Advertisement
ಇದರಂತೆ “ಎಲೈಟ್ ಎ-ಬಿ’ ಹಂತದ ತೃತೀಯ ಸ್ಥಾನಿ ಕರ್ನಾಟಕ “ಎಲೈಟ್ ಸಿ’ ಹಂತದ ಅಗ್ರಸ್ಥಾನಿಯಾದ ಜಮ್ಮು ಕಾಶ್ಮೀರವನ್ನು ಎದುರಿ ಸಲಿದೆ. ಈ ಮುಖಾಮುಖೀ ಜಮ್ಮುವಿನಲ್ಲಿ ನಡೆಯಲಿದೆ.
ನಾಕೌಟ್ ಹಂತದಿಂದ ರಣಜಿ ಪಂದ್ಯಗಳು 5 ದಿನಗಳ ಕಾಲ ನಡೆಯಲಿವೆ. ನಾಲ್ಕೂ ಕ್ವಾರ್ಟರ್ ಫೈನಲ್ ಪಂದ್ಯಗಳು ಫೆ. 20ರಿಂದ ಆರಂಭಗೊಂಡು ಫೆ. 24ಕ್ಕೆ ಕೊನೆಗೊಳ್ಳುತ್ತವೆ. ಹೀಗಾಗಿ ಎಲ್ಲ ಪಂದ್ಯಗಳು ಸ್ಪಷ್ಟ ಫಲಿತಾಂಶ ಕಾಣುವುದರಲ್ಲಿ ಅನುಮಾನವಿಲ್ಲ. ಇಲ್ಲವಾದರೆ ಮೊದಲ ಇನ್ನಿಂಗ್ಸ್ ಮುನ್ನಡೆ ನಿರ್ಣಾಯಕವಾಗಲಿದೆ.
Related Articles
ರಣಜಿ ತಂಡಗಳನ್ನು ಒಟ್ಟು 3 ಗುಂಪುಗಳಾಗಿ ವಿಂಗಡಿಸಿ ಲೀಗ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಇದರಂತೆ “ಎಲೈಟ್ ಎ-ಬಿ ವಿಭಾಗ’ದ 5 ಅಗ್ರಸ್ಥಾನಿ ತಂಡಗಳು, “ಎಲೈಟ್ ಸಿ ವಿಭಾಗ’ದ ಅಗ್ರ 2 ತಂಡಗಳು ಹಾಗೂ ಪ್ಲೇಟ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ತಂಡ ಸೇರಿದಂತೆ ಒಟ್ಟು 8 ತಂಡಗಳು ನಾಕೌಟ್ ಹಂತಕ್ಕೆ ತೇರ್ಗಡೆಯಾಗಿವೆ.
Advertisement
ರಣಜಿ ಕಿಂಗ್ ಖ್ಯಾತಿಯ ಮುಂಬಯಿ, ಕಳೆದೆರಡು ಬಾರಿಯ ಚಾಂಪಿಯನ್ ವಿದರ್ಭ ಮೊದಲಾದ ದೊಡ್ಡ ಹಾಗೂ ಬಲಿಷ್ಠ ತಂಡಗಳೆಲ್ಲ ಈ ಸಲ ಲೀಗ್ ಹಂತದಲ್ಲೇ ಉದುರಿ ಹೋದವು. ಕಾಶ್ಮೀರ, ಗೋವಾದಂಥ ತಂಡಗಳು ಇವನ್ನು ಮೀರಿ ನಿಂತದ್ದು ವಿಶೇಷ. ಇದರಿಂದ ರಣಜಿ ಲೀಗ್ ಮಾದರಿಯ ಬಗ್ಗೆ ಅಪಸ್ವರವೆದ್ದಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.
ಸಿ ವಿಭಾಗದ ಅಗ್ರಸ್ಥಾನಿ ಜಮ್ಮು ಕಾಶ್ಮೀರ 9ರಲ್ಲಿ 6 ಪಂದ್ಯಗಳನ್ನು ಗೆದ್ದು 39 ಅಂಕ ಸಂಪಾದಿಸಿದೆ. ಒಡಿಶಾ ಐದನ್ನು ಗೆದ್ದು ದ್ವಿತೀಯ ಸ್ಥಾನಿಯಾಯಿತು (38 ಅಂಕ). ಪ್ಲೇಟ್ ವಿಭಾಗದ ಅಗ್ರ ತಂಡವಾದ ಗೋವಾ 9ರಲ್ಲಿ 7 ಗೆಲುವು ಸಂಪಾದಿಸಿ ಕೂಟದಲ್ಲೇ ಸರ್ವಾಧಿಕ 50 ಅಂಕ ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.