Advertisement
ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದನ್ನು ವಿರೋಧಿಸಿ, ಬಂಡಾಯ ನಾಮಪತ್ರ ಸಲ್ಲಿಸಿದ್ದ ಹಾಲಿ ಸಂಸದ ಮುದ್ದಹನುಮೇಗೌಡರು ಕಡೆಗೂ ಮಣಿದಿ ದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರ್ದೇಶನದ ಮೇರೆಗೆ ಮುದ್ದ ಹನುಮೇ ಗೌಡರ ನಿವಾಸಕ್ಕೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಡಿಸಿಎಂ ಡಾ| ಜಿ. ಪರಮೇಶ್ವರ ಅವರು ಮನ ವೊಲಿಕೆ ಮಾಡು ವಲ್ಲಿ ಯಶಸ್ವಿಯಾಗಿ ದ್ದಾರೆ. ಹೈಕಮಾಂಡ್ ತೀರ್ಮಾನ ದಂತೆಯೇ ತುಮ ಕೂರನ್ನು ಜೆಡಿಎಸ್ಗೆಬಿಟ್ಟು ಕೊಡ ಲಾಗಿದ್ದು, ಇದರಲ್ಲಿ ರಾಜ್ಯ ನಾಯ ಕರ ಪಾತ್ರ ವಿಲ್ಲ ಎಂದು ಅವರು ಸ್ಪಷ್ಟ ಪಡಿ ಸಿದರು. ಹೀಗಾಗಿ ಮುದ್ದಹನುಮೇಗೌಡರು ತಮ್ಮ ಏಜೆಂಟ್ ಮೂಲಕ ನಾಮಪತ್ರ ವಾಪಸ್ ಪಡೆ ದರು. ಅನಂತರ ಮತ್ತೂಬ್ಬ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಕೂಡ ಕಣದಿಂದ ಹಿಂದೆಗೆದರು.
ಇತ್ತ ಕೋಲಾರ ಬಿಜೆಪಿಯಲ್ಲಿ ಕಾಣಿಸಿದ್ದ ಬಂಡಾಯದ ಹೊಗೆ ತಣಿದಿದೆ. ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪಕ್ಷದ ಹಿರಿಯ ನಾಯಕ ಡಿ.ಎಸ್. ವೀರಯ್ಯ ನಾಮಪತ್ರ ವಾಪಸ್ ಪಡೆದಿದ್ದಾರೆ. ಈ ಮೂಲಕ ಎಸ್. ಮುನಿಸ್ವಾಮಿ ಅವರ ಹಾದಿ ಸುಗಮ ಮಾಡಿದ್ದಾರೆ. ಮೈಸೂರಿನಲ್ಲೂ ಮೂಡದ ಸಮನ್ವಯ
ಚುನಾವಣೆ ಸಂಬಂಧ ಕಾಂಗ್ರೆಸ್- ಜೆಡಿಎಸ್ ಪೂರ್ವಭಾವಿ ಸಭೆಗೆ ಸ್ವತಃ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಬಂದರೂ ಮೈಸೂರು ಜಿಲ್ಲೆಯಲ್ಲಿ ಸಮನ್ವಯ ಸಾಧಿಸಲಾಗಿಲ್ಲ. ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮನ್ವಯ ಸಭೆ ಆಯೋಜಿಸಲಾಗಿತ್ತು. ಆದರೆ ಇದಕ್ಕೆ ಜೆಡಿಎಸ್‌ನಿಂದ ಯಾರೂ ಬರಲಿಲ್ಲ. ಈ ಮೂಲಕ ದೋಸ್ತಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೂಮ್ಮೆ ಜಗಜ್ಜಾಹೀರಾಯಿತು. ಸಚಿವ ಜಿ.ಟಿ. ದೇವೇಗೌಡರೂ ಮೈಸೂರಿನಿಂದ ದೂರ ಉಳಿದರೆ, ಮತ್ತೂಬ್ಬ ಸಚಿವ ಸಾ.ರಾ. ಮಹೇಶ್ ಅವರು ನಿಖೀಲ್ ಜತೆ ಕೆ.ಆರ್. ನಗರಕ್ಕೆ ತೆರಳಿದ್ದರು.
