ತೀರ್ಥಹಳ್ಳಿ: ಪುರಾಣ ಪ್ರಸಿದ್ದ ತೀರ್ಥಹಳ್ಳಿ ರಾಮೇಶ್ವರ ದೇವರ ತಟದಲ್ಲಿರುವ ತುಂಗಾ ನದಿ ತೀರದಲ್ಲಿ ರಂಗಿನ ಬೆಳಕಿನ ಚಿತ್ತಾರ ನಡುವೆ ನಡೆದ ತೆಪ್ಪೋತ್ಸವಕ್ಕೆ ಭಾನುವಾರ ವೈಭವದ ತೆರೆಕಂಡಿತು.
ರಾಜ್ಯದಾದ್ಯಂತ ದಿಂದ ಆಗಮಿಸಿದ ಸಹಸ್ರ ಸಂಖ್ಯೆಯ ಭಕ್ತರ ಆಕಷ೯ಕ ಕ್ಷಣಗಳನ್ನು,ಸಿಡಿಮದ್ದಿನ ವರ್ಣರಂಜಿತ ಪ್ರದರ್ಶನ ನೋಡಿ ಕಣ್ತುಂಬಿಕೊಂಡರು.
ಮುಗಿಲಿಗೆ ಚಿಮ್ಮಿದ ಬಣ್ಣದ ಚಿತ್ತಾರ:
ಆಕಷ೯ಕ ವಿದ್ಯುತ್ ದೀಪಾಂಲಕೃತಗೊಂಡ ತುಂಗಾ ನದಿ ತೀರದಲ್ಲಿ ಸುಮಾರು 2 ಗಂಟೆಗಳ ಕಾಲ ಸಿಡಿಮದ್ದು ಬಾನಿನಲ್ಲಿ ಸಿಡಿದು ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ನೋಡುಗರ ಮನ ಸೂರೆಗೊಂಡಿತು. ನದಿಯಲ್ಲಿ ತೇಲಿ ಬಂದ ಸಾವಿರಾರು ಹಣತೆ ದೀಪಗಳು ,ಬಾನಂಗಳದಲ್ಲಿ ಸಿಡಿಯುವ ಬಣ್ಣದ ಚಿತ್ತಾರಗಳ ಪ್ರತಿಬಿಂಬ ಹರಿಯುವ ನೀರಿನಲ್ಲಿ ಕಂಡು ಜನ ಪುಳಕಿತರಾದರು.
ವರದಿ : ಹೆಬ್ರಿ ಉದಯಕುಮಾರ್ ಶೆಟ್ಟಿ