“ಪುಷ್ಪಕ ವಿಮಾನ’ ಚಿತ್ರ ಜನವರಿ 6 ರಂದು ಬಿಡುಗಡೆಯಾಗುತ್ತಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರ ರಮೇಶ್ ಅರವಿಂದ್ ಅವರ ನೂರನೇ ಚಿತ್ರವೆಂಬುದು ವಿಶೇಷ. ತಂದೆ-ಮಗಳ ಬಾಂಧವ್ಯದ ಕಥೆ ಹೊಂದಿರುವ ಈ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಅದೇ ರೀತಿ ಸಿನಿಮಾವನ್ನು ಜನ ಇಷ್ಟಪಡುತ್ತಾರೆಂಬ ನಂಬಿಕೆ ಚಿತ್ರತಂಡಕ್ಕಿದೆ. ಚಿತ್ರವನ್ನು ವಿಖ್ಯಾತ್, ದೇವೇಂದ್ರರೆಡ್ಡಿ, ದೀಪಕ್, ದೀಪಕ್ ಕಿಶೋರ್ ಸೇರಿ ನಿರ್ಮಿಸಿದ್ದಾರೆ. ಚಿತ್ರದ ಬಗ್ಗೆ ನಟ ರಮೇಶ್ ಅರವಿಂದ್ ಹಾಗೂ ನಿರ್ದೇಶಕ ರವೀಂದ್ರ ಮಾತನಾಡಿದ್ದಾರೆ…
ಕಾಡುವ ಸಿನಿಮಾ
“ಪುಷ್ಪಕ ವಿಮಾನ’ ರಮೇಶ್ ಅರವಿಂದ್ ಅವರ ನೂರನೇ ಚಿತ್ರ. 100ನೇ ಚಿತ್ರ ವಿಭಿನ್ನವಾಗಿರಬೇಕೆಂಬ ಆಸೆ ರಮೇಶ್ ಅರವಿಂದ್‌ಗಿತ್ತಂತೆ. ಅವರ ಆ ಆಸೆ ಈಗ ಈಡೇರಿದೆ. ಅವರು ಅಂದುಕೊಂಡಂತೆ ವಿಭಿನ್ನ ಕಥಾಹಂದರವಿರುವ ಸಿನಿಮಾವಾಗಿ “ಪುಷ್ಪಕ ವಿಮಾನ’ ಮೂಡಿದೆ. ತಮ್ಮ ನೂರನೇ ಸಿನಿಮಾ ಜನರಿಗೆ ಇಷ್ಟವಾಗುತ್ತದೆಂಬ ವಿಶ್ವಾಸವೂ ಅವರಿಗಿದೆ. “ನಾನು ಇದುವರೆಗೂ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಈ 100 ಚಿತ್ರ ಎಂಬ ಮೈಲಿಗಲ್ಲು ಎಲ್ಲ ನಾನು ಅಷ್ಟಾಗಿ ಯೋಚಿಸಿರಲಿಲ್ಲ. ಆದರೆ, “ಪುಷ್ಪಕ ವಿಮಾನ’ ನನ್ನ 100ನೇ ಚಿತ್ರ ಎಂಬುದು ನನ್ನ ಮಟ್ಟಿಗೆ ಬಹಳ ವಿಶೇಷವಾದ ವಿಚಾರ.
ಈ ತರಹ¨ªೊಂದು ಕಥೆ ಸಿಕ್ಕಿತು ಎನ್ನುವುದೇ ಬಹಳ ಸಂತೋಷದ ವಿಷಯ. ಸಂಬಂಧಗಳನ್ನು ಸಂಭ್ರಮಿಸುವ ಕಥೆ ಇದು. ಸಾಮಾನ್ಯವಾಗಿ ಸಿನಿಮಾಗಳು ಕೆಲವೇ ಸಂಬಂಧಗಳ ಸುತ್ತ ಸುತ್ತುತ್ತದೆ. ಅದರಲ್ಲೂ ಕೆಲವು ವರ್ಷಗಳಲ್ಲಿ ಹೀರೋ-ಹೀರೋಯಿನ್ ಮತ್ತು ಹೀರೋ-ವಿಲನ್ ಗಳ ಸುತ್ತ ಸುತ್ತುವ ಕಥೆಗಳೇ ಹೆಚ್ಚಾಗಿ ಬರುತ್ತಿವೆ. ಹಾಗಾದರೆ ಬೇರೆ ಸಂಬಂಧಗಳು ಎಲ್ಲಿ ಹೋದವು ಎಂಬ ಪ್ರಶ್ನೆ ಸಹಜ. ಇಲ್ಲಿ ಅಪ್ಪ-ಮಗಳ ಸಂಬಂಧ ಹೇಳುವ ಕಥೆಯಿದೆ ಮತ್ತು ಅದು ನನ್ನ 100ನೆಯ ಚಿತ್ರವಾಗಿರುವುದು ವಿಶೇಷ. “ಪುಷ್ಪಕ ವಿಮಾನ’ ಒಂದು ಹೃದಯ ಮುಟ್ಟುವ ಸಿನಿಮಾ ಆಗುತ್ತದೆ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ನಿಮ್ಮಲ್ಲಿರುವ ನವಿರಾದ ಭಾವನೆಯನ್ನು ತಟ್ಟುವ ವಿಷಯ ಈ ಚಿತ್ರದಲ್ಲಿದೆ. ಪ್ರತಿಯೊಬ್ಬರಲ್ಲೂ ಒಬ್ಬ ಡೀಪ್ ಆದ ಮನುಷ್ಯ ಇದ್ದೇ ಇರುತ್ತಾನೆ. ಅವನೇ ಆದರ್ಶ ವ್ಯಕ್ತಿ. ಅವನಿಗೆ ಒಳ್ಳೆಯದು ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅಂತಹ ವ್ಯಕ್ತಿಯನ್ನು ಈ ಚಿತ್ರದಲ್ಲಿ ನೋಡಬಹುದು. ಇಲ್ಲಿ ನಾನೊಬ್ಬನೇ ಹಳಬ. ಇನ್ನೆಲ್ಲರೂ ಹೊಸಬರು. ಅವರ ಆಸೆ, ಆಸಕ್ತಿ, ಉತ್ಸಾಹ ಎಲ್ಲವೂ ಇಲ್ಲಿ ಚೆನ್ನಾಗಿ ವಕೌìಟ್ ಆಗಿದೆ. ಸುಮಾರು 40 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿ¨ªೆ. ಒಂದೇ ಒಂದು ದಿನ ಸಹ ಸಮಸ್ಯೆ ಆಗಲಿಲ್ಲ. ಎಲ್ಲರಿಗೂ ಎಲ್ಲವನ್ನೂ ಚೆನ್ನಾಗಿ ಮಾಡಬೇಕು ಅಂತ ಆಸೆ ಇತ್ತು. ಚಿತ್ರದ ಶೀರ್ಷಿಕೆಯ ಲೆಟರಿಂಗ್ ಹೀಗೇ ಇರಬೇಕು ಎನ್ನುವುದರಿಂದ, ಸೆಟ್, ಪಾತ್ರವರ್ಗ, ಕಾಸ್ಟೂ$ಮ್ ಎಲ್ಲವೂ ಹೀಗಿರಬೇಕು ಅಂತ ಅವರಿಗೆ ಕಲ್ಪನೆ ಇತ್ತು. ಯಾವುದರಲ್ಲೂ ಅಸಡ್ಡೆ ಇಲ್ಲ. ಹಾಗಾಗಿಯೇ ಚಿತ್ರ ಅಂದುಕೊಂಡಂತೆಯೇ ಚೆನ್ನಾಗಿ ಬಂದಿದೆ’ ಎಂದು ಖುಷಿಯಿಂದ ಹೇಳುತ್ತಾರೆ ರಮೇಶ್.
ಸೆಂಟಿಮೆಂಟ್ ಜೊತೆಗೆ ಎಂಟರ್‌ಟೈನ್‌ಮೆಂಟ್
ನಿರ್ದೇಶಕ ರವೀಂದ್ರ ಅವರು “ಪುಷ್ಪಕ ವಿಮಾನ’ದ ಬಗ್ಗೆ ಹೀಗೆ ಹೇಳುತ್ತಾರೆ. ಅವರು ಹೇಳುವಂತೆ ಇದೊಂದು ಸೆಂಟಿಮೆಂಟ್ ಸಿನಿಮಾ. ಎಂಥವರ ಕಣ್ಣಲ್ಲೂ ನೀರು ತರಿಸುವ ಶಕ್ತಿ ಈ ಸಿನಿಮಾಕ್ಕಿದೆ ಎಂದು ವಿಶ್ವಾಸದಿಂದ ಹೇಳುತ್ತಾರೆ ರವೀಂದ್ರ. ಅದಕ್ಕೆ ಕಾರಣ ಸಿನಿಮಾದ ಕಂಟೆಂಟ್. “ಸಿನಿಮಾದ ಕಥೆ ತುಂಬಾ ವಿಭಿನ್ನವಾಗಿದೆ. ತಂದೆ-ಮಗಳ ನಡುವೆ ನಡೆಯುವ ಕಥೆ ಇದು. ಬುದ್ಧಿಮಾಂಧ್ಯ ತಂದೆ ಹಾಗೂ ಆರು ವರ್ಷದ ಮಗಳ ನಡುವೆ ನಡೆಯುವ ಕಥೆಯಲ್ಲಿ ಒಂದಷ್ಟು ಟ್ವಿಸ್ಟ್‌ಗಳು ಕೂಡಾ ಇವೆ. ಈ ಮೂಲಕ ಸಿನಿಮಾ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗುತ್ತಾ ಸಾಗುತ್ತದೆ. ಮಗಳೇ ತನ್ನ ಪ್ರಪಂಚ ಎಂದುಕೊಂಡಿರುವ ತಂದೆ ಒಂದು ಕಡೆಯಾದರೆ, ತಂದೆಯೇ ತನ್ನ ಜೀವ ಎಂದು ನಂಬಿರುವ ಆರು ವರ್ಷದ ಪುಟ್ಟ ಮಗಳು. ಇಬ್ಬರ ಈ ಪ್ರಪಂಚದಲ್ಲಿ ಸಂಭವಿಸುವ ಒಂದು ಘಟನೆ, ಅವರ ನೆಮ್ಮದಿಯನ್ನೇ ಹಾಳು ಮಾಡುತ್ತದೆ. ಈ ಮೂಲಕ ಚಿತ್ರದ ಕಥೆಗೆ ಹೊಸ ತಿರುವು ಸಿಗುತ್ತದೆ. ಜೊತೆಗೆ ಹೊಸ ಹೊಸ ಪಾತ್ರಗಳು ಕೂಡಾ ಎಂಟ್ರಿಯಾಗುತ್ತವೆ.
