Advertisement

ರಮೇಶ್‌ ಜಾರಕಿಹೊಳಿ ಕ್ಷಮೆಯಾಚನೆಗೆ ಒತ್ತಾಯ

06:40 AM Sep 02, 2018 | Team Udayavani |

ಬೆಂಗಳೂರು: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಟಾಳ್ಕರ್‌ ಅವರ ಬಗ್ಗೆ ಸಚಿವ ರಮೇಶ್‌ ಜಾರಕಿಹೊಳಿ ಅವರು ಅಸಂಸದೀಯವಾಗಿ ಮಾತನಾಡಿದ್ದು, ತಕ್ಷಣ ಕ್ಷಮೆಯಾಚಿಸಬೇಕೆಂದು ಅಖೀಲ ಭಾರತ ವೀರಶೈವ ಮಹಾಸಭಾ ಒತ್ತಾಯಿಸಿದೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಹಾಸಭಾ ಉಪಾಧ್ಯಕ್ಷ ಬಿ.ಎಸ್‌.ಸಚ್ಚಿದಾನಂದಮೂರ್ತಿ, ರಮೇಶ್‌ ಜಾರಕಿಹೊಳಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ಒಬ್ಬ ಹೆಣ್ಣು ಮಗಳ ಏಳಿಗೆ ಸಹಿಸಲಾರದ ಇಂಥ ಮಂತ್ರಿಗಳು ಸಂಪುಟದಲ್ಲಿ ಇರಬೇಕೆ? ಇಂಥವರಿಂದ ಮಹಿಳಾ ಸಮುದಾಯ ಯಾವ ನಿರೀಕ್ಷೆ ಇಟ್ಟುಕೊಳ್ಳಬಹುದು. ಇವರ ನಡವಳಿಕೆ ಮಹಿಳಾ ಸಮುದಾಯಕ್ಕೆ ಮಾಡಿದ ಘೋರ ಅಪಮಾನ. ಇದನ್ನು ಮಹಾಸಭೆ ಉಗ್ರವಾಗಿ ಖಂಡಿಸುತ್ತದೆ.ತಕ್ಷಣವೇ ರಮೇಶ್‌ ಜಾರಕಿಹೊಳಿಯವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಚಿವ ರಮೇಶ ಜಾರಕಿಹೊಳಿ ನೀಡಿರುವ ಕಾಲ ಕಸ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಅವರು ಜವಾಬ್ದಾರಿಯುತ ನಾಯಕರು. ತಮ್ಮ ಭಾಷೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.
– ಸತೀಶ ಜಾರಕಿಹೊಳಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next