Advertisement

ಭಾರತೀಯ ವನಿತಾ ಹಾಕಿ ತಂಡಕ್ಕೆ ಮರಳಿದ ರಾಣಿ

10:30 PM Apr 05, 2022 | Team Udayavani |

ನವದೆಹಲಿ: ವಿಶ್ವದ ನಂ.1 ನೆದರ್ಲೆಂಡ್‌ ವಿರುದ್ಧ ನಡೆಯಲಿರುವ ಮುಂಬರುವ ಎಫ್ಐಎಚ್‌ ಪ್ರೊ ಹಾಕಿ ಲೀಗ್‌ ಕೂಟದಲ್ಲಿ ಭಾಗವಹಿಸುವ 22 ಸದಸ್ಯರ ಭಾರತೀಯ ಮಹಿಳಾ ಹಾಕಿ ತಂಡವನ್ನು ಪ್ರಕಟಿಸಲಾಗಿದೆ.

Advertisement

ಗಾಯದ ಸಮಸ್ಯೆಯಿಂದ ಸುದೀರ್ಘ‌ ಸಮಯ ಹೊರಗುಳಿದಿದ್ದ ತಾರಾ ಸ್ಟ್ರೈಕರ್‌ ರಾಣಿ ರಾಮ್‌ಪಾಲ್‌ ಅವರು ತಂಡಕ್ಕೆ ಮರಳಿದ್ದಾರೆ. ತಂಡದಲ್ಲಿ ಇಬ್ಬರು ಹೊಸಬರಿದ್ದಾರೆ.

ಮಿಡ್‌ಫಿಲ್ಡರ್‌ ಮಹಿಮಾ ಚೌಧರಿ ಮತ್ತು ಸ್ಟ್ರೈಕರ್‌ ಐಶ್ವರ್ಯಾ ರಾಜೇಶ್‌ ಚವಾಣ್‌ ಅವರು ಹಿರಿಯರ ತಂಡದಲ್ಲಿ ಮೊದಲಾಗಿ ಆಡಲಿದ್ದಾರೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ಮತ್ತು ಶನಿವಾರ ನದರ್ಲೆಂಡ್‌ ವಿರುದ್ಧದ ಪಂದ್ಯ ನಡೆಯಲಿದೆ.

ಕಳೆದ ವರ್ಷ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ನಾಲ್ಕನೇ ಸ್ಥಾನ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಣಿ ಅವರು ಆಬಳಿಕ ತೊಡೆಸಂದು ಸಮಸ್ಯೆ ಹಾಗೂ ಇನ್ನಿತರೆ ಗಾಯಗಳ ಕಾರಣದಿಂದ ತಂಡದಿಂದ ಹೊರಗಿದ್ದರು.

ಇದನ್ನೂ ಓದಿ:50:50 ಅನುಪಾತ ಕೈಬಿಡಲಿರುವ ಸಿಬಿಎಸ್‌ಇ; 30:70 ಅನುಪಾತದಲ್ಲಿ ಕ್ರೋಢೀಕರಿಸಲು ಚಿಂತನೆ

Advertisement

ಗೋಲ್‌ಕೀಪರ್‌ ಸವಿತಾ ಅವರು ಭಾರತೀಯ ತಂಡವನ್ನು ಮುನ್ನಡೆಸಲಿದ್ದು ದೀಪ್‌ ಗ್ರೇಸ್‌ ಎಕ್ಕ ನೆರವು ನೀಡಲಿದ್ದಾರೆ. ಭಾರತವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಸಲಿಮಾ ಟೇಟೆ, ಶರ್ಮಿಳಾ ದೇವಿ ಮತ್ತು ಲಾಲ್‌ರೆಮಿಯಾಮಿ ಅವರ ಸೇವೆಯಿಂದ ವಂಚಿತವಾಗಲಿದೆ. ಈ ಮೂವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜೂನಿಯರ್‌ ವನಿತಾ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಭಾರತ
ಎಫ್ಐಎಚ್‌ ಪ್ರೊ ಹಾಕಿ ಲೀಗ್‌ನಲ್ಲಿ ಭಾರತೀಯ ವನಿತಾ ತಂಡವು ನಾಲ್ಕನೇ ಸ್ಥಾನದಲ್ಲಿದೆ. ಆಡಿದ ಆರು ಪಂದ್ಯಗಳಿಂದ ತಂಡವು 12 ಅಂಕ ಪಡೆದಿದೆ. ಇದೇ ವೇಳೆ ನದರ್ಲೆಂಡ್‌ ತಂಡವು ಆಡಿದ ಆರು ಪಂದ್ಯಗಳಿಂದ 17 ಅಂಕ ಪಡೆದು ಅಗ್ರಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next