Advertisement

ಕವಟಗಿಮಠ ಸೋಲಿನ ಹೊಣೆ ಹೊರುವ ತಾಕತ್‌ ಇದೆ: ರಮೇಶ ಜಾರಕಿಹೊಳಿ

08:10 PM Dec 15, 2021 | Team Udayavani |

ಗೋಕಾಕ: ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲು ನನ್ನ ತಲೆಗೆ ಕಟ್ಟುತ್ತಿದ್ದಾರೆ. ನನ್ನ ಬೆನ್ನಿಗೆ ಶಕ್ತಿ, ಹೊರುವ ತಾಕತ್‌ ಇದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಕಾಂಗ್ರೆಸ್‌ ಸೋಲಿಸುತ್ತೇನೆ ಅಂತ ಹಠಕ್ಕೆ ಬಿದ್ದಿದ್ದು ನಿಜ. ಚುನಾವಣೆಯ ಕೊನೆಯ ಮೂರು ದಿನಗಳಲ್ಲಿ ಜಿಲ್ಲೆಯ ಚಿತ್ರಣ ಬದಲಾಯಿತು. ಲಖನ್‌ ಜಾರಕಿಹೊಳಿ ಕೊನೆಯ ಮೂರು ದಿನ ನಮ್ಮ ಕೈಗೆ ಸಿಗಲಿಲ್ಲ. ಚುನಾವಣೆ ಚಿತ್ರಣ ಬದಲಾಗಿದ್ದಕ್ಕೆ ನಾನು ಬಿಜೆಪಿ ಪರ ಪ್ರಚಾರ ಮಾಡಿದೆ. ಕಾಂಗ್ರೆಸ್‌ ಅಭ್ಯರ್ಥಿ ಪರ ಅವರು ಮಾಡಿದರು. ಪಕ್ಷೇತರ ಅಭ್ಯರ್ಥಿ ಲಖನ್‌ ಕೂಡ ಪ್ರಚಾರ ಮಾಡಿದರು. ಬಿಜೆಪಿ ಸೋಲಿನ ಸಂಚು ನಡೆದಿರುವ ಬಗ್ಗೆ ಕನ್‌ಫರ್ಮ್ ಇಲ್ಲ, ವಿಚಾರ ಮಾಡಿ ಮಾತನಾಡುತ್ತೇನೆ. ಸೋಲಿನ ಹೊಣೆ ಲೀಡರ್‌ ಆದವರಿಗೆ ಕಟ್ಟುತ್ತಾರೆ. ಇವತ್ತು ಅವರ ಪಕ್ಷ ಗೆದ್ದಿದೆ. ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಎಲ್ಲಿ ತಪ್ಪಿದೆ ಎಂಬುದು ಆಂತರಿಕವಾಗಿ ಚರ್ಚೆ ಮಾಡುತ್ತೇವೆ. ಕೆಲವೇ ದಿನಗಳಲ್ಲಿ ಬಹಿರಂಗವಾಗಿ ಡಿಕೆಶಿ ಹೇಳಿಕೆ ಬಗ್ಗೆ ಕಠೊರ ಉತ್ತರ ಕೊಡುತ್ತೇನೆ ಎಂದರು.

ಇದನ್ನೂ ಓದಿ:ಬೆಂಗಳೂರಿಗೆ ಹೊರಟಿದ್ದ ರೈಲಿಗೆ ಹುಸಿ ಬಾಂಬ್‌ ಕರೆ: ಬಂಧನ

ಹಿಂದುಳಿದ ವರ್ಗಗಳ ನಾಯಕರು ಬೆಳೆಯುತ್ತಿರುವುದರಿಂದ ಸಿದ್ದರಾಮಯ್ಯ ಹತಾಶೆಗೊಳಗಾಗಿದ್ದಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರಿಂದ ಏನೂ ಆಗುವುದಿಲ್ಲ. ನಮ್ಮ ಪಕ್ಷದಲ್ಲಿ ಏನಾಗಿದೆ, ಏನಿಲ್ಲ ಎಂಬುದು ನಮ್ಮ ವರಿಷ್ಠರ ಜತೆಗೆ ಮಾತನಾಡಿದ್ದೇನೆ. ಏಕೆ ಸೋತಿದೆ ಎಂದು ಚರ್ಚೆ ಮಾಡಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಡಿ.ಕೆ.ಶಿವಕುಮಾರ್‌ ಬಗ್ಗೆ ಬಹಳ ಕಠೊರವಾಗಿ ಹೇಳುವನಿದ್ದೆ. ಆದರೆ ಬಿಜೆಪಿ ರಾಜ್ಯ ಪ್ರಮುಖರು ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ತಿಳಿಸಿದ್ದಾರೆ. ಹೀಗಾಗಿ ಸುಮ್ಮನಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next