Advertisement
ಉಪವಾಸ ವ್ರತಾಚರಣೆಯ ಸಂದರ್ಭದಲ್ಲಿ ದೈಹಿಕವಾಗಿ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ನಿಯಂತ್ರಿಸುವ ಸಲುವಾಗಿ ಹಣ್ಣು ಹಂಪಲು ಅಥವಾ ತರಕಾರಿಗಳನ್ನು ಎಂದಿಗಿಂತ ಒಂದಿಷ್ಟು ಜಾಸ್ತಿ ಬಳಕೆ ಮಾಡುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಮಾರುಕಟ್ಟೆಯಲ್ಲಿ ಆಯ್ದ ಹಣ್ಣು ಮತ್ತು ತರಕಾರಿಗಳ ಬೆಲೆಗಳು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿವೆ.
Related Articles
ಮಂಗಳೂರಿನ ಮಾರುಕಟ್ಟೆಗೆ ಪಪ್ಪಾಯಿ ರಾಜ್ಯದ ಚಿತ್ರದುರ್ಗ, ಹುಣಸೂರು ಮತ್ತು ಆಂಧ್ರ ಪ್ರದೇಶದಿಂದ ಆವಕವಾಗುತ್ತಿದೆ. ಹಾಗಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಆಗದಿರುವುದರಿಂದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
Advertisement
ಕೊರತೆ ಇಲ್ಲತರಕಾರಿಗಳ ಪೈಕಿ ಟೊಮೇಟೊ, ಬೀನ್ಸ್ ಮತ್ತು ಕೊತ್ತಂಬರಿ ಸೊಪ್ಪು ಧಾರಣೆ ತುಸು ಜಾಸ್ತಿಯಾಗಿದೆ. ಆದರೆ ಪೂರೈಕೆ ಧಾರಾಳ ಇರುವುದರಿಂದ ಮಾರು ಕಟ್ಟೆಯಲ್ಲಿ ಕೊರತೆ ಕಂಡು ಬಂದಿಲ್ಲ. ಧಾರಾಳವಾಗಿ ಸರಬರಾಜು
ಪಪ್ಪಾಯಿ ಹೊರತು ಪಡಿಸಿ ಬೇರೆ ಯಾವುದೇ ಹಣ್ಣು ಹಂಪಲುಗಳ ಬೆಲೆ ಜಾಸ್ತಿಯಾಗಿಲ್ಲ. ಹಾಗೆಯೇ ಪಪ್ಪಾಯಿ ಹೊರತು ಪಡಿಸಿ ಇತರ ಹಣ್ಣುಗಳ ಪೂರೈಕೆಯಲ್ಲಿಯೂ ಕೊರತೆ ಇಲ್ಲ. ಉಳಿದೆಲ್ಲ ಹಣ್ಣುಗಳು ಧಾರಾಳವಾಗಿ ಸರಬರಾಜು ಆಗುತ್ತಿವೆ. ಯಾವುದೇ ಸಮಸ್ಯೆ ಇಲ್ಲ.
- ಬಶೀರ್, ಸೆಂಟ್ರಲ್
ಮಾರ್ಕೆಟ್‌ನ ಹಣ್ಣಿನ ವ್ಯಾಪಾರಿ ಬೆಲೆ ಯಥಾ ಸ್ಥಿತಿ
ಈಗ ಮದುವೆ ಸೀಸನ್ ಬಹುತೇಕ ಮುಕ್ತಾಯವಾಗಿದೆ. ಹಾಗಾಗಿ ತರಕಾರಿಗಳ ಪೂರೈಕೆ ಸಾಕಷ್ಟಿದೆ. ಟೊಮೇಟೊ, ಬೀನ್ಸ್ ಮತ್ತು ಕೊತ್ತಂಬರಿ ಸೊಪ್ಪು ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಇತರ ಎಲ್ಲ ತರಕಾರಿಗಳ ಬೆಲೆ ಯಥಾ ಸ್ಥಿತಿಯಲ್ಲಿದೆ.
– ಡೇವಿಡ್ ಡಿ’ಸೋಜಾ,
ತರಕಾರಿ ವರ್ತಕರು, ಸೆಂಟ್ರಲ್ ಮಾರ್ಕೆಟ್