Advertisement

ಲಕ್ಷ್ಮೀ ಹೆಬ್ಬಾಳ್ಕರ್ ಮೈಂಡ್ ಔಟ್ ಆಗಿದ್ದಾರೆ: ರಮೇಶ್ ಜಾರಕಿಹೊಳಿ‌ ವ್ಯಂಗ್ಯ

02:58 PM Feb 13, 2021 | Team Udayavani |

ಬೆಳಗಾವಿ: ಗೋಕಾಕದಿಂದ ಸ್ಪರ್ಧಿಸುವುದಾಗಿ ಪಂಥಾಹ್ವಾನ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಶನಿವಾರ ಮತ್ತೆ ತಿರುಗೇಟು ನೀಡಿರುವ ಸಚಿವ ರಮೇಶ ಜಾರಕಿಹೊಳಿ, ‘ಹೆಬ್ಬಾಳಕರ್ ಮೈಂಡ್ ಔಟ್ ಆಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಬ್ಬಾಳ್ಕರ್ ಮೈಂಡ್ ಔಟ್ ಆಗಿದ್ದಾರೆ. ಹೀಗಾಗಿ ಈ ತರಹ ಮಾತನಾಡುತ್ತಿದ್ದಾರೆ. ಔಟ್ ಆಪ್ ಮೈಂಡ್ ಆಗಿದ್ದರಿಂದ ಬಸ್ ಸ್ಟ್ಯಾಂಡ್ ನಲ್ಲಿ ಹುಡುಕಬೇಕು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಅಧಿಕಾರ ಸ್ವೀಕರಿಸಿದ ಕೆಲ ಗಂಟೆಗಳ ಅವಧಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಗ್ರಾ.ಪಂ ಅಧ್ಯಕ್ಷೆ

ಶುಕ್ರವಾರ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ಸಚಿವ ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ಕ್ಷೇತ್ರವನ್ನು ಟಾರ್ಗೆಟ್ ಮಾಡುತ್ತೇನೆ. ಪಕ್ಷ ಬಯಸಿದರೆ ಗೋಕಾಕದಿಂದ ಸ್ಪರ್ಧೆ ಮಾಡುತ್ತೇನೆ ಎಂದಿದ್ದರು.

ಇದಕ್ಕೆ ಟಾಂಗ್ ನೀಡಿದ್ದ ರಮೇಶ್ ಜಾರಕಿಹೊಳಿ, ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಅಲ್ಲ. ಯಾವ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲವೋ ಅಲ್ಲಿ ಗೆಲ್ಲಿಸಬೇಕು ಎಂಬುದು ನಮ್ಮ ಗುರಿ. ಲಕ್ಷ್ಮೀ ಹೆಬ್ಬಾಳಕರಗೆ ಗೋಕಾಕಕ್ಕೆ‌ ಮೋಸ್ಟ್ ವೆಲ್ ಕಮ್ ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next