Advertisement

ನೆಲಹಾಸಿನಂತೆ ಕಾಣುವ ರಂಗೋಲಿ, ನೀರ ಮೇಲೂ -ಒಳಗೂ ರಂಗೋಲಿ

06:00 AM Dec 14, 2018 | |

ಜಿಎಸ್‌ಬಿಯವರ ಆಡಳಿತಕ್ಕೆ ಒಳಪಟ್ಟ ಬಹುತೇಕ ಎಲ್ಲ ವೆಂಕಟರಮಣ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದಲ್ಲಿ ವಿಶ್ವರೂಪ ದರ್ಶನ ನಡೆಯುತ್ತದೆ. ಬೆಳಗಿನ ಜಾವದ ಜಾಗರದಲ್ಲಿ ಹಣತೆಗಳನ್ನು ಬೆಳಗಿ ಭಗವಂತನ ದಿವ್ಯರೂಪದ ದರ್ಶನ ಪಡೆಯುವ ವಿಶಿಷ್ಟ ಅನುಭೂತಿ. ಕೆಲವು ದೇವಸ್ಥಾನಗಳಲ್ಲಿ ಮುಂಜಾನೆಯ ಚುಮುಚುಮು ಚಳಿಗೆ ಸಾವಿರಾರು ಮಂದಿ ಶ್ರದ್ಧಾ ಭಕ್ತಿ ಭಾವದಿಂದ ಸೇರಿರುತ್ತಾರೆ. ಕುಂದಾಪುರ ಪೇಟೆ ವೆಂಕಟರಮಣ ದೇವಸ್ಥಾನದ ವಿಶ್ವರೂಪ ದರ್ಶನಕ್ಕೆ ಆಗಮಿಸಿದ ಭಕ್ತರು ಅರೆಕ್ಷಣ ಚಕಿತರಾಗುತ್ತಿದ್ದುದು ಅಲ್ಲಿದ್ದ ವರ್ಣರಂಗೋಲಿಗೆ. ದೊಡ್ಡಗಾತ್ರದಲ್ಲಿ ರಚಿಸಿದ್ದ ವೆಂಕಟರಮಣನ ಚಿತ್ತಾಕರ್ಷಕ ರಂಗೋಲಿ ಮನಸೆಳೆಯುತ್ತಾ ದೀಪಗಳ ಬೆಳಕಿನಲ್ಲಿ ಇನ್ನಷ್ಟು ದೇದೀಪ್ಯಮಾನವಾಗಿ ಕಂಗೊಳಿಸುತ್ತಿತ್ತು. ಏಕೆಂದರೆ ಅದರ ರೇಖೆಗಳು ಅಷ್ಟು ಸಪೂರವಾಗಿದ್ದವು. ವರ್ಣಗಳನ್ನು ಹಾಕಲು ಗಾಳಿಸುವ ತಟ್ಟೆಯನ್ನು ಬಳಸಿರಲಿಲ್ಲ. ಕೈಯಿಂದಲೇ ಸೂಕ್ಷ್ಮವಾಗಿ ಅಷ್ಟು ದೊಡ್ಡ ರಂಗೋಲಿಯನ್ನು ಬಹಳ ಶ್ರದ್ಧೆಯಿಂದ ಸೊಗಸಾಗಿ ಮೂಡಿಸಲಾಗಿತ್ತು. ಹಾಗಾಗಿ ರಂಗೋಲಿಯ ಕುರಿತಾದಷ್ಟೇ ಕುತೂಹಲ ಅದನ್ನು ಬಿಡಿಸಿದವರ ಕುರಿತೂ ಇತ್ತು.

Advertisement

ಕುಂದಾಪುರದ ಪೇಟೆ ವೆಂಕಟರಮಣ ದೇವಸ್ಥಾನವಷ್ಟೇ ಅಲ್ಲ ನಗರದ ಮೈಲಾರೇಶ್ವರ, ದತ್ತಾತ್ರೇಯ, ಲಕ್ಷ್ಮೀನಾರಾಯಣ ಮೊದಲಾದ ದೇವಾಲಯಗಳು, ಮುಲ್ಕಿ, ಮಂಗಳೂರು, ಉಡುಪಿ, ಕಲ್ಯಾಣಪುರ, ಚಿಟಾ³ಡಿ, ಅಂಬಲಪಾಡಿ ಹೀಗೆ ವಿವಿಧೆಡೆ ತಮ್ಮ ರಂಗೋಲಿಕಲಾಚಾತುರ್ಯ ಮೆರೆದವರು ಕುಂದಾಪುರದ ಆಟಕೆರೆ ಶ್ರೀಲಕ್ಷ್ಮೀ ಪೈ ಅವರು.35 ವರ್ಷಗಳಿಂದ ರಂಗೋಲಿಯ ಕುರಿತು ಆಸಕ್ತರಾದ ಇವರು ಪ್ರೌಢಶಾಲಾ ಹಂತದಲ್ಲಿದ್ದಾಗ ಡಾ| ವಿ.ಎಸ್‌.ಆಚಾರ್ಯರ ಪತ್ನಿ ಶಾಂತಾ ಆಚಾರ್ಯ ಅವರು ಕಡಿಯಾಳಿ ನವರಾತ್ರಿ ಸಂದರ್ಭ ಏರ್ಪಡಿಸಿದ ರಂಗೋಲಿ ಸ್ಪರ್ಧೆಯನ್ನು ನೋಡಿದ್ದರು. ಆಸಕ್ತಿ ಮೂಡಿತು. ನಂತರ ಭಾಗವಹಿಸಿದ್ದರು. ಮೊದಲೆರಡು ವರ್ಷ ಬಹುಮಾನವೂ ಬಂದಿರಲಿಲ್ಲ. ಹಾಗಂತ ಬೇಸರವೂ ಇರಲಿಲ್ಲ. ಆದರೆ ಅಲ್ಲಿ ಭಾಗವಹಿಸಿದವರಿಗೆ ಕೊಟ್ಟ ಪುಸ್ತಕಗಳೇ ಪ್ರೇರಣೆಯಾದವು. ನಂತರ ಸತತ 10 ವರ್ಷ ಪ್ರಥಮ ಬಹುಮಾನಕ್ಕೆ ಭಾಜನರಾಗಿ, ಇನ್ನು ಭಾಗವಹಿಸಿದರೆ ಬಹುಮಾನ ಖಾತರಿ ಎಂದು ತಿಳಿಯುತ್ತಿದ್ದಂತೆ ಸಂಘಟಕರಿಂದ ಸ್ಪರ್ಧೆಯ ತೀರ್ಪುಗಾರರಾಗಿ ಆಯ್ಕೆಯಾದರು. 

