Advertisement

ಚನ್ನಮ್ಮ ವಿವಿಗಾಗಿ ಶುರುವಾಯ್ತು ಕಿತ್ತಾಟ : ಕಿತ್ತೂರಲ್ಲೇ ಆಗಬೇಕೆಂದು ಹೋರಾಟ

03:02 PM Sep 29, 2020 | sudhir |

ಬೆಳಗಾವಿ: ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ಥಳಾಂತರ ವಿಚಾರಕ್ಕೆ ಈಗ ರಾಜಕೀಯದ ಜತೆಗೆ ಭಾವನಾತ್ಮಕ ವಿಷಯದ ವಿವಾದ ಅಂಟಿಕೊಂಡಿದೆ.

Advertisement

ಸರಕಾರ ವಿಶ್ವವಿದ್ಯಾಲಯಕ್ಕೆ ಹೊಸದಾಗಿ ಜಾಗ ಮಂಜೂರು ಮಾಡುತ್ತಿರುವಂತೆಯೇ ಇದರ ವಿರುದ್ಧ ಆಕ್ರೋಶ-ಅಪಸ್ವರ ಆರಂಭವಾಗಿದೆ.

ಈಗ ಭೂತರಾಮನಹಟ್ಟಿ ಬಳಿ ಇರುವ ವಿಶ್ವವಿದ್ಯಾಲಯವನ್ನು ಹಿರೇಬಾಗೇವಾಡಿ ಬಳಿ ಸ್ಥಳಾಂತರ ಮಾಡಲು ಸರಕಾರ 126 ಎಕರೆ ಜಾಗ ಮಂಜೂರು ಮಾಡಿದೆ. ಇದಕ್ಕೆ ಸಚಿವ ಸಂಪುಟ ಸಭೆ ಸಹ ಅನುಮೋದನೆ ನೀಡಿದೆ. ಈ ಸುದ್ದಿ ಬಹಿರಂಗವಾದ ಬೆನ್ನಲ್ಲೇ ಚನ್ನಮ್ಮನ ನಾಡು ಕಿತ್ತೂರಿನಲ್ಲಿ ಅಸಮಾಧಾನ ಸ್ಫೋಟಗೊಂಡಿತು.

ಮಠಾಧೀಶರು ಸರಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ನೇರವಾಗಿ ಹರಿಹಾಯ್ದರು. ಚನ್ನಮ್ಮನ ನಾಡಿನಲ್ಲಿ ಚನ್ನಮ್ಮನ ಹೆಸರಿನ ವಿವಿ ಇರಬೇಕೆಂದು ವಾದ ಮಂಡಿಸಿದರು.

ವಿಶ್ವವಿದ್ಯಾಲಯದ ಸ್ಥಳಾಂತರ ಹಾಗೂ ಜಾಗದ ವಿಷಯ ಈಗ ಒಂದು ಹಂತಕ್ಕೆ ತಾರ್ಕಿಕ ಅಂತ್ಯ ಕಂಡಿದೆ. ಹೀಗಿರುವಾಗ ಮತ್ತೆ ವಿಶ್ವವಿದ್ಯಾಲಯದ ಸ್ಥಳಾಂತರ ಹಾಗೂ ಸ್ಥಾಪನೆ ಹೋರಾಟ ಅಗತ್ಯವಿದೆಯೇ ಎಂಬ ಪ್ರಶ್ನೆ ಎದ್ದಿದೆ. ವಿಶ್ವವಿದ್ಯಾಲಯದ ಸ್ಥಳಾಂತರ ಅಗತ್ಯವಿಲ್ಲ. ಒಂದು ವೇಳೆ ಸ್ಥಳಾಂತರ ಅನಿವಾರ್ಯ ಎಂದಿದ್ದೇ ಆದಲ್ಲಿ ಪ್ರಕ್ರಿಯೆ ಆರಂಭವಾಗುವ ಮೊದಲೇ ಅದು ಕಿತ್ತೂರಿನಲ್ಲಿ ಆಗಲೇಬೇಕು ಎಂಬ ಹೋರಾಟ ಆರಂಭವಾಗಿದೆ. ಪರಿಣಾಮ ರಾಣಿ ಚನ್ನಮ್ಮ ತನ್ನ ವಿಶ್ವವಿದ್ಯಾಲಯಕ್ಕಾಗಿ ಯಾವುದೇ ವಿವಾದ ಇಲ್ಲದ ಜಾಗ ಪಡೆಯಲು ಅಲೆದಾಡಬೇಕಿದೆ.

