Advertisement

ಮದ್ಯಪಾನ ಮಾಡಿ ಚಾಲನೆ ಮಾಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ : ಶಾಸಕ ರಂಗನಾಥ್ ಸೂಚನೆ

06:58 PM May 25, 2022 | Team Udayavani |

ಕುಣಿಗಲ್ : ಮದ್ಯಪಾನ ಮಾಡಿ ಆಟೋ ರೀಕ್ಷಾ ಚಾಲನೆ ಮಾಡುವ, ಚಾಲಕರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವಂತೆ ಶಾಸಕ ಡಾ.ಹೆಚ್.ಡಿ.ರಂಗನಾಥ್, ವೃತ್ತ ನಿರೀಕ್ಷ ವಿ.ಎಂ.ಗುರುಪ್ರಸಾದ್ ಅವರಿಗೆ ಸೂಚಿಸಿದರು.

Advertisement

ಬುಧವಾರ ಪೊಲೀಸ್ ಇಲಾಖೆ ಇಲ್ಲಿನ ಠಾಣೆಯ ಸಭಾಂಗಣದಲ್ಲಿ ಆಟೋ ರಿಕ್ಷಾ ಚಾಲಕರಿಗೆ ಹಮ್ಮಿಕೊಂಡಿದ್ದ ಸಂಚಾರಿ ನಿಯಮ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಆಟೋ ಚಾಲಕರು ಸಾರಿಗೆ ನಿಯಮಾನುಸಾರ ನಡೆದುಕೊಳ್ಳಬೇಕು, ಪರವಾನಗೆ ಹಾಗೂ ಆಟೋ ರಿಕ್ಷಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಂಡು ಚಾಲನೆ ಮಾಡಬೇಕು, ಎಲ್ಲಂದರಲ್ಲಿ ಆಟೋ ನಿಲ್ಲಿಸಬಾರದು, ನಿಗಧಿತ ಸ್ಥಳದಲ್ಲಿ ನಿಲ್ಲಿಸಬೇಕು, ಮುಖ್ಯವಾಗಿ ಸಮವಸ್ತçವನ್ನು ಕಡ್ಡಾಯವಾಗಿ ಧರಿಸಬೇಕು, ಶಿಸ್ತನ್ನು ಕಾಪಾಡಿಕೊಳ್ಳಬೇಕು, ಜೊತೆಗೆ ಪ್ರಯಾಣಿಕರೊಂದಿಗೆ ಸೌಹಾರ್ಥಿತವಾಗಿ ವರ್ತಿಸಬೇಕೆಂದು ಕಿವಿಮಾತು ಹೇಳಿದರು.

ಜೀವ ಮುಖ್ಯ : ಮದ್ಯಪಾನ ಮಾಡಿ ಆಟೋ ಚಾಲನೆ ಮಾಡುವುದರಿಂದ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗುವ ಸಾಧ್ಯತೆ ಹೆಚ್ಚಾಗಿದೆ ಇದರಿಂದ ಪ್ರಯಾಣಿಕರ ಪ್ರಾಣದ ಜೋತೆಗೆ ನಿಮ್ಮ ಪ್ರಾಣವನ್ನು ಕಳೆದು ಕೊಳ್ಳುತ್ತೀರ ಎಂದು ಎಚ್ಚರಿಸಿದ ಶಾಸಕರು, ಪ್ರಯಾಣಿಕರ ಜೀವ ಅತಿ ಮುಖ್ಯವಾಗಿದೆ ಹಾಗೂ ನಿಮ್ಮನು ನಂಬಿರುವ ಕುಟುಂಬಕ್ಕೆ ಅನ್ಯಾಯವಾಗುತ್ತದೆ, ವಿಮೆ ಸೇರಿದಂತೆ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ, ಇದನ್ನು ಚಾಲಕರು ಅರ್ಥ ಮಾಡಿಕೊಂಡು ಚಾಲನೆ ಮಾಡಬೇಕೆಂದು ಹೇಳಿದರು.

20 ಚಾಲಕರಿಗೆ ಡಿಎಲ್ : ಡಿಎಲ್ ಇಲ್ಲದೆ ಆಟೋ ರಿಕ್ಷಾ ಓಡಿಸುವ 20 ಆಟೋ ಚಾಲಕರಿಗೆ ಡಿ.ಎಲ್ ಮಾಡಿಸಿಕೊಡುವುದ್ದಾಗಿ ತಿಳಿಸಿದ ಶಾಸಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

