ಮುಂಬೈ: ಹಲವು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ನಟ ರಣ್ ಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಜೋಡಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಕುರಿತಾಗಿ ಗುಸು ಗುಸು ಸುದ್ದಿ ಹರಿದಾಡುತ್ತಿತ್ತು. ಆದರೆ ಇದೀಗ ಆ ಗಾಸಿಪ್ ಗಳಿಗೆ ನಟ ರಣ್ ಬೀರ್ ಕಪೂರ್ ತೆರೆ ಎಳೆದಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ರಣ್ ಬೀರ್, “ಆಲಿಯಾ ಭಟ್ ನನ್ನ ಗರ್ಲ್ ಫ್ರೆಂಡ್” ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಸದ್ಯದಲ್ಲಿಯೇ ನಾವಿಬ್ಬರೂ ವಿವಾಹವಾಗಲಿದ್ದೇವೆ ಎಂದಿದ್ದಾರೆ.
ಲಾಕ್ ಡೌನ್ ನಲ್ಲಿ ಒಟ್ಟಿಗೆ ಕಾಲ ಕಳೆದ ಜೋಡಿ
ಕೋವಿಡ್ ಆರಂಭಗೊಂಡ ನಂತರದ ಲಾಕ್ ಡೌನ್ ಸಮಯದಲ್ಲಿ ಒಟ್ಟಿಗೆ ಕಾಲ ಕಳೆದಿರುವುದಾಗಿ ಹೇಳಿಕೊಂಡಿರುವ ರಣ್ ಬೀರ್, ‘ನಾವು ಲಾಕ್ ಡೌನ್ ನಲ್ಲಿ ಒಟ್ಟಿಗೆ ಸಿನಿಮಾ ಮತ್ತು ಟಿವಿ ಶೋಗಳನ್ನು ವೀಕ್ಷಿಸುತ್ತಿದ್ದೆವು. ಈ ಸಮಯದಲ್ಲಿ ನನ್ನ ಗರ್ಲ್ ಫ್ರೆಂಡ್ ಆಲಿಯಾ, ಗಿಟಾರ್, ಚಿತ್ರ ಕಥೆ ಬರೆಯುವುದು ಸೇರಿದಂತೆ ಹಲವು ವಿಚಾರಗಳನ್ನು ಆನ್ ಲೈನ್ ಮೂಲಕ ಕಲಿತಿದ್ದಾಳೆ. ಅವಳ ಎದುರು ನಾನು ಏನೂ ಸಾಧನೆ ಮಾಡದ ವ್ಯಕ್ತಿಯಾಗಿ ಕಾಣುತ್ತಿದ್ದೇನೆ ಎಂದು ಗುಣಗಾನ ಮಾಡಿದ್ದಾರೆ.
ಕೋವಿಡ್ ಕಾರಣದಿಂದಾಗಿ ನಮ್ಮ ವಿವಾಹ ಸ್ವಲ್ಪ ತಡವಾಗಿದೆ. ಲಾಕ್ ಡೌನ್ ಇಲ್ಲದೆ ಇದ್ದಿದ್ದರೆ ಈ ವರ್ಷವೇ ನಾವು ಹಸೆಮಣೆ ಏರುತ್ತಿದ್ದೆವು ಎಂದಿದ್ದಾರೆ. ಈ ಹಿಂದೆ ಹಲವಾರು ಕಾರ್ಯಕ್ರಮಗಳಲ್ಲಿ ರಣ್ ಬೀರ್ – ಆಲಿಯಾ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಇತ್ತೀಚಿಗಷ್ಟೇ ವಿದೇಶ ಪ್ರವಾಸದ ಜೊತೆಗೆ ಗೋವಾದಲ್ಲಿ ಕೂಡ ಸಮಯ ಕಳೆದು ವಾಪಾಸಾಗಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:2020ರ ಅತ್ಯುತ್ತಮ ವೆಬ್ ಸರಣಿಗಳು