Advertisement

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

12 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಆರಂಭದಿಂದಲೂ ಜಾಗ ಹಾಗೂ ಅನುದಾನದ ಕೊರತೆ ಅನುಭವಿಸುತ್ತಲೇ ಬಂದಿದೆ. ಅರಣ್ಯ ಪ್ರದೇಶದ ವ್ಯಾಪ್ತಿಯ ಭೂತರಾಮನಹಟ್ಟಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತಾದರೂ ಇದಕ್ಕೆ ನೂರೆಂಟು ವಿಘ್ನಗಳು ಎದುರಾದವು. ಅಲ್ಲಿ ವಿವಿ ಒಟ್ಟು 168 ಎಕರೆ ವಿಸ್ತೀರ್ಣ ಹೊಂದಿದೆ. ಅದರೆ ಈ ಪ್ರದೇಶ ಅರಣ್ಯ ಇಲಾಖೆಗೆ ಸೇರಿರುವುದರಿಂದ ವಿಶ್ವವಿದ್ಯಾಲಯದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದೇ ಕಾರಣದಿಂದ ವಿಶ್ವವಿದ್ಯಾಲಯವನ್ನು ಹಿರೇಬಾಗೇವಾಡಿ ಗ್ರಾಮದ ಬಳಿಯ ಸರಕಾರಿ ಜಾಗಕ್ಕೆ ಸ್ಥಳಾಂತರ ಮಾಡಬೇಕೆಂಬ ಒತ್ತಾಯ ಕೇಳಿಬಂದಿತ್ತು.

ಇದನ್ನೂ ಓದಿ :ಅಗತ್ಯ ಮೂಲ ಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್ ಎಚ್ಚರಿಕೆ

ವಿಶ್ವವಿದ್ಯಾಲಯದ ಸ್ಥಾಪನೆ ದಿನದಿಂದಲೇ ಇದರ ಸ್ಥಳಾಂತರಕ್ಕೆ ಪ್ರಯತ್ನಗಳು ನಡೆದಿದ್ದವು. ಈ ಹಿಂದಿನ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ಹಿರೇಬಾಗೇವಾಡಿ ಬಳಿ ವಿವಿ ಸ್ಥಾಪನೆ ಮಾಡಬೇಕು. ಅದಕ್ಕಾಗಿ 300 ಎಕರೆ ಜಮೀನು ಮಂಜೂರು ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದರು. ಸತತ ಒತ್ತಡ ಹಾಗೂ ಪ್ರಯತ್ನದ ಫಲವಾಗಿ ಈಗ ಸರಕಾರ 126.27 ಎಕರೆ ಭೂಮಿ ಮಂಜೂರು ಮಾಡಿದೆ.

ಆದರೆ ಸರಕಾರದ ಈ ಆದೇಶ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಒಂದು ಕಡೆ ಭೂತರಾಮನಹಟ್ಟಿಯಲ್ಲೇ ವಿಶ್ವವಿದ್ಯಾಲಯದ ಆಡಳಿತ ಕಟ್ಟಡ ಇರಲಿದೆ. ಹೆಚ್ಚುವರಿ ಕಟ್ಟಡಗಳು ಮಾತ್ರ ಸರಕಾರ ಮಂಜೂರು ಮಾಡಿರುವ ಹಿರೇಬಾಗೇವಾಡಿಯಲ್ಲಿ ಸ್ಥಾಪನೆಯಾಗಲಿವೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೆ ಕೇವಲ 30 ಕಿಲೋಮೀಟರ್‌ ಅಂತರದಲ್ಲಿ ಮತ್ತಷ್ಟು ಕಟ್ಟಡಗಳನ್ನು ನಿರ್ಮಿಸುವುದು ಸರಿಯೇ. ಇದರ ಬದಲು ಎಲ್ಲವೂ ಒಂದೇ ಕಡೆ ಇರುವಂತೆ ಸರಕಾರ ನೋಡಿಕೊಳ್ಳಬೇಕೆಂಬ ಅಭಿಪ್ರಾಯ ಇದೆ.

ಇದನ್ನೂ ಓದಿ:ಭಗವಂತನನ್ನಾದರೂ ನೋಡಬಹುದು ಆದರೆ ಬಿಜೆಪಿ ಸಂಸದರಿಗೆ ಮೋದಿ ನೋಡಲು ಸಾಧ್ಯವಿಲ್ಲ: BN ಚಂದ್ರಪ್ಪ