ಚುಕ್ಕಿ ರಂಗೋಲಿಯಲ್ಲೂ ಒಂದಷ್ಟು ಹೊಸತನಗಳನ್ನು ಕಂಡುಕೊಳ್ಳುವ ಮೂಲಕ ರಂಗೋಲಿ ಕಲಾವಿದೆ ಎನಿಸಿಕೊಂಡರು. “ಬೆಣ್ಣೆ ತಿನ್ನುವ ಕೃಷ್ಣ ರಂಗೋಲಿ’ಯನ್ನು ಪರ್ತಗಾಳಿ ಶ್ರೀಗಳು ಮೆಚ್ಚಿದ್ದರೆ, “ಹೂವುಗಳಿಂದ ರಚಿಸಿದ ಶಂಖ’ವನ್ನು ಕಂಡು ಕಾಶೀಮಠಾಧೀಶರು ಹರಸಿದ್ದರು. 

ನೆಲಹಾಸಿನಂತೆ ಕಾಣುವ ರಂಗೋಲಿ ಇವರ ವಿಶೇಷಗಳ ಪೈಕಿ ಪ್ರಮುಖ. ತೆಂಗಿನ ನಾರಿನ ಕಸ ಅಥವಾ ಹೂವುಗಳನ್ನು ಬಳಸಿ ಕಾಪೆìಟ್‌ನಂತೆಯೇ ಕಾಣುವ ರಂಗೋಲಿ ಬಿಡಿಸುವಲ್ಲಿ ಸಿದ್ಧಹಸ್ತರು. ಮಡಚಿದ ಕಾಪೆìಟ್‌ ಮಾದರಿಯಲ್ಲಿ ಮೈಸೂರಿನಲ್ಲಿ ರಚಿಸಿದ ರಂಗೋಲಿ ನಿಜ ಕಾಪೆìಟ್ಟೋ ರಂಗೋಲಿಯೋ ಎಂದು ತಿಳಿಯದೇ ಗಣ್ಯರು ಕೂಡಾ ದಂಗಾಗಿದ್ದರಂತೆ. 3 ಗಂಟೆಯಲ್ಲಿ ಯಾವುದೇ ಸಲಕರಣೆ ಬಳಸದೇ 13 ಅಡಿ ದೊಡ್ಡ ರಂಗೋಲಿ ಬಿಡಿಸುವ ವೇಗಸಾಮರ್ಥ್ಯ ಪಡೆಯಲು ಸಾಧ್ಯವಾದದ್ದು ಸತತ ಪರಿಶ್ರಮ ಹಾಗೂ ಅದರ ಮೇಲಿನ ಪ್ರೀತಿಯಿಂದ. 

ನೀರಿನ ಮೇಲೆ, ನೀರಿನ ಒಳಗೂ ರಂಗೋಲಿ ಹಾಕುವ ಅಚ್ಚರಿಯ ಕಲಾವಿದೆ ಇವರು. ರಂಗೋಲಿಯಲ್ಲಿ ಯಾವುದಾದರೊಂದು ದಾಖಲೆ ಮಾಡಬೇಕೆಂಬ ಮನೋಭೂಮಿಕೆ ಹೊಂದಿದ್ದಾರೆ. 30 ವರ್ಷದಿಂದ ಆಕಾಶವಾಣಿ ಕಲಾವಿದೆಯಾಗಿದ್ದು ಆಕಾಶವಾಣಿಯಲ್ಲಿ ಸುಗಮಸಂಗೀತದಲ್ಲಿ ಬಿ ಹೈಗ್ರೇಡ್‌ ಕಲಾವಿದೆ. ಹೂಮಾಲೆ ಕಟ್ಟುವುದರಲ್ಲಿ ಕೂಡಾ ತಮ್ಮದೇ ವಿಶೇಷಣವನ್ನು ಬೆಳೆಸಿಕೊಂಡಿದ್ದು ಹೂಮಾಲೆಗಳಿಂದಲೇ ದೇವತಾರೂಪದ ಅಲಂಕಾರ ಮಾಡುವ ಚಾತುರ್ಯ ಹೊಂದಿದ್ದಾರೆ. 

Advertisement

 ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next