ಇತ್ತೀಚೆಗಷ್ಟೇ ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿ ಎಂದು ಗುರುತಿ ಸಿಕೊಂಡಿದ್ದ ರೋಹಿಣಿ ಸಿಂಧೂರಿ ವರ್ಗಾವಣೆ ವಿಷಯ ರಾಜಕೀಯ ವಲಯದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗೆ ಕಾರಣವಾಗಿರುವುದು ನಿಮಗೆ ಗೊತ್ತಿರಬಹುದು. ಈಗ ಇದೇ ವಿಷಯದ ಬಗ್ಗೆ ಚಿತ್ರರಂಗದಲ್ಲೂ ಚರ್ಚೆಯಾಗುತ್ತಿದೆ.
ರೋಹಿಣಿ ಸಿಂಧೂರಿ ಕುರಿತು “ಭಾರತ ಸಿಂಧೂರಿ’ ಎಂಬ ಸಿನಿಮಾ ಮಾಡುವ ಬಗ್ಗೆ ಒಂದಷ್ಟು ಸುದ್ದಿಗಳು ಚಿತ್ರರಂಗದಲ್ಲಿ ಹರಿದಾಡುತ್ತಿರುವಂತೆಯೇ ನಟಿ ಕಂ ರಾಜಕಾರಣಿ ರಮ್ಯಾ ಕೂಡ ರೋಹಿಣಿ ಸಿಂಧೂರಿ ಪರವಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ:ಕಳೆದ 10 ವರ್ಷಗಳಿಂದ ಇವರ ಪ್ರತಿ ಸಂಡೇಯೂ ಪ್ರಾಣಿ-ಪಕ್ಷಿಗಳ ಹಸಿವು ನೀಗಿಸಲು ಮೀಸಲು.!
ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ರಮ್ಯಾ, “ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಇಂದಿನ ರಾಜಕೀಯ ಪ್ರೋತ್ಸಾಹಿಸುವುದಿಲ್ಲ’ ಎಂದು ರಾಜಕೀಯ ವ್ಯವಸ್ಥೆಯ ವಿರುದ್ದ ಗುಡುಗಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ರಮ್ಯಾ, “ಸಿಂಧೂರಿ ಕಾರ್ಯ ವೈಖರಿಯನ್ನು ನಾನು ಅಂದು ಮೆಚ್ಚಿದ್ದೇನೆ, ಈಗಲೂ ಮೆಚ್ಚಿಕೊಳ್ಳುತ್ತೇನೆ. ಆದರೆ ಇಂದಿನ ರಾಜಕೀಯ, ಉತ್ತಮ ಕೆಲಸಗಳನ್ನು, ಪ್ರಾಮಾಣಿಕ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಿಲ್ಲ ಹಾಗೂ ಬೆಂಬಲಿಸುತ್ತಿಲ್ಲ’ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.
ಇನ್ನು ರೋಹಿಣಿ ಸಿಂಧೂರಿ ಕುರಿತು ಸಿನಿಮಾ ಮಾಡಲಾಗುವುದು ಎಂಬ ಚರ್ಚೆಯ ನಡುವೆ, ರಮ್ಯಾ ಇಂಥದ್ದೊಂದು ಪೋಸ್ಟ್ ಮಾಡಿದ್ದರಿಂದ, ಅವರೇ ಆ ಪಾತ್ರ ಮಾಡುವ ಮೂಲಕ ಸಿನಿಮಾರಂಗಕ್ಕೆ ಕಂ ಬ್ಯಾಕ್ ಆದ್ರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಕಾಮೆಂಟ್ಸ್ ಮಾಡುತ್ತಿದ್ದಾರೆ