ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು, ಜಿಲ್ಲಾ ಟೂರಿಸಂ ಪ್ರೊಮೋಷನ್‌ ಕೌನ್ಸಿಲ್‌ ಪದಾಧಿಕಾರಿಗಳು ಸ್ಥಳ ಸಂದರ್ಶಿಸಿ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯತೆಯ ಬಗ್ಗೆ ವರದಿಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿದ್ದರು. ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಯೋಜನೆಗೆ ಹಸಿರು ನಿಶಾನೆ ತೋರಿದ್ದರಿಂದ ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ದಾರಿ ತೆರೆದಿತ್ತು. ಎಡಕ್ಕಾನದಲ್ಲಿ ಟಾಪ್‌ ಹಿಲ್‌ ಸ್ಟೇಶನ್‌, ಪ್ರವಾಸಿಗರಿಗೆ ವಸತಿ ಸೌಕರ್ಯ, ಪ್ರವಾಸಿಗರನ್ನು ಆಕರ್ಷಿಸಲು ಪಾರ್ಕ್‌ ನಿರ್ಮಾಣ ಮೊದಲಾದವು ಯೋಜನೆಯಲ್ಲಿದೆ. ಜಿಲ್ಲಾಧಿಕಾರಿಗಳೊಂದಿಗೆ ಡಿ.ಟಿ.ಪಿ.ಸಿ. ಪ್ರಬಂಧಕ ಪಿ. ಸುನಿಲ್‌ ಕುಮಾರ್‌ ಸಹಿತ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಎಡಕ್ಕಾನಂಗೆ ಭೇಟಿ ನೀಡಿದ ತಂಡದಲ್ಲಿದ್ದರು. 

Advertisement

ಅಧ್ಯಯನ ನಡೆದಿದೆ
ಪ್ರವಾಸೋದ್ಯಮ ಯೋಜನೆಯಡಿ ಚಾರಣಧಾಮದ ಬೆಟ್ಟ ಪ್ರದೇಶದಲ್ಲಿ ಗ್ಲಾಸ್‌ ಹೌಸ್‌ ನಿರ್ಮಾಣವಾಗಲಿದೆ. ಈ ಯೋಜನೆಗೆ ಪೂರಕವಾಗಿರುವ ಖಾಸಗಿ ಸಹಭಾಗಿತ್ವವನ್ನು ಡಿ.ಟಿ.ಪಿ.ಸಿ. ಈ  ಹಿಂದೆಯೇ ಅಪೇಕ್ಷಿಸಿತ್ತು. ಕಲ್ಲಿಕೋಟೆಯ ಖಾಸಗಿ ಸಂಸ್ಥೆ ಅ ಧಿಕೃತರು ರಾಣಿಪುರಕ್ಕೆ ಆಗಮಿಸಿ ಗ್ಲಾಸ್‌ ಹೌಸ್‌ ನಿರ್ಮಾಣ ಕಾರ್ಯದ ಬಗ್ಗೆ ಅಧ್ಯಯನ ನಡೆಸಿದ್ದಾರೆ. 
– ಪಿ.ಸುನಿಲ್‌ ಕುಮಾರ್‌, 
ಡಿ.ಟಿ.ಪಿ.ಸಿ ಪ್ರಬಂಧಕ. 

100 ಕೋ.ರೂ. ಸಮಗ್ರ ಅಭಿವೃದ್ಧಿ ಯೋಜನೆ 
ಜಿಲ್ಲೆಯ ಪ್ರವಾಸಿ ಕೇಂದ್ರ ಚಾರಣಧಾಮ ರಾಣಿಪುರಂ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. 100 ಕೋಟಿ ರೂ. ಮೊತ್ತದಲ್ಲಿ ಹೊಸ ಪ್ರವಾಸೋದ್ಯಮ ಯೋಜನೆ ಸಾಕಾರಗೊಳ್ಳಲಿದೆ. ಅಭಿವೃದ್ಧಿ ಯೋಜನೆಯ ಭಾಗವಾಗಿ ಚಾರಣಧಾಮದ ಸಮೀಪ ಕೇಬಲ್‌ ಕಾರ್‌ ಯಾತ್ರೆ ಮತ್ತು ಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಸುವ್ಯವಸ್ಥಿತ ಯೋಜನೆಯನ್ನು ರೂಪಿಸಲಾಗಿದೆ. ಕೇಬಲ್‌ ಕಾರ್‌ ಪಯಣಕ್ಕೆ ಪೂರಕವಾಗಿರುವ ಸ್ಥಳವನ್ನು ಗೊತ್ತುಪಡಿಸಲಾಗಿದ್ದು, ಟೂರಿಸಂ ಸರ್ಕ್ನೂಟ್‌ ಒಳಪಡುವಂತೆ ರಾಣಿಪುರಂ ಚಾರಣಧಾಮದ ಸಮೀಪದಲ್ಲಿರುವ ಏಳು ಎಕರೆ ಸ್ಥಳದಲ್ಲಿ ಹೊಸ ಪ್ರವಾಸಿ ಯೋಜನೆ ಅನಾವರಣಗೊಳ್ಳಲಿದೆ. 
– ಡಾ|ಡಿ.ಸಜಿತ್‌ಬಾಬು, 
ಕಾಸರಗೋಡು ಜಿಲ್ಲಾಧಿಕಾರಿ. 

Advertisement

Udayavani is now on Telegram. Click here to join our channel and stay updated with the latest news.

Next