Advertisement

ಬೆಳಗಾವಿ ಕನಕಪುರವಾಗುತ್ತಿದೆ; ಪೊಲೀಸ್ ತನಿಖೆಗೆ ಮಹಾನ್ ನಾಯಕನಿಂದ ಒತ್ತಡ: ರಮೇಶ್ ಜಾರಕಿಹೊಳಿ

01:29 PM Dec 05, 2023 | Team Udayavani |

ಬೆಳಗಾವಿ: ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಪೃಥ್ವಿ ಸಿಂಗ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣ ಇದೀಗ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗುತ್ತಿದೆ. “ಪೊಲೀಸರು ತನಿಖೆ ಸರಿಯಾಗಿ ಮಾಡದಿದ್ದರೆ ಸಿಬಿಐ, ಹೈಕೋರ್ಟ್ ಗೆ ಹೋಗುತ್ತೀವೆ. ಬೆಂಗಳೂರಿನ ದೊಡ್ಡ ಅಧಿಕಾರಿ ಮೂಲಕ ಯಾವುದೇ ಕಾರಣಕ್ಕೂ ಎಫ್‌ಐಆರ್ ಮಾಡದಂತೆ ಆದೇಶ ಮಾಡಿದ್ದಾರೆ. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ದಿಲ್ಲಿಯಲ್ಲಿ ಮಾತಾಡುತ್ತೇವೆ” ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ದ ಆರೋಪ ಮಾಡಿದರು. “ರಾಜ್ಯದಲ್ಲಿ ಮಹಾನ್ ನಾಯಕರು, ಕೊತ್ವಾಲ್ ರಾಮಚಂದ್ರ ಶಿಷ್ಯರು ಅಧಿಕಾರದಲ್ಲಿದ್ದಾಗ ಹೇಗೆ ನ್ಯಾಯ ಸಿಗುತ್ತದೆ. ಪೊಲೀಸರು ಎಫ್ಐಆರ್ ಮಾಡುವುದೇ ಅನುಮಾನ. ಈಗಾಗಲೇ ದೂರು ಕೊಟ್ಟಿದ್ದಾರೆ ಆದರೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ಹೈದರಾಬಾದ್ ನಲ್ಲಿ ಕುಳಿತು ಬಹಳಷ್ಟು ಒತ್ತಡ ಮಾಡುತ್ತಿದ್ದಾರೆ. ಎಡಿಜಿಪಿ ಅಧಿಕಾರಿ ಮೂಲಕ ಸ್ಥಳೀಯ ಪೊಲೀಸರಿಗೆ ಬಹಳಷ್ಟು ಒತ್ತಡ ಬಂದಿದೆ. ಅದೇ ಕಾರಣಕ್ಕೆ ಎಫ್ಐಆರ್ ಮಾಡುತ್ತಿಲ್ಲ ಎಂದು ದೂರಿದರು.

ಇದನ್ನೂ ಓದಿ:Telangana Election; ಮಗನ ಮಾತು ಕೇಳದೆ ಚುನಾವಣೆ ಸೋತರೆ ಕೆಸಿಆರ್..; ಒಂದು ವಿಶ್ಲೇಷಣೆ

ಪೃಥ್ವಿ ಸಿಂಗ್ ಗೆ ಚುನಾವಣೆ ವೇಳೆ ಜೀವ ಬೆದರಿಕೆ ವಿಚಾರಕ್ಕೆ ಮಾತನಾಡಿದ ಅವರು, ನನಗೂ ಜೀವ ಬೆದರಿಕೆ ಬರುತ್ತವೆ. ಅದೆಲ್ಲವನ್ನೂ ನಾವು ಹೇಳಿಕೊಳ್ಳುವುದಿಲ್ಲ. ರವಿ ಪೂಜಾರಿಯಿಂದ ನನಗೆ ಬೆದರಿಕೆ ಕರೆ ಬಂದಿತ್ತು ದೂರು ಕೊಡಲಿಲ್ಲ. ಕೊಲೆ ಮಟ್ಟಕ್ಕೆ ಹೋಗಿದ್ದಕ್ಕೆ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಸಿಸಿಟಿವಿಯಲ್ಲಿ ಆ ಮನುಷ್ಯ ಹೋಗುವುದನ್ನು ನೋಡಿದ್ದೇನೆ. ಸಿಬಿಐಗೆ ಕೊಟ್ಟಿದ್ದ ತನಿಖೆಯನ್ನೇ ಈ ಸರ್ಕಾರ ವಿತ್ ಡ್ರಾ ಮಾಡಿಕೊಳ್ಳುತ್ತೆದೆ. ಈ ಸರ್ಕಾರಕ್ಕೆ ನೈತಿಕತೆಯೇ ಇಲ್ಲ ಈ ಸರ್ಕಾರದಿಂದ ನ್ಯಾಯ ಸಿಗುವುದಿಲ್ಲ ಎಂದರು.

