Advertisement

ರಂಗದಲ್ಲಿ ಮೆರೆದ ರಂಗನಾಯಕ

06:12 PM May 30, 2019 | mahesh |

ರಂಗನಾಯಕ ಶ್ರೀಕೃಷ್ಣನಿಗೆ ಜಾಂಬವತಿಯಲ್ಲಿ ಜನಿಸಿದ ಮಗನಾದ ಸಾಂಬ ಹಾಗೂ ಕೃಷ್ಣನ ಕೊನೆಯ ದಿನಗಳನ್ನು ಆಧರಿಸಿ ಹೆಣೆದ ಈ ಪ್ರಸಂಗ ಒಂದು ಹೊಸ ಕಥಾಹಂದರ ಹೊಂದಿದೆ .ಪೂಂಜ , ಪಟ್ಲ , ಅಂಡಾಲರಂಥಹ ಭಾಗವತ ದಿಗ್ಗಜರ ಸಮ್ಮಿಲನವೂ ಪ್ರಸಂಗದ ಯಶಸ್ಸಿಗೆ ಕಾರಣ.

Advertisement

ಈ ವರ್ಷ ಕಟೀಲು ಒಂದನೇ ಮೇಳದವರು ಭಾಗವತರೂ ಆಗಿರುವ ಅಂಡಾಲ ದೇವಿ ಪ್ರಸಾದ್‌ ಶೆಟ್ಟಿ ರಚಿಸಿದ “ರಂಗನಾಯಕ’ ಎಂಬ ಪೌರಾಣಿಕ ಆಖ್ಯಾನವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.ಗಟ್ಟಿಯಾದ ಕಥಾ ಹಿನ್ನೆಲೆ , ಉತ್ತಮ ಸಾಹಿತ್ಯದೊಂದಿಗೆ ಛಂದೋಬದ್ಧವಾದ ಪದ್ಯರಚನೆ , ಕಲಾವಿದರ ಸಾಂ ಕ ಪ್ರಯತ್ನ ಹಾಗೂ ಪೂಂಜ , ಪಟ್ಲ , ಅಂಡಾಲರಂಥಹ ಭಾಗವತ ದಿಗ್ಗಜರ ಸಮ್ಮಿಲನ ಎಲ್ಲವೂ ಪ್ರಸಂಗದ ಯಶಸ್ಸಿಗೆ ಕಾರಣವೆನ್ನಬಹುದು .

ರಂಗನಾಯಕ ಶ್ರೀಕೃಷ್ಣನಿಗೆ ಜಾಂಬವತಿಯಲ್ಲಿ ಜನಿಸಿದ ಮಗನಾದ ಸಾಂಬ ಹಾಗೂ ಕೃಷ್ಣನ ಕೊನೆಯ ದಿನಗಳನ್ನು ಆಧರಿಸಿ ಹೆಣೆದ ಈ ಪ್ರಸಂಗ ಒಂದು ಹೊಸ ಕಥಾಹಂದರ ಹೊಂದಿದೆ .ಸಾಂಬನ ದರ್ಪ , ವಿವಾಹ , ಪಶ್ಚಾತ್ತಾಪ , ಪ್ರದ್ಯುಮ್ನ , ಸಾತ್ಯಕಿ , ಕ್ರತವರ್ಮ ಮುಂತಾದವರೊಂದಿಗೆ ಪಾನಮತ್ತರಾಗಿ ದೂರ್ವಾಸ , ವಿಶ್ವಾಮಿತ್ರ , ಕಣ್ವ ಮಹರ್ಷಿಗಳನ್ನು ಕೆಣಕಿ , ಯಾದವ ವಂಶ ನಿರ್ಮೂಲವಾಗಲಿ ಎಂಬ ಶಾಪ, ತಾನು ಶಾಪಗ್ರಸ್ತನಾದ ಸೂರ್ಯದೇವ ಎಂದು ಶ್ರೀಕೃಷ್ಣನಿಂದ ಅರಿವು , ಬಲರಾಮನು ದೇಹತ್ಯಾಗ , ಜರನೆಂಬ ಬೇಡನ ಬಾಣಹತಿಗೊಳಗಾಗಿ ಶ್ರೀಕೃಷ್ಣ ನ ಅವತಾರ ಸಮಾಪ್ತಿ – ಇವಿಷ್ಟು ಘಟನಾವಳಿಗಳೊಂದಿಗೆ ರಂಗನಾಯಕ ಸಾಕಾರಗೊಳ್ಳುತ್ತದೆ.

