Advertisement

ನಾಳೆ ಸಿದ್ದರಾಮೇಶ್ವ ರ ದೇಗುಲ ಉದ್ಘಾ ಟನೆ

06:34 PM Jul 06, 2021 | Team Udayavani |

ಕಲಬುರಗಿ: ಜಿಲ್ಲೆಯ ಅಫ‌ಜಲಪುರ ತಾಲೂಕಿನ ಘೂಳನೂರು ಗ್ರಾಮದಲ್ಲಿ ಜು.7ರಂದು ಮಧ್ಯಾಹ್ನ 2 ಗಂಟೆಗೆ ಶ್ರೀಗುರು ಸಿದ್ದರಾಮೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಸಮಾರಂಭ ನಡೆಯಲಿದೆ ಎಂದು ಜಿಪಂ ಮಾಜಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ್‌ ತಿಳಿಸಿದರು.

Advertisement

ಶ್ರೀಶೈಲ ಸಾರಂಗ ಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮತ್ತು ಸೊನ್ನದ ವಿರಕ್ತ ಮಠದ ಡಾ.ಶಿವಾನಂದ ಸ್ವಾಮಿಗಳ ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 900 ವರ್ಷಗಳ ಹಿಂದೆ ಸಿದ್ದರಾಮೇಶ್ವರರು ಇಲ್ಲಿಗೆ ಬಂದು ತಪಸ್ಸು ಮಾಡಿದ್ದರು. ಶ್ರೀಗಳು ಮತ್ತು ಭಕ್ತರ ಆಪೇಕ್ಷೆ ಮೇರೆಗೆ ದೇವಸ್ಥಾನ ನಿರ್ಮಿಸಲಾಗಿದೆ ಎಂದರು. ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯವನ್ನು ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು ಮತ್ತು ನೇತೃತ್ವವನ್ನು ಡಾ.ಶಿವಾನಂದ ಸ್ವಾಮಿಗಳ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ದೇವಸ್ಥಾನ ಉದ್ಘಾಟಿಸುವರು.

ನೂತನ ಗೋಪುರದ ಕಳಸಾರೋಹಣವನ್ನು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌ ನೆರವೇರಿಸುವರು. ಅಫ‌ಜಲಪುರ ಶಾಸಕ ಎಂ.ವೈ.ಪಾಟೀಲ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದರು. ಸಮಾಜ ಕಲ್ಯಾಣ ಇಲಾಖೆಯ ಸಚಿವ ಬಿ.ಶೀÅರಾಮುಲು, ವಿಧಾನ ಪರಿಷತ್‌ ಸದಸ್ಯರಾದ ಜಿ.ಪಾಟೀಲ್‌, ಶಶೀಲ್‌ ನಮೋಶಿ, ವಿಧಾನ ಪರಿಷತ್‌ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಚಂದು ಪಾಟೀಲ್‌, ಜಿಪಂ ಮಾಜಿ ಅಧ್ಯಕ್ಷ ನಿತಿನ್‌ ಗುತ್ತೇದಾರ, ಉದ್ಯಮಿ ಅಶೋಕ ಗುತ್ತೇದಾರ ಬಡದಾಳ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ವಿವರಿಸಿದರು.

ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣು ನಡೆದಾಡಿದ ನೆಲ ಇದು. ಘೂಳನೂರು ಐತಿಹಾಸಿಕ ಮಹ್ವತವನ್ನು ಹೊಂದಿದ ಸ್ಥಳ. ಇಲ್ಲಿನ ಭಕ್ತರು ಮತ್ತು ಸರ್ಕಾರ ನೆರವಿನೊಂದಿಗೆ 55 ಲಕ್ಷ ರೂ. ವೆಚ್ಚದಲ್ಲಿ ಸಿದ್ದರಾಮೇಶ್ವರ ದೇವಾಲಯ ನಿರ್ಮಿಸಲಾಗಿದೆ. ಗೋಪುರಕ್ಕೆ 9 ಲಕ್ಷ ರೂ. ವ್ಯಯಿಸಲಾಗಿದೆ ಎಂದರು. ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಆರು ಜನ ಸಾಧಕರಿಗೆ “ಸುಲಫ‌ಲ ಶ್ರೀ’ ಮತ್ತು “ಬಸವ ಶ್ರೀರಕೆ’Ò ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next