ತನ್ನ ಮಗಳನ್ನು ಪ್ರೀತಿಸುವ ಪ್ರತಿಯೊಬ್ಬ ತಂದೆ, ತನ್ನ ತಂದೆಯನ್ನು ಗೌರವಿಸುವ ಪ್ರತಿಯೊಬ್ಬ ಮಗಳು ನೋಡುವ ಸಿನಿಮಾವಿದು. ಹೆಣ್ಣು ಮಕ್ಕಳನ್ನು ಹೆತ್ತಿರುವ ತಂದೆಯಂದಿರು ಮಿಸ್ ಮಾಡದೇ ನೋಡಬೇಕಾದ ಚಿತ್ರವಿದು. ಚಿತ್ರದಲ್ಲಿ ರಮೇಶ್ ಅರವಿಂದ್ ಅವರು ಅನಂತರಾಮಯ್ಯ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಚೈಲ್ಡ್ ಬಿಹೇವಿಯರ್ ಇರುವ ಅವರ ಪಾತ್ರ ತುಂಬಾ ವಿಭಿನ್ನವಾದುದು. ಇಲ್ಲಿವರೆಗೆ ರಮೇಶ್ ಅವರು ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ಆದರೆ, ಈ ರೀತಿಯ ಪಾತ್ರ ಮಾಡಿರಲಿಲ್ಲ. ಅದ್ಭುತವಾಗಿ ನಟಿಸಿದ್ದಾರೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ರವೀಂದ್ರ. ನಿರ್ದೇಶಕ ರವೀಂದ್ರ, ಈ ಕಥೆ ಹಿಡಿದು ನಿರ್ಮಾಪಕರಿಗಾಗಿ ಹುಡುಕಾಡುತ್ತಿದ್ದರಂತೆ. ಆಗ ಸಿಕ್ಕಿದ್ದವರು ವಿಖ್ಯಾತ್. ಎಮೋಶನಲ್ ಸಬೆjಕ್ಟ್ ಇದ್ದರೆ ಹೇಳಿ ಎಂದರಂತೆ. ಆಗ ಈ ಕಥೆಯನ್ನು ರವೀಂದ್ರ ಹೇಳಿದ್ದಾರೆ. ಕಥೆ ಕೇಳಿ ಖುಷಿಯಾದ ವಿಖ್ಯಾತ್ ಈಗ ತಮ್ಮ ಸ್ನೇಹಿತರ ಜೊತೆ ಸೇರಿ ಈ ಸಿನಿಮಾ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಜೂಹಿ ಚಾವ್ಲಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಸಖತ್ ಕಲರ್‌ಫುಲ್ ಆಗಿ ಚಿತ್ರೀಕರಿಸಲಾಗಿದೆ. ಇನ್ನು, ರಚಿತಾ ರಾಮ್ ಕೂಡಾ ನಟಿಸಿದ್ದು, ಅವರಿಲ್ಲಿ ಲಾಯರ್. ಈ ಹಿಂದೆ ರಚಿತಾ ಮಾಡಿರದಂತಹ ಒಂದು ವಿಭಿನ್ನ ಪಾತ್ರ ಅವರಿಗೆ ಸಿಕ್ಕಿದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಭುವನ್ ಗೌಡ ಅವರ ಛಾಯಾಗ್ರಹಣವಿದೆ.
“ಪುಷ್ಪಕ ವಿಮಾನ’ ಒಂದು ಹೃದಯ ಮುಟ್ಟುವ ಸಿನಿಮಾ ಆಗುತ್ತದೆ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ನಿಮ್ಮಲ್ಲಿರುವ ನವಿರಾದ ಭಾವನೆಯನ್ನು ತಟ್ಟುವ ವಿಷಯ ಈ ಚಿತ್ರದಲ್ಲಿದೆ. ಪ್ರತಿಯೊಬ್ಬರಲ್ಲೂ ಒಬ್ಬ ಡೀಪ್ ಆದ ಮನುಷ್ಯ ಇದ್ದೇ ಇರುತ್ತಾನೆ. ಅವನೇ ಆದರ್ಶ ವ್ಯಕ್ತಿ.