ಸರಕಾರ ಈಗ ಮಂಜೂರು ಮಾಡಿರುವ 126 ಎಕರೆ ಜಾಗದಲ್ಲಿ ಪೂರ್ಣ ಪ್ರಮಾಣದ ವಿವಿ ಕಾರ್ಯಾರಂಭ ಮಾಡಲು ಸಾಧ್ಯವಿಲ್ಲ. ಆದರ ಬದಲಾಗಿ ವೀರರಾಣಿ ಚನ್ನಮ್ಮನ ನಾಡಿನಲ್ಲಿ ಸರಕಾರದ ಸಾಕಷ್ಟು ಜಾಗ ಲಭ್ಯವಿದೆ. ಇನ್ನೂ ಹೆಚ್ಚಿನ ಜಮೀನು ನೀಡಲು ರೈತರು ಸಿದ್ಧರಿದ್ದಾರೆ. ಇದೇ ಕಾರಣದಿಂದ ಕಿತ್ತೂರಿಗೆ ವಿಶ್ವವಿದ್ಯಾಲಯ ನೀಡಬೇಕೆಂಬುದು ಕಿತ್ತೂರಿನ ಹೋರಾಟಗಾರರ ವಾದ.

ಈ ಹಿಂದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವುದಾದರೆ ಕಿತ್ತೂರಿನಲ್ಲಿ ಮಾಡಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಾದ ಬಳಿಕ ಹಿರೇಬಾಗೇವಾಡಿ ಬಳಿ ಸಹ ವಿವಿ ಸ್ಥಾಪನೆಗೆ ಬಹಳ ಜೋರಾದ ಪ್ರಯತ್ನ ನಡೆದಿತ್ತು. ಇದರ ಮಧ್ಯೆ ಬಾಗಲಕೋಟೆ ಜಿಲ್ಲೆಯಿಂದ ಸಹ ವಿವಿಗಾಗಿ ಬಲವಾದ ಒತ್ತಡ ಬಂದಿತ್ತು. ಆಗ ಎಲ್ಲಿ ವಿಶ್ವವಿದ್ಯಾಲಯ ನಮ್ಮ ಜಿಲ್ಲೆ ಕೈಬಿಟ್ಟು ಹೋಗುತ್ತದೆಯೋ ಎಂಬ ಕಾರಣದಿಂದ ಹಿರೇಬಾಗೇವಾಡಿ ಪ್ರಸ್ತಾವನೆಗೆ ಬೆಂಬಲಿಸಿದ್ದೆ.

ಇದನ್ನೂ ಓದಿ: ಈಶ್ವರಪ್ಪ ನಂಬ್ಕೊಂಡು ಪಕ್ಷಕ್ಕೆ ಹೋದ್ರೇ ಏನು ಆಗಲ್ಲ, ಯಾರಿಗೂ ಅಧಿಕಾರ ಕೊಡ್ಸಲ್ಲ: ಬೇಳೂರು

ಆದರೆ ನಮ್ಮ ಬೇಡಿಕೆ ಇರುವುದು ಕಿತ್ತೂರಿನಲ್ಲಿ ವಿವಿ ಆಗಬೇಕು ಎಂದಿದೆ. ಇದರಲ್ಲಿ ಬದಲಾವಣೆ ಇಲ್ಲ ಎಂಬುದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿಕೆ.

ಕಿತ್ತೂರು ಚನ್ನಮ್ಮನ ಕರ್ಮಭೂಮಿ. ಕಿತ್ತೂರಿಗೆ ಸಮೀಪದಲ್ಲಿ ಸಂಗೊಳ್ಳಿ ಹಾಗೂ ನಂದಗಡ ಇವೆ. ಇದರಿಂದ ಕಿತ್ತೂರ ಸಂಸ್ಥಾನದ ಇತಿಹಾಸದ ಬಗ್ಗೆ ಹೊಸ ಸಂಶೋಧನೆಗಳಾಗುತ್ತವೆ. ಅಧ್ಯಯನಕ್ಕೆ ಆನುಕೂಲವಾಗುತ್ತದೆ. ಈಗ ಹಿರೇಬಾಗೇವಾಡಿ ಬಳಿ ನೀಡಿರುವ ಜಾಗದಲ್ಲಿ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ಆದ್ದರಿಂದ ಇಲ್ಲಿ ಬೇಡ ಎಂದು ಅಲ್ಲಿನ ಶಾಸಕರೇ ಹೇಳಿದ್ದಾರೆ. ಇದನ್ನು ಸರಕಾರ ಗಮನಿಸಬೇಕು ಎಂಬುದು ಕಿತ್ತೂರ ಸಂಸ್ಥಾನ ಕಲ್ಮಠದ ಶ್ರೀಗಳ ಅಭಿಪ್ರಾಯ.

– ಕೇಶವ ಅದಿ

Advertisement

Udayavani is now on Telegram. Click here to join our channel and stay updated with the latest news.

Next