Related Articles
ಜೆಡಿಎಸ್ ಮುಖಂಡರಿಂದ ನಾವು ಸಾಕಷ್ಟು ಕಿರುಕುಳ ಅನುಭವಿಸಿದ್ದೇವೆ, ಯಾವುದೇ ಕಾರಣಕ್ಕೂ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವುದಿಲ್ಲ, ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಚಿವ ಎಚ್.ಡಿ. ರೇವಣ್ಣ ಮುಂದೆಯೇ ಕೂಗಾಡಿದ ಘಟನೆ ಅರಸೀಕೆರೆಯಲ್ಲಿ ನಡೆ ದಿದೆ. ಇಲ್ಲಿ ನಡೆದ ಕಾಂಗ್ರೆಸ್- ಜೆಡಿಎಸ್ ಸಮನ್ವಯ ಸಭೆಯಲ್ಲಿ ಇದು ನಡೆದಿದ್ದು, ಕಾಂಗ್ರೆಸ್ ಕಾರ್ಯ ಕರ್ತರು ಸಭೆಯಿಂದಲೇ ನಿರ್ಗಮಿಸಿದ್ದಾರೆ.
Advertisement
ಚಿಕ್ಕೋಡಿ ಬಿಜೆಪಿಯಲ್ಲಿ ಬಂಡಾಯ?ರಾಜ್ಯ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರ ಬಿದ್ದಿದ್ದು, ಚಿಕ್ಕೋಡಿಯಿಂದ ಅಣ್ಣಾ ಸಾಹೇಬ್ ಜೊಲ್ಲೆ, ರಾಯಚೂರಿನಿಂದ ರಾಜಾ ಅಮರೇಶ್ ನಾಯಕ್ ಮತ್ತು ಕೊಪ್ಪಳದಿಂದ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಅವಕಾಶ ನೀಡಲಾಗಿದೆ. ಚಿಕ್ಕೋಡಿಯಲ್ಲಿ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಮತ್ತು ಅಣ್ಣಾ ಸಾಹೇಬ್ ಜೊಲ್ಲೆ ನಡುವೆ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಕಡೆಗೆ, ಕೇಂದ್ರ ಚುನಾವಣಾ ಸಮಿತಿ ಜೊಲ್ಲೆ ಅವರಿಗೆ ಮಣೆ ಹಾಕಿದೆ. ಇದು ಕತ್ತಿ ಸಹೋದರರಲ್ಲಿ ಅಸಮಾಧಾನ ಮೂಡಿಸಿದೆ. ಪಟ್ಟಿ ಹೊರಬೀಳುತ್ತಿದ್ದಂತೆ ಬೆಂಬಲಿಗರ ಜತೆ ಸಭೆ ನಡೆಸಿದ ಉಮೇಶ್ ಕತ್ತಿ, ಮರುಪರಿಶೀಲನೆಗೆ ಮನವಿ ಮಾಡಿದ್ದೇವೆ. ಎ.4ರ ವರೆಗೂ ಕಾಯಿರಿ ಎನ್ನುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ. ಈಗ ಜೊಲ್ಲೆ ಅವರ ಉತ್ಸಾಹ ನೋಡಿ ಟಿಕೆಟ್ ಕೊಟ್ಟಿರಬಹುದು, ಮುಂದೆ ಏನು ಬೇಕಾದರೂ ಆಗಬಹುದು ಎಂದಿದ್ದಾರೆ. ಎ. 8ರಂದು ರಾಜ್ಯಕ್ಕೆ ಮೋದಿ
ರಾಜ್ಯದಲ್ಲಿ ಪ್ರಧಾನಿ ಮೋದಿ ಪ್ರಚಾರ ದಿನಾಂಕ ನಿಗದಿ ಯಾ ಗಿದ್ದು, ಎ. 8ರಂದು ಮೈಸೂರು ಮತ್ತು ಚಿತ್ರ ದುರ್ಗ ದಲ್ಲಿ ರ್ಯಾಲಿ ನಡೆಸಲಿದ್ದಾರೆ. ಅಂದು ಬೆಳಗ್ಗೆ ಮೈಸೂರು, ಸಂಜೆ ಚಿತ್ರದುರ್ಗದಲ್ಲಿ ಸಾರ್ವ ಜನಿಕ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಹೇಳಿದೆ. ಜತೆಗೆ ಬೆಂಗಳೂರು, ತುಮಕೂರು, ಉಡುಪಿ, ವಿಜಯಪುರ, ಕೋಲಾರ ಮತ್ತು ಚಿಕ್ಕ ಬಳ್ಳಾ ಪುರ ಗಳಲ್ಲಿ ಅವರ ಚುನಾವಣ ರ್ಯಾಲಿ ಆಯೋ ಜಿಸಲು ಚಿಂತಿಸ ಲಾಗಿದೆ ಎಂದು ರಾಜ್ಯ ಬಿಜೆಪಿ ಚುನಾವಣ ನಿರ್ವಹಣ ಸಮಿತಿ ಸಂಚಾ ಲಕ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ. ಎ.7ರಂದು ಕಾರ್ಕಳದಲ್ಲಿ ಸಭೆ ನಡೆಸ ಲಿದ್ದಾರೆ ಎಂಬ ಮಾತಿದ್ದರೂ ಅಂತಿಮವಾಗಿಲ್ಲ.