Advertisement

ರಮೇಶ ಬಾಯಾರ್‌ ಅವರಿಗೆ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ

11:40 AM Sep 02, 2017 | Team Udayavani |

ವಿಟ್ಲ: ಬಂಟ್ವಾಳ ತಾಲೂಕಿನ ಕಲ್ಲಂಗಳ ಕೇಪು ಸರಕಾರಿ ಪ್ರೌಢ ಶಾಲಾ ಅಧ್ಯಾಪಕ ರಮೇಶ ಎಂ. ಬಾಯಾರ್‌ ಅವರಿಗೆ ರಾಜ್ಯ ಸರಕಾರವು ಈ ಸಾಲಿನ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಘೋಷಿಸಿದೆ. ಶಿಕ್ಷಕ ದಿನಾಚರಣೆಯಂದು ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Advertisement

ಸಜಂಕಿಲ ಅನುದಾನಿತ ಶಾಲೆ ಯಿಂದ ಶಿಕ್ಷಣ ಮತ್ತು ಶಿಕ್ಷಕ ಸೇವೆ ಆರಂಭಿಸಿದ ಇವರು ಚೆನ್ನೈತ್ತೋಡಿ, ವಿಟ್ಲ ಮಾದರಿ ಶಾಲೆಗಳಲ್ಲಿ ಶಿಕ್ಷಕ ರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಬಂಟ್ವಾಳ ಬಿ.ಆರ್‌.ಪಿ., ವಿಟ್ಲ ಶಾಸಕರ ಆಪ್ತ ಸಲಹೆಗಾರ, ಕೇಪು ಸಿ.ಎ.ಇ.ಒ, ಪ್ರಭಾರ ಮುಖ್ಯ ಶಿಕ್ಷಕ, ಶಿಕ್ಷಕ ಕೇಂದ್ರದ ಕಾರ್ಯದರ್ಶಿ, ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕ ಮತ್ತು ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ, ಬಂಟ್ವಾಳ ಇ.ಸಿ.ಒ ಹೀಗೆ ಅನೇಕ ಜವಾಬ್ದಾರಿಗಳನ್ನು ಸಮರ್ಥ ವಾಗಿ ನಿರ್ವಹಿಸಿದ ಇವರು ಸಂಘಟನಾ ಚತುರ, ಉತ್ತಮ ವಾಗ್ಮಿ, ಚಿಂತಕ ಹಾಗೂ ಸಾಹಿತಿಯಾಗಿದ್ದಾರೆ.

ಎಲ್ಲ ಮೂಲ ಸೌಲಭ್ಯಗಳನ್ನು ಒದಗಿ ಸುವುದರ ಮೂಲಕ ಕಲ್ಲಂಗಳ ಸರಕಾರಿ ಪ್ರೌಢ ಶಾಲೆಗೆ ಜೀವ ತುಂಬಿದ ರಮೇಶ ಎಂ.ಬಾಯಾರ್‌ ಅವರು ಸಾವಯವ ಆಹಾರ ಸರಣಿ, ಅಕ್ಷರ ಪಾತ್ರೆ, ಮಕ್ಕಳಿಗೆ ಸಾವಯವ ಕೃಷಿ ತರಬೇತಿ, ಶಾಲಾ ಕೈತೋಟ, ಆವರಣ ಗೋಡೆ, ಕಂಪ್ಯೂಟರ್‌ ಆಧಾರಿತ ಬೋಧನೆ, ಮಕ್ಕಳಿಗೆ ಕಂಪ್ಯೂಟರ್‌ ಕಲಿಕೆಗೆ ಅವಕಾಶ, ಕಂಪ್ಯೂಟರ್‌ ಮುದ್ರಿತ ಪತ್ರವ್ಯವಹಾರ, ಆಂಗ್ಲ ಮಾಧ್ಯಮ ವಿಭಾಗಗಳ ಆರಂಭ, ಅರಣ್ಯ ವಿಸ್ತರಣೆ, ಕಟ್ಟಡ ವಿಸ್ತರಣೆ, ಯಕ್ಷಗಾನ ತರಗತಿ ಆರಂಭ, ತುಳು ಲಿಪಿ ಬೋಧನೆ, ಆಟಿಯ ಹಬ್ಬ, ಅಮ್ಮನ ಕೈತುತ್ತು, ಮಳೆಕೊಯ್ಲು, ಇಂಧನ ಉಳಿತಾಯ ಕಾರ್ಯಕ್ರಮ, ನೀರಿಂಗಿಸುವ ಕಾರ್ಯಕ್ರಮ, ಸಾಹಿತ್ಯ ಕಮ್ಮಟ, ಮಕ್ಕಳೊಂದಿಗೆ ಸಾವಯವ ಕೃಷಿ ಕ್ಷೇತ್ರ ಭೇಟಿ, ಶಾಲೆಗೆ ಸಿ.ಸಿ.ಕೆಮರಾ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳನ್ನು ನಡೆಸುತ್ತಲೇ ಇದ್ದರು. ಶಾಲೆಗೆ ಕುಡಿಯುವ ನೀರಿನ ಶಾಶ್ವತ ಯೋಜನೆ, ಆವರಣ ಗೋಡೆ ಒದಗಿಸಿದವರು.  ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣ ಕಾರರಾಗಿರುವ ಇವರು ಅರಳಿದ ಮುಖ ಮತ್ತು ಅಮ್ಮನ ಅಕ್ಕರೆ ಎಂಬ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next