Advertisement

Railway station: ರಾಮನಗರ-ಚನ್ನಪಟ್ಟಣ ರೈಲ್ವೆ ನಿಲ್ದಾಣ ಮೇಲ್ದರ್ಜೆ ಕಾಮಗಾರಿ ಆರಂಭ

03:16 PM Oct 30, 2023 | Team Udayavani |

ರಾಮನಗರ: ರೈಲ್ವೆ ಪ್ರಯಾಣಿಕರ ಹಲವು ದಿನಗಳ ಬೇಡಿಕೆಯಾಗಿದ್ದ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಕೊನೆಗೂ ಚಾಲನೆ ದೊರೆತಿದೆ. ಪ್ರಧಾನಮಂತ್ರಿಗಳ ಅಮೃತ ಭಾರತ ಸ್ಟೇಷನ್‌ ಯೋಜನೆಯಡಿಯಲ್ಲಿ ರಾಜ್ಯದ 54 ರೈಲ್ವೆ ನಿಲ್ದಾಣಗಳು ಅಭಿವೃದ್ಧಿಗೆ ಚಾಲನೆ ನೀಡಿದ್ದು, ಈ ಪೈಕಿ ರಾಮನಗರ ಮತ್ತು ಚನ್ನಪಟ್ಟಣ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೂ ಚಾಲನೆ ದೊರೆತಿದೆ.

Advertisement

ಇದರೊಂದಿಗೆ ಜಿಲ್ಲೆಯ ಎರಡು ರೈಲು ನಿಲ್ದಾಣಗಳು ಇದೀಗ ಆಧುನೀಕತೆಯ ಸ್ಪರ್ಶ ಪಡೆಯಲಿವೆ. ಆ.6 ರಂದು ಪ್ರಧಾನಿ ನರೇಂದ್ರ ಮೋದಿ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ದ್ದರು. ಇದರೊಂದಿಗೆ ಜಿಲ್ಲೆಯ ಈ ಎರಡು ರೈಲು ನಿಲ್ದಾಣಗಳು ಸುಮಾರು 30 ವರ್ಷಗಳ ಹಿಂದೆ ನಿರ್ಮಾಣ ಕಂಡು ಸಣ್ಣಪುಟ್ಟ ದುರಸ್ತಿಗೆ ಸೀಮಿತವಾ ಗಿದ್ದ ರೈಲು ನಿಲ್ದಾಣಗಳು ಇದೀಗ ಅಭಿವೃದ್ಧಿಯ ರಂಗು ಪಡೆಯಲಿವೆ. ಈ ಬಗ್ಗೆ ಈಶಾನ್ಯ ರೈಲ್ವೆ ತನ್ನ ಎಕ್ಸ್‌(ಟ್ವೀಟರ್‌)ಖಾತೆಯಲ್ಲಿ ಪ್ರಕಟಣೆ ನೀಡಿದೆ.

51 ಕೋಟಿ ರೂ. ಯೋಜನೆ: ಬೆಂಗಳೂರು ಎಂಜಿ ನಿಯರಿಂಗ್‌ ವಿಭಾಗಕ್ಕೆ ಸೇರಿರುವ ಮಂಡ್ಯ ಉಪವಿಭಾಗಕ್ಕೆ ಸೇರಿರುವ ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ ರೈಲು ನಿಲ್ದಾಣಗಳು 51 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿವೆ. ಈ ಪೈಕಿ ಚನ್ನಪಟ್ಟಣ ಮತ್ತು ರಾಮನಗರ ರೈಲು ನಿಲ್ದಾಣಗಳು ತಲಾ 10.17 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಪ್ರಯಾಣಿಕರಿಗೆ ಉತ್ತಮ ಸೌಕರ್ಯ ನೀಡಲು ಈ ನಿಲ್ದಾಣಗಳು ಸಹಕಾರಿಯಾಗಲಿವೆ.

