Advertisement

OTT: ಕೊನೆಗೂ ಓಟಿಟಿಗೆ ಬಂದೇ ಬಿಡ್ತು ಬಹು ನಿರೀಕ್ಷಿತ ʼಶಾಖಾಹಾರಿʼ: ಆದರೆ ಎಲ್ಲರಿಗೂ ಸಿಗಲ್ಲ

12:47 PM May 22, 2024 | Team Udayavani |

ಬೆಂಗಳೂರು: ಕನ್ನಡದ ಸಿನಿಮಾಗಳು ರಿಲೀಸ್‌ ಆಗುವ ಸಂಖ್ಯೆ ಕಡಿಮೆ ಆಗಿದೆ. ದಿನಕಳೆದಂತೆ ಕನ್ನಡ ಸಿನಿಮಾಗಳನ್ನು ಥಿಯೇಟರ್‌ ಗೆ ಬಂದು ನೋಡುವವರ ಸಂಖ್ಯೆ ಕ್ಷೀಣವಾಗುತ್ತಿದೆ.

Advertisement

ಇತ್ತೀಚೆಗೆ ಸ್ಟಾರ್‌ ನಟರ ಸಿನಿಮಾಗಳು ಕನ್ನಡದಲ್ಲಿ ರಿಲೀಸ್‌ ಆಗುತ್ತಿಲ್ಲ. ಹಾಗಾಂತ ಕನ್ನಡದಲ್ಲಿ ಸಿನಿಮಾಗಳ ಸಂಖ್ಯೆಯೇನು ಕಡಿಮೆ ಆಗುತ್ತಿಲ್ಲ. ಒಂದಲ್ಲ ಒಂದು ಕಾರಣದಿಂದ ಸಾಲು ಸಾಲು ಸಿನಿಮಾಗಳು ರಿಲೀಸ್‌ ಹಂತಕ್ಕೆ ಬಂದು ನಿಂತಿವೆ.

ಥಿಯೇಟರ್‌ ನಲ್ಲಿ ಸದ್ದು ಮಾಡದೆ ಇದ್ದರೂ, ಓಟಿಟಿಯಲ್ಲಾದರೂ ಕಂಟೆಂಟ್‌ ಧಮ್‌ ನಿಂದ ಸಿನಿಮಾಗಳು ಜನರತ್ತ ತಲುಪುತ್ತದೆ. ಇತ್ತೀಚೆಗೆ ಕನ್ನಡದಲ್ಲಿ ಬಂದ ʼಬ್ಲಿಂಕ್‌ʼ ಹಾಗೂ ʼಶಾಖಾಹಾರಿʼ ಎರಡು ಸಿನಿಮಾಗಳು ಕಂಟೆಂಟ್‌ ಧಮ್‌ನಲ್ಲಿಒಂದಷ್ಟು ದಿನ ಥಿಯೇಟರ್‌ ನಲ್ಲಿತ್ತು.

ಇದರಲ್ಲಿ ʼಬ್ಲಿಂಕ್‌ʼ ಸಿನಿಮಾ ಈಗಾಗಲೇ ಓಟಿಟಿಯಲ್ಲಿ ರಿಲೀಸ್‌ ಆಗಿದೆ. ಇದೀಗ ಸದ್ದಿಲ್ಲದೆ ರಂಗಾಯಣ ರಘು ಅವರ ಕ್ರೈಮ್‌ ಥ್ರಿಲ್ಲರ್‌ ʼಶಾಖಾಹಾರಿʼ ಓಟಿಟಿಗೆ ಲಗ್ಗೆಯಿಟ್ಟಿದೆ.

ಇದನ್ನೂ ಓದಿ: ಹುಟ್ಟುಹಬ್ಬದಂದು 5 ಮಂದಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾದ ಪ್ರತಾಪ್

Advertisement

ʼಶಾಖಾಹಾರಿʼ ರಿಲೀಸ್‌ ವೇಳೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಇನ್ನೇನು ಜನ ಥಿಯೇಟರ್‌ ನತ್ತ ಬರುತ್ತಾರೆ ಎನ್ನುವಾಗಲೇ ಸಿನಿಮಾ ಥಿಯೇಟರ್‌ನಿಂದ ಮಾಯಾವಾಗಿತ್ತು. ಇದೀಗ ʼಶಾಖಾಹಾರಿʼ ಕೊನೆಗೂ ಓಟಿಟಿಗೆ ಬಂದಿದೆ.

ಅಮೇಜಾನ್‌ ಪ್ರೈಮ್‌ ಸಿನಿಮಾ ಸ್ಟ್ರೀಮಿಂಗ್‌ ಆಗಿದೆ. ಆದರೆ ಭಾರತದಲ್ಲಿ ಸದ್ಯಕ್ಕೆ ವೀಕ್ಷಣೆಗೆ ಲಭ್ಯವಿಲ್ಲ. ಯುಕೆ ಹಾಗೂ ಯುಎಸ್‌ ನಲ್ಲಿರುವವರಿಗೆ ಮಾತ್ರ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಅಲ್ಲಿನ ಚಂದಾದಾರರು ಹಣ ನೀಡಿ ಸಿನಿಮಾವನ್ನು ನೋಡಬಹುದಾಗಿದೆ. ಮುಂದಿನ ವಾರ ʼಶಾಖಾಹಾರಿʼ ಭಾರತದಲ್ಲಿ ಓಟಿಟಿಗೆ ಬರುವ ಸಾಧ್ಯತೆಯಿದೆ.

ಮಲೆನಾಡಿನ ಖಾನಾವಳಿ ಸುತ್ತ ಕಥೆ ಸಾಗುತ್ತದೆ. ʼಸುಬ್ಭಣ್ಣʼ ಎನ್ನುವ  ವ್ಯಕ್ತಿಯ ಸುತ್ತಲಿನ ಕಥೆಯನ್ನು ಥ್ರಿಲ್ಲರ್‌ ಆಗಿ ಸಿನಿಮಾದಲ್ಲಿ ತೋರಿಸಲಾಗಿದೆ.

ಸಂದೀಪ್ ಸುಂಕದ್ ನಿರ್ದೇಶನದ ಈ ಚಿತ್ರದಲ್ಲಿ ರಂಗಾಯಣ ರಘು, ಗೋಪಾಲ್ ಕೃಷ್ಣ ದೇಶಪಾಂಡೆ, ವಿನಯ್‌, ನಿಧಿ ಹೆಗಡೆ, ಪ್ರತಿಮಾ ನಾಯಕ್, ಶ್ರೀಹರ್ಷ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next