ಪೂರ್ವಾರ್ಧದ ಶ್ರೀಕೃಷ್ಣನಾಗಿ ದಿನಕರ ಗೋಖಲೆಯವರ ನಿರ್ವಹಣೆ ಚೆನ್ನಾಗಿತ್ತಾದರೂ , ಬಾಲ್ಯಲೀಲೆಗಳ ಮಹತ್ವವನ್ನು ಇನ್ನಷ್ಟು ವಿವರವಾಗಿ ಹೇಳಬಹುದಿತ್ತು . ಸಾಂಬನಾಗಿ ರತ್ನಾಕರ ಹೆಗ್ಡೆ ಉತ್ತಮವಾಗಿ ಪ್ರಸ್ತುತಿ ನೀಡಿ¨ªಾರೆ .ದಾರಿಕನಾಗಿ ಸಂದೇಶ ಮಂದಾರರದ್ದು ಆಶ್ಲೀಲತೆಯಿಲ್ಲದ ಹಾಸ್ಯ . ಲಕ್ಷಣೆಯಾಗಿ ರವಿಚಂದ್ರ ಚೆಂಬುರವರು ಉತ್ತಮ ನಾಟ್ಯ , ಶೃಂಗಾರದ ಸನ್ನಿವೇಶದಲ್ಲಿ ಚುರುಕಿನ ಸಂಭಾಷಣೆ ಮೂಲಕ ಗಮನ ಸೆಳೆದರು . ವನವಿಹಾರದ ಸನ್ನಿವೇಶಕ್ಕೆ ಸಖೀಯ ಪಾತ್ರಧಾರಿಗಳು ತೀರಾ ಸಪ್ಪೆಯಾಗಿ ಕಂಡರೂ , ಆ ಕೊರತೆಯನ್ನು ತುಂಬುವಲ್ಲಿ ರವಿಚಂದ್ರ ಯಶಸ್ವಿಯಾದರು .ಕೌರವನಾಗಿ ಬೆಳ್ಳಾರೆ ಮಂಜುನಾಥ ಭಟ್‌ , ಬಲರಾಮನಾಗಿ ಅರಳ ಗಣೇಶರು ರಂಜಿಸಿದರು . ಉತ್ತರಾರ್ಧದ ಶ್ರೀಕೃಷ್ಣನಾಗಿ ವಿಷ್ಣುಶರ್ಮರು ಉತ್ತಮ ಮಾತುಗಾರಿಕೆಯ ಮೂಲಕ ಕೃಷ್ಣನ ಮಾನಸಿಕ ತುಮುಲವನ್ನು , ಅಂತ್ಯದ ವಿಷಾದತೆಯ ಭಾವವನ್ನು ಚೆನ್ನಾಗಿ ಚಿತ್ರಿಸಿದರು . ಉತ್ತರಾರ್ಧದ ಸಾಂಬನಾಗಿ ಬೊಳಂತೂರು ಜಯರಾಮ ಶೆಟ್ಟರು , ಪ್ರಸಂಗದ ನಡೆಯನ್ನು ಅರ್ಥೈಸಿಕೊಂಡು ಪಾತ್ರ ನಿರ್ವಹಿಸಿದರು . ಪ್ರದ್ಯುಮ್ನನಾಗಿ ಸುಕೇಶ್‌ ಎಲ್ಕಾನ , ಬಣ್ಣದ ವೇಷದಲ್ಲಿ ಶಾಲ್ವನಾಗಿ ಬಾಲಕೃಷ್ಣ ಮಿಜಾರ್‌ , ನಾರದನಾಗಿ ರಾಮ ಭಂಡಾರಿ, ಭೀಷಣನಾಗಿ ಪ್ರಕಾಶ್‌ ಸಾಗರ , ಅರ್ಜುನನಾಗಿ ಶಂಭುಕುಮಾರ್‌, ಕಾರ್ತ್ಯ ಮಂಜುನಾಥ ರೈ ಹಾಗೂ ಉಳಿದ ಕಲಾವಿದರ ಪ್ರಸ್ತುತಿಯೂ ಚೆನ್ನಾಗಿತ್ತು .

