Advertisement

ರಣಜಿ: ಜುಯಾಲ್‌ ಶತಕ, ಮೊಹಮ್ಮದ್‌ ಸೈಫ್‌ ಅರ್ಧಶತಕ

09:58 AM Dec 18, 2019 | Team Udayavani |

ಹುಬ್ಬಳ್ಳಿ: ಆರ್ಯನ್‌ ಜುಯಾಲ್‌ ಅವರ ಶತಕ ಹಾಗೂ ಮೊಹಮ್ಮದ್‌ ಸೈಫ್‌ ಅವರ ಅರ್ಧ ಶತಕದ ಹೊರತಾಗಿಯೂ ಉತ್ತರ ಪ್ರದೇಶ ತಂಡ ಕರ್ನಾಟಕ ವಿರುದ್ಧದ ರಣಜಿ ಪಂದ್ಯದ ಮೊದಲ ದಿನ 5 ವಿಕೆಟಿಗೆ 232 ರನ್ನುಗಳ ಸಾಧಾರಣ ಮೊತ್ತ ದಾಖಲಿಸಿದೆ.

Advertisement

ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡ ಈ ಪಂದ್ಯದಲ್ಲಿ ಆರ್ಯನ್‌ ಜುಯಾಲ್‌ (109) ಹಾಗೂ ಮೊಹಮ್ಮದ್‌ ಸೈಫ್‌ (56) 165 ರನ್‌ ದಾಖಲಿಸಿದರೆ, ಉಳಿದ ಮೂವರು ಒಟ್ಟಾರೆ 67 ರನ್‌ ಪೇರಿಸಿದರು. ಜುಯಾಲ್‌ ಮತ್ತು ಸೈಫ್ ಅವರನ್ನು ಬಿಟ್ಟರೆ ಉಳಿದವರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಿಥುನ್‌ ಅವರ ಬಿಗು ದಾಳಿಯಿಂದಾಗಿ ಉತ್ತರ ಪ್ರದೇಶದ ರನ್‌ವೇಗಕ್ಕೆ ಕಡಿವಾಣ ಬಿತ್ತು.

ಇನ್ನಿಂಗ್ಸ್‌ ಆರಂಭಿಸಿದ ಅಲ್ಮಾಸ್‌ ಶೌಕತ್‌ ಹಾಗೂ ಜುಯಾಲ್‌ 25 ಓವರ್‌ ಆಡಿ ಮೊದಲ ವಿಕೆಟಿಗೆ 56 ರನ್‌ ಪೇರಿಸಿ ಬೇರ್ಪಟ್ಟರು. ಆಬಳಿಕ ಬಂದ ಮಾಧವ ಕೌಶಿಕ್‌ ತಂಡದ ಮೊತ್ತ 80 ರನ್‌ ತಲುಪಿದಾಗ ಪೆವಿಲಿಯನ್‌ಗೆ ಮರಳಿದರು. ಆದರೆ ಇನ್ನೊಂದು ಬದಿಯಲ್ಲಿ ಕ್ರೀಸ್‌ನಲ್ಲಿ ಸ್ಥಿರವಾಗಿ ನಿಂತು ಆಡಿದ ಜುಯಾಲ್‌ ಕರ್ನಾಟಕ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.

42ನೇ ಓವರ್‌ನಲ್ಲಿ ಅರ್ಧ ಶತಕ ದಾಖಲಿಸಿದ ಆರ್ಯನ್‌ ಜುಯಾಲ್‌ 79ನೇ ಓವರ್‌ನಲ್ಲಿ ಶತಕ ಗಳಿಸಿದರು. ಮುಂದಿನ ಓವರ್‌ನಲ್ಲಿಯೇ ಮೊಹಮ್ಮದ್‌ ಸೈಫ್‌ ಅರ್ಧ ಶತಕ ಗಳಿಸಿದರು. ರಣಜಿಯಲ್ಲಿ ದ್ವಿತೀಯ ಪಂದ್ಯವನ್ನಾಡಿದ ಜುಯಾಲ್‌ಗೆ ಇದು ಮೊದಲ ಶತಕವಾಗಿದೆ. 19 ವರ್ಷ ವಯೋಮಿತಿ ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಆಡಿದ್ದ ಜುಯಾಲ್‌ 84ನೇ ಓವರ್‌ನಲ್ಲಿ ಅಭಿಮನ್ಯು ಮಿಥುನ್‌ ಬೌಲಿಂಗ್‌ನಲ್ಲಿ ದೇವದತ್ತ ಪಡಿಕ್ಕಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಅವರು 11 ಬೌಂಡರಿಗಳನ್ನೊಳಗೊಂಡ 109 ರನ್‌ ದಾಖಲಿಸಿದರು. ಜುಯಾಲ್‌ ಹಾಗೂ ಸೈಫ್‌ ಜೋಡಿ 4ನೇ ವಿಕೆಟ್‌ ಜೊತೆಯಾಟದಲ್ಲಿ 109 ರನ್‌ ಗಳಿಸಿದರು. ಜುಯಾಲ್‌ಗೆ ಸಾಥ್‌ ನೀಡಿದ ಸೈಫ್‌ 56 ರನ್ನುಗಳೊಂದಿಗೆ ಆಡುತ್ತಿದ್ದಾರೆ. ಅವರು ಈಗಾಗಲೇ 8 ಬೌಂಡರಿ ಬಾರಿಸಿದ್ದಾರೆ.

ಬೌಲರ್‌ಗಳ ಪರದಾಟ
ಜುಯಾಲ್‌ ವಿಕೆಟ್‌ ಪಡೆಯಲು ಹೆಣಗಿದ ಕರ್ನಾಟಕದ ಬೌಲರ್‌ಗಳು ಶತಕ ದಾಖಲಿಸುವುದನ್ನು ತಡೆಯಲಾಗಲಿಲ್ಲ. ಸುಚಿತ್‌ 68 ರನ್‌ ನೀಡಿ ದುಬಾರಿ ಎನಿಸಿದರು. ಅಭಿಮನ್ಯು ಮಿಥುನ್‌ 3 ವಿಕೆಟ್‌ ಗಳಿಸಿದರು. ಇದರೊಂದಿಗೆ ಮಿಥುನ್‌ ರಣಜಿಯಲ್ಲಿ 251 ವಿಕೆಟ್‌ ಗಳಿಸಿದ ಬೌಲರ್‌ ಎಂಬ ಖ್ಯಾತಿಗೆ ಪಾತ್ರರಾದರು.

Advertisement

ಕರ್ನಾಟಕದ ಪವನ್‌ ದೇಶಪಾಂಡೆ ಗಾಯದ ಕಾರಣದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ. ಮಾಯಾಂಕ್‌ ಅಗರ್ವಾಲ್‌ ವೆಸ್ಟ್‌ಇಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಪರ ಆಡುತ್ತಿದ್ದಾರೆ. ಹೀಗಾಗಿ ಅಭಿಷೇಕ್‌ ರೆಡ್ಡಿ ಹಾಗೂ ಆರ್‌.ಸಮರ್ಥ್ ಅವಕಾಶ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next