Advertisement

ಕೇವಲ 10 ಎಸೆತಗಳಲ್ಲಿ 50 ರನ್‌ ಹೊಡೆದಿದ್ದ ರಮೇಶ್‌ ಕುಮಾರ್‌

10:56 PM Feb 14, 2022 | Team Udayavani |

ಕೋಲ್ಕತಾ: ಐಪಿಎಲ್‌ ಹರಾಜಿನಲ್ಲಿ ಸಾಕಷ್ಟು ಅಚ್ಚರಿಯ ಹೆಸರುಗಳು ಗೋಚರಿಸಿವೆ. ಇವುಗಳಲ್ಲಿ 20 ಲಕ್ಷ ರೂ. ಮೊತ್ತಕ್ಕೆ ಕೆಕೆಆರ್‌ ಪಾಲಾದ ರಮೇಶ್‌ ಕುಮಾರ್‌ ಕೂಡ ಒಬ್ಬರು. ಯಾರು ಈ ರಮೇಶ್‌ ಕುಮಾರ್‌ ಎಂಬುದು ಎಲ್ಲರ ಪ್ರಶ್ನೆ!

Advertisement

23 ವರ್ಷದ ರಮೇಶ್‌ ಕುಮಾರ್‌ ಪಂಜಾಬ್‌ ಮೂಲದವರು. ಇನ್ನೂ ವೃತ್ತಿಪರ ಕ್ರಿಕೆಟ್‌ ಆಡಿಲ್ಲ. ಮೆಗಾ ಹರಾಜಿನಲ್ಲಿ ಅವರು ಕೆಕೆಆರ್‌ ತಂಡ ಸೇರಿಕೊಂಡ ಬೆನ್ನಲ್ಲೇ ವೀಡಿಯೋ ಒಂದು ವೈರಲ್‌ ಆಗಿದೆ. ಅದೊಂದು ಟೆನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯ. ಇದರಲ್ಲಿ ಅವರು ಕೇವಲ 10 ಎಸೆತಗಳಿಂದ 50 ರನ್‌ ಬಾರಿಸಿದ ದೃಶ್ಯಾವಳಿ ಇದೆ.

ಕೆಕೆಆರ್‌ ಫ್ರಾಂಚೈಸಿ ಮೆಗಾ ಹರಾಜಿಗೂ ಮುನ್ನವೇ ಈ ವೀಡಿಯೋ ನೋಡಿ ರಮೇಶ್‌ ಕುಮಾರ್‌ ಮೇಲೆ ಕಣ್ಣಿಟ್ಟಿತ್ತು ಎನ್ನಲಾಗಿದೆ. ರಸೆಲ್‌, ವೆಂಕಟೇಶ್‌ ಅಯ್ಯರ್‌, ರಾಣಾ, ಶ್ರೇಯಸ್‌ ಅಯ್ಯರ್‌ ಅವರಂಥ ಖ್ಯಾತ ಬ್ಯಾಟರ್‌ಗಳನ್ನು ಹೊಂದಿರುವ ತಂಡಕ್ಕೆ ರಮೇಶ್‌ ನೂತನ ಸೇರ್ಪಡೆ.

Advertisement

Udayavani is now on Telegram. Click here to join our channel and stay updated with the latest news.

Next