ಪೃಥ್ವಿ ಸಿಂಗ್ ನಟೋರಿಯಸ್ ಎಂಬ ಹೆಬ್ಬಾಳಕರ, ಚನ್ನರಾಜ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರು ನಡೆದು ಬಂದ ದಾರಿಯನ್ನು ಬೆಳಗಾವಿಯ ಜನ ನೋಡಿದ್ದಾರೆ. ಅವರು ಯಾರು ಏನು ಎಂದು ಎಲ್ಲರೂ ನೋಡಿದ್ದಾರೆ ಎಂದು ತಿರುಗೇಟು ನೀಡಿದರು.

Advertisement

ಪೃಥ್ವಿ ಸಿಂಗ್ ಹಿಂದೆ ಯಾರೋ ಹೇಳಿ ಮಾಡಿಸಿದ್ದಾರೆ ಎಂಬ ಹೆಬ್ಬಾಳಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪೃಥ್ವಿ ಸಿಂಗ್ ನನ್ನ ಶಿಷ್ಯ ಇರಬಹುದು, ಇಂತಹ ಚಿಲ್ಲರೆ ರಾಜಕಾರಣ ಜಾರಕಿಹೊಳಿ‌ ಕುಟುಂಬ ಮಾಡಲ್ಲ. ಲಾಟರಿ ಮಂತ್ರಿ, ಲಾಟರಿ ಎಂಎಲ್ಎ ಕೆಲವೇ ದಿನಗಳಲ್ಲಿ ಅವರು ಮಾಜಿ ಆಗುತ್ತಾರೆ. ಇಲ್ಲಿ ನ್ಯಾಯ ಸಿಗುವುದು ಕಷ್ಟ ನಾವು ಸಿಬಿಐ ತನಿಖೆಗೆ ಹೋಗುತ್ತೇವೆ. ಪೃಥ್ವಿ ಸಿಂಗ್ ತಪ್ಪಿದ್ದರೆ ಅವನಿಗೂ ಬೈಯ್ದು ಹೇಳುತ್ತೇನೆ. ನ್ಯಾಯದ ಪರವಾಗಿ ಇರುತ್ತನೆ ಎಂದರು.

ರಾಜಕೀಯ ನಿವೃತ್ತಿ: ಗ್ರಾಮೀಣ ಕ್ಷೇತ್ರದಲ್ಲಿ ಲ್ಯಾಂಡ್ ಮಾಫಿಯಾ ನಡೆದಿದೆ. ಪಾರಿಶ್ವಾಡ ಗ್ರಾಮದಲ್ಲಿ ಹೆಣ್ಣು ಮಕ್ಕಳು ಗೂಂಡಾಗಿರಿ ಮಾಡುತ್ತಿದ್ದಾರೆ‌. ಬೇಲಿ ಹಾಕುವುದು ರೋಡ್ ಬಂದ್ ಮಾಡುವುದು ಆಗುತ್ತಿದೆ. ಬೆಳಗಾವಿ ಕನಕಪುರಯಾಗುತ್ತಿದೆ ಎಂದು ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದರು.

ಗೋಕಾಕ್ ನಲ್ಲಿ ನಾನು ಒಂದೇ ಜಾಗ ಖರೀದಿ ಮಾಡಿದ್ದರೆ ರಾಜಕೀಯ ನಿವೃತ್ತಿಯಾಗುತ್ತೇನೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಅನ್ಯಾಯವಾಗಿದ್ದರೆ ಅವರ ಬೆನ್ನಿಗೆ ಇರುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next