ಶಿವಾಜಿ ಗೆಟಪ್‌ನಲ್ಲಿ ಬರುತ್ತಿರುವ ರಮೇಶ್ ಅರವಿಂದ್, ಈ ಚಿತ್ರದ ವಿಶೇಷತೆಗಳ ಬಗ್ಗೆ “ಶಿವಾಜಿ ಸುರತ್ಕಲ್’ನಿರ್ದೇಶಕ ಆಕಾಶ್ ಶ್ರೀವತ್ಸ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
Advertisement
ನಟ ಕಂ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಮೇಶ್ ಅರವಿಂದ್, ಇಲ್ಲಿಯವರೆಗೆ ನೂರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹತ್ತಾರು ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ಕನ್ನಡದ ಪ್ರೇಕ್ಷಕರು ಕೂಡ ರಮೇಶ್ ಅರವಿಂದ್ ಅವರನ್ನು ನಾನಾ ಪಾತ್ರಗಳಲ್ಲಿ ನೋಡಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಆದರೆ, “ಇಲ್ಲಿಯವರೆಗೆ ರಮೇಶ್ ಅರವಿಂದ್ ಅವರನ್ನು ಎಲ್ಲೂ ನೋಡದ ಪಾತ್ರವನ್ನು “ಶಿವಾಜಿ ಸುರತ್ಕಲ್’ನಲ್ಲಿ ನೋಡಬಹುದು. ಇಲ್ಲಿ ರಮೇಶ್ ಅರವಿಂದ್ ನೀವು ನಿರೀಕ್ಷಿಸದ ರೀತಿ ಕಾಣುತ್ತಾರೆ ಅದು ಹೇಗೆ ಅನ್ನೋದನ್ನ ಸ್ಕ್ರೀನ್ ಮೇಲೆ ನೋಡಬೇಕು ಅದೇ ಸಸ್ಪೆನ್ಸ್’ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.
Related Articles
“ಶಿವಾಜಿ ಸುರತ್ಕಲ್’ ಸುಮಾರು ಎರಡು ವರ್ಷಗಳ ಹಿಂದೆ ಶುರುವಾದ ಸಿನಿಮಾ. ಚಿತ್ರದ ಸ್ಕ್ರಿಪ್ಟ್ ವರ್ಕ್‌ಗಾಗಿಯೇ ಸರಿ ಸುಮಾರು ಒಂದು ವರ್ಷ ಸಮಯ ತೆಗೆದುಕೊಂಡಿದೆ. 7-8 ವರ್ಶನ್‌ನಲ್ಲಿ ಸ್ಕ್ರಿಪ್ಟ್ ಮಾಡಲಾಗಿದೆ. ಡಿಟೆಕ್ಟೀವ್ ಸಿನಿಮಾ ಆಗಿರುವುದರಿಂದ ಸಣ್ಣ ಸಣ್ಣ ಕುಸುರಿ ಕೆಲಸಗಳು ಸಾಕಷ್ಟಿದ್ದವು. ಆ ನಂತರ 40 ದಿನಗಳ ಶೂಟಿಂಗ್ ಮತ್ತೆ ಪೋಸ್ಟ್-ಪ್ರೊಡಕ್ಷನ್ ಕೆಲಸಕ್ಕೆ ಸುಮಾರು ಒಂದು ವರ್ಷ ಸಮಯ ಹಿಡಿಯಿತು. ಅಂತಿಮವಾಗಿ ಸಿನಿಮಾವನ್ನು ಸ್ಕ್ರೀನ್ ಮೇಲೆ ನೋಡಿದಾಗ ಸಿನಿಮಾ ಟೆಕ್ನಿಕಲಿ ತುಂಬಾ ಸ್ಟ್ರಾಂಗ್ ಆಗಿದೆ. ಒಂದು ಕ್ಷಣ ಕೂಡ ಕಣ್ಣು ಮಿಟುಕಿಸದಂತೆ ಫಸ್ಟ್ ಫ್ರೆàಮ್‌ನಿಂದ ಎಂಡ್ ಫ್ರೆàಮ್‌ವರೆಗೂ ಆಡಿಯನ್ಸ್ ಗಮನ ಹಿಡಿದಿಟ್ಟುಕೊಂಡು ನೋಡಿಸಿಕೊಂಡು ಹೋಗುತ್ತದೆ ಎಂಬ ಭರವಸೆ ಮೂಡಿಸಿದೆ. ಎರಡು ವರ್ಷದ ಪರಿಶ್ರಮಕ್ಕೆ ಈಗ ಫಲಸಿಗುವ ಸಮಯ ಬಂದಿದೆ ಎನ್ನುತ್ತದೆ ಚಿತ್ರತಂಡ.
