Advertisement

ನಕಲಿ ಫೋಟೋ ಟ್ವೀಟ್‌ ಮಾಡಿದ ರಮ್ಯಾ

11:37 PM Apr 29, 2019 | Lakshmi GovindaRaju |

ನವದೆಹಲಿ: ಕಾಂಗ್ರೆಸ್‌ನ ಮಾಜಿ ಸಂಸದೆ ರಮ್ಯಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನಾಜಿ ನಾಯಕ ಅಡಾಲ್ಫ್ ಹಿಟ್ಲರ್‌ ಒಂದೇ ರೀತಿಯಲ್ಲಿ ಮಕ್ಕಳ ಕಿವಿ ಹಿಂಡುತ್ತಿರುವ ಫೋಟೋವೊಂದನ್ನು ಪ್ರಕಟಿಸಿ ಟೀಕೆಗೆ ಗುರಿಯಾಗಿದ್ದಾರೆ.

Advertisement

ಈ ಹಿಂದೆ ಮೋದಿ ಕೊಟೊಗೆ ಭೇಟಿ ನೀಡಿದ್ದಾಗ ತಮಾಷೆಗಾಗಿ ಮಗುವಿನ ಕಿವಿ ಹಿಂಡಿದ ಫೋಟೋ ಜೊತೆಗೆ, ಹಿಟ್ಲರ್‌ ಕೂಡ ಇದೇ ರೀತಿ ಮಕ್ಕಳ ಕಿವಿ ಹಿಂಡುತ್ತಿದ್ದ ಫೋಟೋವನ್ನು ರಮ್ಯಾ ಹಂಚಿಕೊಂಡಿದ್ದರು. ಇದಕ್ಕೇನು ಹೇಳುತ್ತೀರಿ ಎಂಬ ಶೀರ್ಷಿಕೆಯನ್ನೂ ಅವರು ಇದಕ್ಕೆ ನೀಡಿದ್ದರು.

ಆದರೆ ಮಗುವಿನ ಕಿವಿ ಹಿಂಡುತ್ತಿರುವ ಹಿಟ್ಲರ್‌ ಫೋಟೋ ನಕಲಿಯಾಗಿದ್ದು, ಮೂಲ ಚಿತ್ರದಲ್ಲಿ ಮಗುವಿನ ಭುಜದ ಮೇಲೆ ಹಿಟ್ಲರ್‌ ಕೈ ಇಟ್ಟುಕೊಂಡಿದ್ದಾರೆ. ಆದರೆ ರಮ್ಯಾ ಹಂಚಿಕೊಂಡಿರುವ ಫೋಟೋದಲ್ಲಿ ಹಿಟ್ಲರ್‌ ಫೋಟೋವನ್ನು ತಿರುಚಲಾಗಿರುವುದು ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next