ಏನೆಲ್ಲಾ ಸೌಕರ್ಯ ಇರಲಿದೆ: ಕೇಂದ್ರ ಸರ್ಕಾರದ ಗತಿಶಕ್ತಿ ಕಾರ್ಯಕ್ರಮದ ಅಮೃತಭಾರತ್‌ ಸ್ಟೇಷನ್‌ ಯೋಜನೆಯಡಿಯಲ್ಲಿ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು, ರೈಲು ನಿಲ್ದಾಣಗಳಲ್ಲಿ ಸ್ವತ್ಛ ಭಾರತ್‌ ಯೋಜನೆಗೆ ಅನುಗುಣವಾಗಿ ಶೌಚಾಲ ಯ, ದೊಡ್ಡನಗರಗಳೊಂದಿಗೆ ಸಂಪರ್ಕ ವೃದ್ಧಿ, ವಿಶೇಷಚೇತನರಿಗೆ ಅನುಕೂಲತೆಗಳು, ಪ್ರಯಾಣಿಕರ ಮಾಹಿತಿ ವ್ಯವಸ್ಥೆಗೆ ಡಿಜಿಟಲ್‌ ಸ್ಪರ್ಶ, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ, ಉಚಿತ ವೈಫೈ ಸೌಲಭ್ಯ, ನಿರೀಕ್ಷಣಾ ಕೊಠಡಿಗಳ ಅಭಿವೃದ್ಧಿ ಇವೆ. ಮೊದಲಾದ ಅವಶ್ಯಕ ಸೌಲಭ್ಯಗಳು ನವೀಕರಣ ಕಾಮಗಾರಿಯಲ್ಲಿ ನಡೆಯಲಿವೆ.

ಇದರೊಂದಿಗೆ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ, ಪ್ಲಾಟ್‌ಪಾರಂ ಗಳಲ್ಲಿ ನೆರಳು ಹಾಗೂ ಬೆಳಕಿನ ವ್ಯವಸ್ಥೆ, ಮಾಹಿತಿ ಫಲಕಗಳ ಅಳವಡಿಕೆ, ಪಾರ್ಕಿಂಗ್‌ ವ್ಯವಸ್ಥೆ ಸರಿಪಡಿ ಸುವುದು, ಅವಶ್ಯಕವಿಲ್ಲದ ಫಲಕ, ಅಂಗಡಿಗಳು ಮೊದ ಲಾದ ಕಟ್ಟಡಗಳನ್ನು ತೆರವು ಮಾಡಲಾಗುವುದು ಎಂದು ರೈಲ್ವೆ ಇಲಾಖೆಮೂಲಗಳು ಮಾಹಿತಿ ನೀಡಿವೆ.

Advertisement

ಜಿಲ್ಲಾ ಮತ್ತು ತಾಲೂಕು ನಿಲ್ದಾಣಗಳಲ್ಲಿ ಲಿಫ್ಟ್‌ ಸೌಲಭ್ಯ: ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಾತ್ರ ಇದ್ದ ಎಕ್ಸಲೇಟರ್‌ ಮತ್ತು ಲಿಫ್ಟ್‌ ಸೌಲಭ್ಯವನ್ನು ಈ ನಿಲ್ದಾಣಗಳಲ್ಲೂ ಕಲ್ಪಿಸಲಾಗುವುದು. ಇದರಿಂದಾಗಿ ರೈಲು ಅಳಿ ದಾಟಲು ಪಾದಚಾರಿಗಳ ಮೇಲ್ಸೇತುವೆ ಬಳಸುವ ವೃದ್ಧರು ಮತ್ತು ವಿಶೇಷ ಚೇತನರಿಗೆ ಅನುಕೂಲವಾಗಲಿದೆ. ಅತಿಹೆಚ್ಚು ಪ್ರಯಾಣಿ ಕರು ಸಂಚರಿಸುವ ಈ ರೈಲ್ವೆ ನಿಲ್ದಾಣಗಳಲ್ಲಿ ಇದುವರೆಗೆ ರೈಲು ಹಳಿ ದಾಟಲು ಪರದಾಟುತ್ತಿದ್ದ ಈ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ.

ಜಿಲ್ಲೆಯ ಈ ಎರಡು ರೈಲು ನಿಲ್ದಾಣಗಳಲ್ಲಿ ಇದುವರೆಗೆ ಪ್ರಯಾಣಿಕರು ರೈಲ್ವೆ ಹಳಿ ದಾಟಲು ಕೇವಲ ಒಂದೇ ಒಂದು ಮೇಲ್ಸೇತುವೆ ಇದ್ದು, ನವೀಕರಣದ ಸಮಯದಲ್ಲಿ ಮತ್ತೂಂದು ಮೇಲ್ಸೇತುವೆಯನ್ನು ನಿರ್ಮಿಸಲಾಗುವುದು, ಈ ಫುಟ್‌ಓವರ್‌ ಬ್ರಿಡ್ಜ್ಗಳು ಪ್ರಸ್ತುತ 3 ಮೀಟರ್‌ ಅಗಲ ಹೊಂದಿದ್ದು ಹೊಸಾದಾಗಿ ನಿರ್ಮಾಣ ಗೊಳ್ಳುವ ಬ್ರಿಡ್ಜ್ಗಳು 12 ಮೀಟರ್‌ ಅಗಲ ಇರಲಿವೆ.

-ಸು.ನಾ.ನಂದಕುಮಾರ್‌  

Advertisement

Udayavani is now on Telegram. Click here to join our channel and stay updated with the latest news.

Next