Advertisement

ತನ್ನ ಜೀವನಾಧಾರಿತ ಚಿತ್ರದ ನಾಯಕ ರಣ್‌ವೀರ್‌ನನ್ನು ಹಾಡಿ ಹೊಗಳಿದ ಕಪಿಲ್‌ ದೇವ್

03:12 PM Dec 23, 2021 | Team Udayavani |

ನವದೆಹಲಿ: ಕ್ರಿಕೆಟ್ ನ ದಂತಕಥೆ ಕಪಿಲ್ ದೇವ್ ಅವರ ಜೀವನಾಧಾರಿತ ಚಿತ್ರ ‘83 ಬಿಡುಗಡೆಗೆ ಸಿದ್ಧವಾಗಿದೆ. ಈ ವೇಳೆ ಕಪಿಲ್ ದೇವ್‌‌ ಈ ಚಿತ್ರದ ನಾಯಕ ರಣ್‌ವೀರ್ ಸಿಂಗ್‌ ನ್ನು ಟ್ರೈಲರ್‌ ರಿಲೀಸ್‌ ಸಮಾರಂಭದಲ್ಲಿ ಹಾಡಿ ಹೊಗಳಿದ್ದಾರೆ.

Advertisement

ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ ಈ ಚಿತ್ರವು ಕಪಿಲ್‌ ದೇವ್ ಭಾರತೀಯ ಕ್ರಿಕೆಟ್‌ ತಂಡದ ನಾಯಕರಾಗಿದ್ದಾಗದ ಅಂದರೆ, 1983ರ ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡವು ಐತಿಹಾಸಿಕ ಗೆಲುವನ್ನು ಈ ಚಿತ್ರ ಕಥೆ ಆಧರಿಸಿದೆ. ಈ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ನಟಿಸುತ್ತಿದ್ದು, ಕಪಿಲ್ ಪತ್ನಿ ರೋಮಿ ದೇವ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.

 

ಇದನ್ನೂ ಓದಿ: ಲೂಧಿಯಾನ ಕೋರ್ಟ್ ಆವರಣದಲ್ಲಿ ಸ್ಫೋಟ: ಕನಿಷ್ಠ ಇಬ್ಬರು ಸಾವು

Advertisement

ರಣವೀರ್ ಸಿಂಗ್ ಬಗ್ಗೆ ಮಾತನಾಡಿದ ಕಪಿಲ್,  ರಣ್‌ವೀರ್‌ನ ನಟನೆ ಮತ್ತು ಉತ್ಸಾಹ  ಅದ್ಭುತ ಎಂದು ಹೊಗಳಿದರು. ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಕಪಿಲ್ ತಿಳಿಸಿದರು.

 

ಈ ಚಿತ್ರದ ಟ್ರೈಲರ್‌ನಲ್ಲಿರುವ ಸಣ್ಣ ತುಣುಕುಗಳನ್ನು ನೋಡಿಯೇ ನನ್ನ ಮೈ ರೋಮಾಂಚನವಾಗುತ್ತಿದೆ, ಈ ಚಿತ್ರಕ್ಕೆ ನಟ – ನಟಿಯರು ಮಾಡಿದ ಪ್ರಯತ್ನ ವಿಶೇಷವಾದದ್ದು ಎಂದು ಕಪಿಲ್ ಚಿತ್ರ ತಂಡವನ್ನು ಪ್ರಶಂಸೆ ಮಾಡಿದರು.  ಕಬೀರ್ ಖಾನ್ ನಿರ್ದೇಶನದ 83 ಚಿತ್ರವು  ಡಿಸೆಂಬರ್ 24 ರಂದು ಥಿಯೇಟರ್‌ಗಳಲ್ಲಿ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next