Advertisement

ರಣಬೀರ್‌ ಕಪೂರ್‌ ಲಂಡನ್‌ ಹುಡುಗೀನ ಮದುವೆ ಆಗಲಿದ್ದಾರೆಯೇ?

12:36 PM May 11, 2017 | udayavani editorial |

ಹೊಸದಿಲ್ಲಿ : ಬಾಲಿವುಡ್‌ನ‌ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಆಗಿಯೇ ಉಳಿದಿರುವ ಮುದ್ದು ಮುಖದ ರಣಬೀರ್‌ ಕಪೂರ್‌ ಈಗಿನ್ನು ಸದ್ಯದಲ್ಲೇ ವಿವಾಹವಾಗಲಿದ್ದಾರೆಯೇ ? ಹೌದು ಎನ್ನುತ್ತದೆ ಡಿಎನ್‌ಎ ವರದಿ. 

Advertisement

ವರದಿ ಪ್ರಕಾರ ರಣಬೀರ್‌ ಮದುವೆಯಾಗಲಿರುವ ಹುಡುಗಿ ಲಂಡನ್‌ ನವಳು. ಆಕೆಯ ತಂದೆ ಭಾರೀ ದೊಡ್ಡ ಉದ್ಯಮಿ.

ಈ ಹುಡುಗಿಯನ್ನು ನೋಡಲು ರಣಬೀರ್‌ ಕಪೂರ್‌ ಮತ್ತು ಆತನ ತಾಯಿ, ಮಾಜಿ ಬಾಲಿವುಡ್‌ ನಟಿ ನೀತೂ ಈಚೆಗೆ ಲಂಡನ್‌ ಹೋಗಿದ್ದರು. ಮಾತ್ರವಲ್ಲ ಹುಡುಗಿಯ ಮನೆಯವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದರು; ಈ ಭೇಟಿಯನ್ನು ನೀತೂ ಅವರ ಅತ್ಯಂತ ನಿಕಟ ಸ್ನೇಹಿತರೊಬ್ಬರು ವ್ಯವಸ್ಥೆಮಾಡಿದ್ದರು ಎಂದು ವರದಿ ತಿಳಿಸಿದೆ. 

ರಣಬೀರ್‌ನ ಈ ಹಿಂದಿನ ಗರ್ಲ್ ಫ್ರೆಂಡ್‌ಗಳಾಗಿದ್ದ ದೀಪಿಕಾ ಪಡುಕೋಣೆ ಮತ್ತು ಕತ್ರೀನಾ ಕೈಫ್, ರಣಬೀರ್‌ ಅಮ್ಮ ನೀತೂ ಕಪೂರ್‌ ಗೆ ಒಂದಿನಿತೂ ಇಷ್ಟವಿರಲಿಲ್ಲವಂತೆ. ರಣಬೀರ್‌ ಮದುವೆಯಾಗುವ ಹುಡುಗಿ ಬಾಲಿವುಡ್‌ಗೆ ಸೇರಿದವಳಾಗಿರಲೇಬಾರದು ಎಂಬುದು ನೀತೂ ಹಠವಂತೆ ! 

ಅಂತೂ ರಣಬೀರ್‌ ಮತ್ತು ಆತನ ತಾಯಿ ನೀತೂ ಕಪೂರ್‌, ಲಂಡನ್‌ನಲ್ಲಿ ಹುಡುಗಿಯನ್ನು ನೋಡಿದ್ದಾರೆ. ಮಾತುಕತೆಯನ್ನೂ ನಡೆಸಿದ್ದಾರೆ. ಅಂತಿರುವಾಗ ರಣಬೀರ್‌ ಮದುವೆ ಇನ್ನು ಬೇಗನೆ ನಡೆಯುವುದನ್ನು  ನಿರೀಕ್ಷಿಸಲಾಗಿದೆಯಂತೆ ! 
 

Advertisement
Advertisement

Udayavani is now on Telegram. Click here to join our channel and stay updated with the latest news.

Next