Advertisement

BJP: ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಾಗಿದೆ; ಸಂಸದ ಜಿಗಜಿಣಗಿ

12:13 PM Jul 09, 2024 | Team Udayavani |

ವಿಜಯಪುರ: ಬಿಜೆಪಿ ಪಕ್ಷದಲ್ಲಿ ದಕ್ಷಿಣ ಭಾರತದಿಂದ ಗೆದ್ದಿರುವ ದಲಿತ ಏಕೈಕ ಹಿರಿಯ ಸಂಸದನಾದ ನನಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂದು ಸಮುದಾಯದ ಜನ ನನಗೆ ಉಗಿಯುತ್ತಿದ್ದಾರೆ. ವೈಯಕ್ತಿಕವಾಗಿ ನನಗೂ ಬೇಸರವಾಗಿದೆ ಎಂದು ವಿಜಯಪುರ ಹಿರಿಯ ಸಂಸದ ರಮೇಶ ಜಿಗಜಿಣಗಿ ಪಕ್ಷದ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಸಂಸದರ ಕಛೇರಿ ಉದ್ಘಾಟನೆ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಲಿತರೇನು ಬಿಜೆಪಿ ಪಕ್ಷಕ್ಕೆ ಓಟ್ ಹಾಕಿಲ್ಲವೇ, ಎಲ್ಲ ಮೇಲ್ವರ್ಗದ ಜಾತಿಯವರಿಗೆ ಸಚಿವ ಸ್ಥಾನ ನೀಡಿದ್ದು, ಹಿರಿತನ, ದಲಿತ, ಸತತ ಏಳು ಬಾರಿ ಗೆದ್ದಿದ್ದರೂ ಸಚಿವ ಸ್ಥಾನ ನೀಡದಿರುವುದಕ್ಕೆ ಬೇಸರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲಿತ ವಿರೋಧಿ ಬಿಜೆಪಿ ಪಕ್ಷ ಸೇರಬೇಡಿ ಎಂದು ದಲಿತರು ಆಕ್ಷೇಪಿಸಿದರೂ ಬಿಜೆಪಿ ಸೇರಿದ್ದೆ. ನನಗಾಗಿ ಅಲ್ಲದಿದ್ದರೂ ದಲಿತ ಸಮುದಾಯದ ಹಕ್ಕಿಗಾಗಿ ನನಗೆ ಸಚಿವ ಸ್ಥಾನ ನೀಡಬೇಕಿತ್ತು. ದಕ್ಷಿಣ ಭಾರತದಿಂದ ಸತತ ಏಳು ಬಾರಿ ಗೆದ್ದಿರುವ ಏಕೈಕ ಹಿರಿಯ ಸಂಸದ ನಾನು. ಆದರೂ ಸಚಿವ ಸ್ಥಾನ ನೀಡಿಲ್ಲ ಎಂದರೆ ಯಾವ ನ್ಯಾಯ ಹೇಳಿ ಎಂದು ಹೈಕಮಾಂಡ್ ವಿರುದ್ಧ ಹರಿಹಾಯ್ದರು.

ನಾನು ದೆಹಲಿಯಿಂದ ವಿಜಯಪುರ ನಗರಕ್ಕೆ ಬರುತ್ತಲೇ ದಲಿತರು ನನಗೆ ಉಗಿಯಲು ಆರಂಭಿಸಿದ್ದಾರೆ. ಹಿರಿತನ ಇದ್ದರೂ ಆದ್ಯತೆ ನೀಡಿಲ್ಲವೆಂದು ನನ್ನನ್ನು ಜರಿಯುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next