ಕಳೆದ ವಾರ ಭಾರತದ ವನಿತಾ ತಂಡವನ್ನು ಪ್ರಕಟಿಸಲಾಗಿತ್ತಾದರೂ ನಾಯಕಿಯನ್ನು ಆಯ್ಕೆ ಮಾಡಿ ರಲಿಲ್ಲ. ರಾಣಿ ರಾಮ್‌ಪಾಲ್ ಅವರೇ ನಾಯಕಿಯಾಗುವುದು ಖಚಿತವಿತ್ತಾದರೂ ಇದನ್ನು ಅಧಿಕೃತ ಗೊಳಿಸಿರಲಿಲ್ಲ.
Advertisement
ಕಳೆದ ಕೆಲವು ವರ್ಷಗಳಿಂದ ರಾಣಿ ನಾಯಕತ್ವದಲ್ಲಿ ಭಾರತ ತಂಡ ಗಮನಾರ್ಹ ಸಾಧನೆಗೈಯುತ್ತಲೇ ಬಂದಿದೆ. 2017ರ ಏಶ್ಯ ಕಪ್ ಚಾಂಪಿಯನ್ ಎನಿಸಿದ್ದು, 2018ರ ಏಶ್ಯಾಡ್ ಮತ್ತು ಏಶ್ಯನ್ ಚಾಂಪಿ ಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದು, 2019ರಲ್ಲಿ ಎಫ್ಐಎಚ್ ಸೀರಿಸ್ ಫೈನಲ್ ಜಯಿಸಿದ್ದೆಲ್ಲ ಪ್ರಮುಖವಾದದ್ದು.
“ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದ್ದೊಂದು ಮಹಾನ್ ಗೌರವ. ಕಳೆದ ಕೆಲವು ವರ್ಷಗಳಿಂದ ನಾಯಕಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದುದು, ಅನೇಕ ಪ್ರಶಸ್ತಿಗಳನ್ನು ಜಯಿಸಿದ್ದೆಲ್ಲ ನನ್ನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ನಂಬಿದ್ದೇನೆ’ ಎಂಬುದಾಗಿ ರಾಣಿ ಹೇಳಿದರು.