Advertisement
ನಾಡೋಜ ಡಾ| ಪಾಟೀಲ ಪುಟ್ಟಪ್ಪನವರ ಹುಟ್ಟೂರಾದ ತಾಲೂಕಿನ ಹಲಗೇರಿ ಗ್ರಾಮದ ನಾಟಕ ರತ್ನ ದೊಡ್ಡ ಜಟ್ಟೆಪ್ಪನವರ ರಂಗ ಮಂದಿರದಲ್ಲಿ ಜನ್ಮ ಶತಮಾನೋತ್ಸವ ಸಮಿತಿ, ನಾಗರಿಕ ಸೇವಾ ಸಮಿತಿ, ಸ್ವಾಕರವೇ, ವಿಶ್ವ ಗುರು ಬಸವ ಸಮಿತಿ ಆಶ್ರಯದಲ್ಲಿ ಶನಿವಾರ ರಾತ್ರಿ ಹಿರಿಯ ಚೇತನ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣದ ಕನಸು ಕಂಡು ಅದು ಸಾಕಾರಗೊಂಡಾಗ ಸಂಭ್ರಮಿಸಿದವರು. ಆದರೆ, ಅವರೇ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕೆಂದು ಹೇಳಿದರೆಂಬ ಕೂಗು ಎದ್ದಿತ್ತು. ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಲೇ ಬಂದ ಪಾಪು ನಾಡನ್ನು ಇಬ್ಭಾಗ ಮಾಡಬೇಕೆಂಬ ಹುನ್ನಾರವಲ್ಲ. ಗುಟುರು ಹಾಕಿ ನ್ಯಾಯಸಮ್ಮತ ಪಾಲನ್ನು ಧಕ್ಕಿಸುವ ತಂತ್ರ ಎಂಬುದು ಇದೀಗ ಎಲ್ಲರಿಗೂ ತಿಳಿದಿದೆ ಎಂದು ನುಡಿದರು. ಉತ್ತರ ಕರ್ನಾಟಕಕ್ಕೆ ಏನಾದರೂ ಸವಲತ್ತುಗಳು ದೊರೆತಿವೆ ಎಂದರೆ ಅವು ಪಾಪು ಅವರ ಘರ್ಜನೆಯ ಫಲಶೃತಿಗಳೇ ಆಗಿವೆ. ಇಂದು ಅನೇಕ ಬುದ್ದಿವಂತರು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಓದಬೇಕು. ಏಕೆಂದರೆ ಇಂಗ್ಲಿಷ್ ಅನ್ನಕೊಡತಕ್ಕಂತಹ ಭಾಷೆ ಕನ್ನಡದಲ್ಲಿ ಓದಿದರೆ ಮಾತ್ರ ನಿಮ್ಮ ಮಕ್ಕಳಿಗೆ ಅನ್ನ ಸಿಗುತ್ತದೆ ಎಂಬ ಭಾವನೆ ಇದೆ ಎಂದರು.
Related Articles
Advertisement
ಇದೇ ಸಂದರ್ಭದಲ್ಲಿ ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು ಮತ್ತು ಅವರ ಕುರಿತು ಶಿಕ್ಷಕರು ಕವನ ವಾಚಿಸಿದರು.
ಸಾನ್ನಿಧ್ಯ ವಹಿಸಿದ್ದ ಗದಗ ಡಂಬಳ ತೊಂಟದಾರ್ಯ ಸಂಸ್ಥಾನಮಠದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ನಾಗರಾಜ ಹಳ್ಳಿಯವರು ನಾಡೋಜ ಡಾ| ಪಾಟೀಲ ಪುಟ್ಟಪ್ಪನವರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ ಬಿ.ಸಿ.ಪಾಟೀಲ, ಮಾಜಿ ಶಾಸಕ ಯು.ಬಿ.ಬಣಕಾರ, ಮಾಜಿ ಶಾಸಕ ಡಾ| ಬಿ.ಜಿ. ಪಾಟೀಲ, ಡಾ| ಬಸವರಾಜ ಕೇಲಗಾರ, ಗ್ರಾಪಂ ಅಧ್ಯಕ್ಷೆ ಲೀಲಾ ಮುದ್ದಪ್ಪಳವರ, ಜಿಪಂ ಸದಸ್ಯ ಶಿವಾನಂದ ಕನ್ನಪ್ಪಳವರ, ಎಪಿಎಂಸಿ ಅಧ್ಯಕ್ಷ ಸಿದ್ಧಲಿಂಗಪ್ಪ ಕುಡಗೊಲ, ಮಲ್ಲೇಶಪ್ಪ ಅರಕೇರಿ, ಉಮೇಶ ಗುರುಲಿಂಗಪ್ಪಗೌಡ್ರ, ವೀರನಗೌಡ ಪೊಲೀಸಗೌಡ್ರ, ನಂದೀಶಪ್ಪ ಗೌಡ್ರ, ಶೇಖಪ್ಪ ನರಸಗೊಂಡರ ಸೇರಿದಂತೆ ಮತ್ತಿತರರು ಇದ್ದರು.