ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಆರ್ ಎಸ್ಎಸ್ ಟೋಪಿ, ಚಡ್ಡಿ ಹಾಕಿದ್ದು ನಾನೇನೂ ನೋಡಿಲ್ಲ. ಆದರೆ ಮುಸ್ಲಿಂ ಟೋಪಿ ಹಾಕಿರುವ ಬಹಳಷ್ಟು ಫೋಟೊಗಳು ನಮ್ಮ ಕಡೆ ಇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸಹೋದರ ರಮೇಶ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿದ್ದ ಫೋಟೊ ಪ್ರದರ್ಶಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ ಸಂಘ ಪರಿವಾರದಲ್ಲಿ ಇರಲಿಲ್ಲ. ಯಾವಾಗ ಆರ್ ಎಸ್ಎಸ್ ನಲ್ಲಿ ರಮೇಶ ಇದ್ದರು ಎಂಬುದು ನಮಗೆ ಗೊತ್ತಿಲ್ಲ. ಮುಸ್ಲಿಂ ಪರವಾಗಿ ಇದ್ದರು ಎಂಬುದು ಗೊತ್ತು. ಆರ್ ಎಸ್ಎಸ್ ಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಅರುಣ್ ಸಿಂಗ್ ಭೇಟಿಯಾದ ರೇಣುಕಾಚಾರ್ಯ: ಯೋಗೇಶ್ವರ್ ವಿರುದ್ಧ ದೂರು
ಗೋಕಾಕನಲ್ಲಿ ಪತ್ರಾವಳಿ ಕುಟುಂಬದವರು ಕಟ್ಟಾ ಆರೆಸ್ಸೆಸ್ ನವರು. ಅವರ ಬಂಗಾರದ ಅಂಗಡಿಯಲ್ಲಿ ನಮ್ಮ ತಂದೆ ಕುಳಿತುಕೊಳ್ಳುತ್ತಿದ್ದರು. ಅದನ್ನೇ ಆರ್ ಎಸ್ಎಸ್ ಎಂದು ಬಿಂಬಿಸುತ್ತಿದ್ದಾರೆ. ಗೋವಾ ವಿಮೋಚನೆ ಚಳವಳಿಗೂ ಆರ್ ಎಸ್ಎಸ್ ಗೂ ಯಾವುದೇ ಸಂಬಂಧ ಇಲ್ಲ. ರಮೇಶ ಜಾರಕಿಹೊಳಿ ಕಾಂಗ್ರೆಸ್ ನಲ್ಲಿದ್ದಾಗ ಮುಸ್ಲಿಂ ಟೋಪಿ ಹಾಕಿಕೊಂಡಿದ್ದರು. ಆರ್ ಎಸ್ಎಸ್ ನ ಕಪ್ಪು ಟೋಪಿ ಹಾಕಿಕೊಂಡಿರುವ ಬಗ್ಗೆ ನಮಗೆ ಗೊತ್ತಿಲ್ಲ ಎಂದರು.
Related Articles
ಇದನ್ನೂ ಓದಿ:ಯಡಿಯೂರಪ್ಪ ಈಗ ದಾರಿ ತಪ್ಪಿದ ಮಗ, ಅವರ ಜೀವ ವಿಜಯೇಂದ್ರನ ಕೈಯಲ್ಲಿದೆ: ವಿಶ್ವನಾಥ್
ಬಿಜೆಪಿಯಲ್ಲಿ ಸೇರ್ಪಡೆಯಾದ ಬಳಿಕ ಮೂಲ ತತ್ವ ಸಿದ್ಧಾಂತ ಬಿಡಬಾರದು ಎಂದು ಸತೀಶ್ ಸಹೋದರನಿಗೆ ಸಲಹೆ ನೀಡಿದರು.