ಹೊಸದಿಲ್ಲಿ: ಗುರುವಾರ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಗಿ ರಮೇಶ್ ಪೊವಾರ್ ಅವರನ್ನು ಮತ್ತೆ ನೇಮಿಸಿದ ಬೆನ್ನಲ್ಲೇ ವಿವಾದವೆದ್ದಿದೆ.
ರಾಮನ್ ಅವರನ್ನು ಏಕೆ ತಿರಸ್ಕರಿಸಲಾಯಿತು, 2018ರಲ್ಲಿ ಕೋಚ್ ಸ್ಥಾನದಿಂದ ಹೊರಹಾಕಲ್ಪಟ್ಟಿದ್ದ ಪೊವಾರ್ ಅವರನ್ನು ಯಾವ ಆಧಾರದಿಂದ ಮತ್ತೆ ನೇಮಿಸಲಾಯಿತು ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.
ರಾಮನ್ ಅವರನ್ನು ತೆಗೆಯಲು ದ.ಆμÅಕಾ ವಿರುದ್ಧ ಸರಣಿಯಲ್ಲಿ ಭಾರತ ತಂಡ ಹೀನಾಯವಾಗಿ ಸೋತಿದ್ದನ್ನೇ ಪ್ರಬಲ ಕಾರಣವಾಗಿ ನೀಡಲಾಗುತ್ತಿದೆ. ಆದರೆ 2020ರಲ್ಲಿ ಇವರ ನೇತೃತ್ವದಲ್ಲೇ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್ ಫೈನಲ್‌ಗೇರಿತ್ತು ಎನ್ನುವುದನ್ನು ಮರೆಯುವಂತಿಲ್ಲ.
ಮಹಿಳಾ ತರಬೇತುದಾರರ ಆಯ್ಕೆಗೆ ಮದನ್ ಲಾಲ್, ಸುಲಕ್ಷಣಾ ನಾಯಕ್ ಅವರಿದ್ದ ಸಮಿತಿ ಸಂದರ್ಶನ ನಡೆಸಿತು.
ಸುಲಕ್ಷಣಾ ನಾಯಕ್, ಬಿಸಿಸಿಐ ಮಹಿಳಾ ಆಯ್ಕೆ ಸಮಿತಿ ಮುಖ್ಯಸ್ಥೆ ನೀತು ಡೇವಿಡ್‌ರ ಮಾಜಿ ಸಹ ಆಟಗಾರ್ತಿ ಎನ್ನುವುದು ಪ್ರಶ್ನೆಯಾಗಿದೆ. ನೀತು ಡೇವಿಡ್‌ಮತ್ತು ರಾಮನ್ ಸಂಬಂಧ ಸರಿಯಿರಲಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