ಭಾಗವತಿಕೆಯಲ್ಲಿ ಪ್ರಾರಂಭದಲ್ಲಿ ರಾಮಚಂದ್ರ ರಾಣ್ಯರು ಚೆನ್ನಾಗಿ ಹಾಡಿದರು . ಪಟ್ಲ ಸತೀಶ್‌ ಶೆಟ್ಟರ ಸುಮಧುರ ಕಂಠದ ಹಾಡುಗಾರಿಕೆ ಪ್ರಸಂಗ ಯಶಸ್ವಿಯಾಗಲು ಕಾರಣವಾಯಿತು . ವನವಿಹಾರದ ಹಾಡು ಮನ ಮೆಚ್ಚಿತು . ಸಾಂಬ – ಲಕ್ಷಣೆಯರ ಸಂವಾದದ ಶೃಂಗಾರ ರಸದ ಭಾಮಿನಿ ನೀಲ ಬಾನಂಗಳದ ತಾರಾ ಹಾಡಿದ ಕೂಡಲೇ ,ಉತ್ತಮ ಸಾಹಿತ್ಯದ ಆ ಭಾಮಿನಿಗೆ ಅರ್ಥ ಹೇಳಲು ಅವಕಾಶ ನೀಡದೆ, ಮುಂದಿನ ಹೃದಯ ಪುಟದಿ ನೀ ಮಧುರ ಭಾಷೆಯಲಿ | ಮಿದುವಕ್ಕರ ಬರೆಯೆ ಪದ್ಯವನ್ನು ಹಾಡಿದ ಪಟ್ಲರ ರಂಗನಡೆಯ ಚಾಣಾಕ್ಷ ತಂತ್ರ ನಿರ್ದೇಶನದ ಸಾಮರ್ಥ್ಯ ತೋರಿಸಿ ಕೊಟ್ಟಿತು . ಅನಂತರ ಅಂಡಾಲ ದೇವಿಪ್ರಸಾದ್‌ ಶೆಟ್ಟರು ಸಾಂಪ್ರದಾಯಿಕ ಶೈಲಿಯಲ್ಲಿ ಚೆನ್ನಾಗಿ ಹಾಡಿದರು. ಹಿರಿಯ ಭಾಗವತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಕೊನೆಯ ಭಾಗದ ಭಾವನಾತ್ಮಕ ಸನ್ನಿವೇಶಗಳಲ್ಲಿ ಉತ್ತಮವಾಗಿ ಹಾಡಿದರು .

Advertisement

ಅಂಡಾಲರು ಭಾಗವತ ಹಾಗೂ ಶಿವಪುರಾಣದ ಉಮಾಸಂಹಿತೆಯನ್ನು ಆಧಾರವನ್ನಾಗಿ ಬಳಸಿ , ಸ್ವಲ್ಪ ಮಟ್ಟಿನ ಸ್ವಕಲ್ಪನೆಯನ್ನೂ ಸೇರಿಸಿ ರಂಗನಾಯಕ ಪ್ರಸಂಗ ರಚಿಸಿದ್ದಾರೆ . ಪ್ರಸಂಗದ ಪದ್ಯಗಳಿಗೆ ಬಳಸಿದ ಸಾಹಿತ್ಯ ಶ್ರೇಷ್ಠ ಮಟ್ಟದ್ದಾಗಿದ್ದು ಛಂದೋಬದ್ಧ ಪದ್ಯ ರಚನೆ ಪ್ರಸಂಗದ ಯಶಸ್ಸಿಗೆ ಕಾರಣ ಎನ್ನಬಹುದು.

ಎಂ.ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next