Advertisement

ಹೆಣ್ಣುಮಕ್ಕಳಿಗೆ ಆದ್ಯತೆ ನೀಡಲು ರೇಂಜರ್  ಹೆಚ್ಚಳ: ಸಿಂಧ್ಯಾ

12:36 AM Sep 10, 2019 | Team Udayavani |

ಉಡುಪಿ: ಹೆಣ್ಣುಮಕ್ಕಳಿಗೆ ಆದ್ಯತೆ ನೀಡುವ·ನಿಟ್ಟಿನಲ್ಲಿ ರೇಂಜರ್‌ಗಳ ಹೆಚ್ಚಳಕ್ಕೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ ಹೇಳಿದರು.

Advertisement

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಸಂಸ್ಥೆಯ ಸಹ·ಯೋಗದಲ್ಲಿ ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಟ್ರೈ ಸೆಂಟಿನರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ರೇಂಜರಿಂಗ್‌ ಶತಮಾನೋತ್ಸವ, ರೋವರ್‌ ಸ್ಕೌಟ್ಸ್‌ ಲೀಡರ್, ರೇಂಜರ್‌ ಲೀಡರ್ ಸಮಾವೇಶದಲ್ಲಿ ಅವರು ಮಾತನಾಡಿದರು.

ಮಿಲಾಗ್ರಿಸ್‌ ಶಿಕ್ಷಣ ಸಂಸ್ಥೆಗಳ ಸಂಚಾಲಕ ಲಾರೆನ್ಸ್‌ ಸಿ. ಡಿ’ಸೋಜಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಪರಿಸ್ಥಿತಿ ಪ್ರತಿಕೂಲವಾಗಿದ್ದರೂ ನಾವು ಅದನ್ನು
ಸರಿಪಡಿಸಿಕೊಂಡು ಮುನ್ನಡೆಯಬೇಕು. ಇದೇ ನಮ್ಮಧ್ಯೇಯ ಆಗಬೇಕು. ಪರರಿಗಾಗಿ ದುಡಿಯುವ ಮನಸ್ಸು ನಮ್ಮದಾಗಬೇಕು. ಉತ್ತಮ ಸಮಾಜ ನಿರ್ಮಾಣದಲ್ಲಿ ನಾವು ತೊಡಗಿಕೊಳ್ಳಬೇಕು ಎಂದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ. ಆಚಾರ್ಯ, ಗೈಡ್ಸ್‌ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ವಿ. ರಾಮಲತಾ, ಶತಮಾನೋತ್ಸವದ ಉಪಾಧ್ಯಕ್ಷರಾದ ಗುಣರತ್ನಾ, ಜ್ಯೋತಿ ಕೆ. ಹೆಬ್ಟಾರ್‌, ಜಿಲ್ಲಾ ಗೈಡ್‌ ಆಯುಕ್ತೆ ಜ್ಯೋತಿ ಜೆ. ಪೈ, ಜಿಲ್ಲಾ ಕಾರ್ಯದರ್ಶಿ ಐ.ಕೆ. ಜಯಚಂದ್ರ ರಾವ್‌, ಮಂಗಳೂರು ವಿವಿಯ ರೋವರ್‌- ರೇಂಜರ್ ಸಂಯೋಜಕಿ ಪ್ರೊ| ವಾರಿಜಾ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಪ್ರಮುಖರಾದ ಜಾನಕಿ ವೇಣುಗೋಪಾಲ್‌, ಎನ್‌.ಜಿ. ಮೋಹನ್‌, ರಾಮಶೇಷ ಶೆಟ್ಟಿ, ಪ್ರಭಾಕರ ಭಟ್‌, ಫ್ಲೋರಿನ್‌ ಡಿ’ಸಿಲ್ವ, ವಿಜಯಾ ಮಾಯಾಡಿ, ಅಶೋಕ್‌ ಭಟ್‌, ನಿತಿನ್‌ ಅಮೀನ್‌, ವನಿತಾ ರಾವ್‌ ಉಪಸ್ಥಿತರಿದ್ದರು.

ಜಿಲ್ಲಾ ಆಯುಕ್ತ ವಿಜಯೇಂದ್ರ ವಸಂತ್‌ ಸ್ವಾಗತಿಸಿದರು. ರೇಂಜರ್ ಶತಮಾನೋತ್ಸವ ಸಂಚಾಲಕ ರಾಧಾ ವೆಂಕಟೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಂಜರ್‌ ಲೀಡರ್ ವಿಭಾಗದ ನಾಯಕಿ ಜ್ಯೋತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next