Advertisement
ಚಿತ್ರತಂಡಕ್ಕೆ ತೃಪ್ತಿ ಕೊಟ್ಟ ಶಿವಾಜಿಈ ಹಿಂದೆ ಧನಂಜಯ್ ಅಭಿನಯದ “ಬದ್ಮಾಶ್’ ಚಿತ್ರವನ್ನು ನಿರ್ದೇಶಿಸಿದ್ದ ಆಕಾಶ್ ಶ್ರೀವತ್ಸ, “ಶಿವಾಜಿ ಸುರತ್ಕಲ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ತಮ್ಮ ಎರಡನೇ ಚಿತ್ರದ ಬಗ್ಗೆ ಮಾತನಾಡುವ ಆಕಾಶ್ ಶ್ರೀವತ್ಸ, “ಈ ಮೊದಲು ನಾನು ಮಾಡಿದ್ದು, ಪಕ್ಕಾ ಔಟ್ ಆ್ಯಂಡ್ ಔಟ್ ಮಾಸ್ ಕಮರ್ಶಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾವಾಗಿತ್ತು. ಎರಡನೇ ಸಿನಿಮಾದಲ್ಲಿ ನನಗೊಂದು ಚೇಂಜ್ ಓವರ್ ಬೇಕಾಗಿತ್ತು. ಹಾಗಾಗಿ ಇಂಥದ್ದೊಂದು ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡೆ. ನನ್ನ ಲೈಫ್ ಟೈಮ್‌ನಲ್ಲಿ ಹಿಂದೆ ತಿರುಗಿ ನೋಡಿದ್ರೆ ಇಂಥದ್ದೊಂದು ಸಿನಿಮಾ ಮಾಡಿದ್ದೆ ಅನೋ ತೃಪ್ತಿಯನ್ನ ಈ ಸಿನಿಮಾ ಕೊಟ್ಟಿದೆ’ ಎನ್ನುತ್ತಾರೆ. “ಶಿವಾಜಿ ಸುರತ್ಕಲ್’ ಜೊತೆಗೆ ನಿಂತವರು…
“ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ರಮೇಶ್ ಅರವಿಂದ್ ಅವರೊಂದಿಗೆ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ರಾಘು ರಮಣಕೊಪ್ಪ, ಅವಿನಾಶ್, ರಮೇಶ್ ಪಂಡಿತ್, ವಿದ್ಯಾ ಮೂರ್ತಿ, ರೋಹಿತ್ ಭಾನುಪ್ರಕಾಶ್, ವಿನಯ್ ಗೌಡ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಗುರುಪ್ರಸಾದ್ ಎಂ.ಜಿ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿದೆ. “ಅಂಜನಾದ್ರಿ ಸಿನಿ ಕ್ರಿಯೇಶನ್ಸ್’ ಬ್ಯಾನರ್‌ನಲ್ಲಿ ರೇಖಾ ಕೆ.ಎನ್, ಅನೂಪ್ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಮಡಿಕೇರಿ, ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಈ ವಾರ ರಾಜ್ಯಾದ್ಯಂತ 120ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಮುಂದಿನವಾರ ವಿದೇಶಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಜಿ. ಎಸ್. ಕಾರ್ತಿಕ ಸುಧನ್