Advertisement

ಇದನ್ನೂ ಓದಿ : ದೈವಸ್ಥಾನದ ಹುಂಡಿಯಿಂದ ಹಣ ಕಳವಿಗೆ ಯತ್ನ; ಆರೋಪಿ ಪೊಲೀಸ್‌ ವಶಕ್ಕೆ

ಚಾಲಕರಿಗೆ ಆರೋಗ್ಯ ಶಿಬಿರ : ಮಳೆ, ಚಳಿ, ಗಾಳಿ, ಬಿಸಿಲು ಎನ್ನದೇ ನಿತ್ಯ ಆಟೋ ರಿಕ್ಷಾ ಚಾಲನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಚಾಲಕರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ, ಆನಾರೋಗ್ಯ ತುತ್ತಾಗಿ ಆರ್ಥಿಕ ಪರಿಸ್ಥಿತಿಯಿಂದ ಆರೋಗ್ಯ ತೋರಿಸಿಕೊಳ್ಳಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಹೀಗಾಗಿ ಎಲ್ಲಾ ಆಟೋ ರಿಕ್ಷಾ ಚಾಲಕರಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿ ಆ ಮೂಲಕ ಪ್ರತಿಯೊಬ್ಬ ಚಾಲಕರಿಗೂ ತಪಾಸಣೆ ಜೊತೆಗೆ ಅಗತ್ಯವಿರುವ ಆರೋಗ್ಯ ಸೌಲಭ್ಯಗಳು ಒದಗಿಸುವುದ್ದಾಗಿ ಡಾ.ಹೆಚ್.ಡಿ.ರಂಗನಾಥ್ ತಿಳಿಸಿದರು.

99 ಮರಣ ಅಪಘಾತ : ವೃತ್ತ ನಿರೀಕ್ಷಕ ವಿ.ಎಂ.ಗುರುಪ್ರಸಾದ್ ಮಾತನಾಡಿ ಕುಣಿಗಲ್ ಠಾಣಾ ವ್ಯಾಪ್ತಿಯಲ್ಲಿ 2021 ಹಾಗೂ 22 ಸಾಲಿನಲ್ಲಿ ಅಪಘಾತವಾಗಿ ಹಲವು ಮಂದಿ ಪ್ರಾಣ ಕಳೆದುಕೊಂಡರೆ, ಸುಮಾರು 290 ಜನರು ಕೈ, ಕಾಲು ಕಳೆದುಕೊಂಡಿದ್ದಾರೆ, ಇದಕ್ಕೆ ಚಾಲಕರ ನಿರ್ಲಕ್ಷ ಹಾಗೂ ಕಾನೂನು ಅರಿವಿಲ್ಲದೆ ಆಗಿರುತ್ತದೆ, ಇತ್ತೀಚಿಗೆ ತಾಲೂಕಿನ ಅಮೃತೂರು ಹೋಬಳಿ ಜಿನ್ನಾಗರ ಗ್ರಾಮದ ಬಳಿ ಮೂರು ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಒಂದೇ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಅಪಘಾತವಾಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು ಓರ್ವ ತೀವ್ರವಾಗಿ ಗಾಯಗೊಂಡಿದ್ದ, ಹಾಗಾಗಿ ಪೋಷಕರು ಡಿಎಲ್ ಇಲ್ಲದ ಹಾಗೂ ಅಪ್ರಾಪ್ತ ಬಾಲಕರಿಗೆ ವಾಹನ ಚಾಲನೆ ಮಾಡಲು ಕೊಡಬಾರದು, ಕೊಟ್ಟಿದ್ದೇ ಆದಲ್ಲಿ ಅಂತಹ ಪೋಷಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದ್ದಾಗಿ ಎಚ್ಚರಿಕೆ ನೀಡಿದರು.

ರಸ್ತೆ ಸುರಕ್ಷಿತ ಕ್ರಮವನ್ನು ಪ್ರತಿಯೊಬ್ಬರು ಪಾಲಿಸಬೇಕು, ಮೋಟರ್ ಕಾಯ್ದೆ ಪ್ರಕಾರ ಆಟೋ ರಿಕ್ಷಾದಲ್ಲಿ ಚಾಲಕ ಹೊರತು ಪಡಿಸಿ ಮೂರು ಮಂದಿ ಪ್ರಯಾಣಿಕರನ್ನು ಮಾತ್ರ ಕೂರಿಸಿಕೊಳ್ಳಬೇಕು ಆದರೆ ಕೆಲ ಚಾಲಕರು 10 ಕ್ಕೂ ಅಧಿಕ ಪ್ರಯಾಣಿಕರನ್ನು ಕೂರಿಸಿಕೊಳ್ಳುತ್ತಿರುವುದು ಅಪಘಾತಕ್ಕೆ ಮತ್ತೊಂದು ಕಾರಣವಾಗಿದೆ ಎಂದರು. ಕಾನೂನು ಮೀರಿ ಚಾಲನೆ ಮಾಡುವವರ ಚಾಲಕರ, ಮಾಲೀಕರ ಹಾಗೂ ವಾಹನಗಳ ವಿರುದ್ದ ವಿಧಿಸುವ ದಂಡ ದುಪ್ಪಟ್ಟಾಗಿದೆ ಇದನ್ನು ಅರ್ಥ ಮಾಡಿಕೊಂಡು ಕಾನೂನು ಪರಿಪಾಲನೆ ಮಾಡಬೇಕೆಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next