ಮಾಲೂರು: ತಾಲೂಕಿನ ಪ್ರಭಾವಿ ರಾಜಕಾರಣಿ ಮಾಸ್ತಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಿ.ಇ.ರಾಮೇಗೌಡ ಅಧಿಕೃತ ವಾಗಿ ಎರಡನೇ ಬಾರಿಗೆ ಜೆಡಿಎಸ್ ಪಕ್ಷ ಸೇರಿದ್ದಾರೆ.
ಕಳೆದ ಐದಾರು ತಿಂಗಳುಗಳಿಂದ ತೆರೆ ಮರೆಯ ಕಸರತ್ತಾಗಿ ನಡೆಯುತ್ತಿದ್ದ ಪಕ್ಷ ಸೇರ್ಪಡೆ ಕಸರತ್ತಿಗೆ ಅಂತಿಮವಾಗಿ ತೆರೆ ಬಿದ್ದಿದ್ದು, ಬಿಡದಿ ಬಳಿಯಲ್ಲಿನ ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿಯವರ ತೋಟದ ಮನೆಯಲ್ಲಿ ತಾಲೂಕಿನ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದಾರೆ.
ಮಾಜಿ ಶಾಸಕ ಎಚ್.ಬಿ. ದ್ಯಾವೀರಪ್ಪನವರ ನಂತರತಾಲೂಕಿನಲ್ಲಿ ಜನತಾ ಪರಿ ವಾರದ ಚುಕ್ಕಾಣಿ ಹಿಡಿಯಲುಸಾಧ್ಯವಾಗದ ರಾಜಕೀಯ ಪರಿಸ್ಥಿತಿ ಗಳಲ್ಲಿ ತಾಲೂಕಿನ ಜೆಡಿಎಸ್ ಅಧಿಕೃತಅಭ್ಯರ್ಥಿಯಾಗಿ 2013ರ ಚುನಾವಣೆಯಲ್ಲಿಶಾಸಕರಾದ ಕೆ.ಎಸ್.ಮಂಜುನಾಥಗೌಡ ಐದು ವರ್ಷಗಳ ಕಾಲ ಆಡಳಿತ ನೀಡಿದ್ದರಾದರೂ ನಂತರದ 2018 ಚುನಾವಣೆಯಲ್ಲಿಸೋಲು ಕಂಡ ನಂತರ ಕೆಲಕಾಲ ತಾಲೂಕಿನ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದರು. ನಂತರದ ಪುರಸಭೆ,ಗ್ರಾಪಂ ಚುನಾವಣೆಗಳಲ್ಲಿ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿದ್ದ ಮಂಜುನಾಥಗೌಡರ ನಡೆ ಇನ್ನೂ ನಿಗೂಢವಾಗಿದೆ.
ಟಿಕೆಟ್ ಆಕಾಂಕ್ಷಿಯಾಗಿದ್ದರು: ಮಾಸ್ತಿ ಜಿಪಂ ಕ್ಷೇತ್ರದಿಂದ 2006 ಜಿಪಂ ಚುನಾವಣೆ ಯಲ್ಲಿ ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯಶೆಟ್ಟಿ ಯವರ ಪ್ರಾಬಲ್ಯ ಹೆಚ್ಚಾಗಿದ್ದರೂ ಜಿಪಂಗೆ ಆಯ್ಕೆಯಾಗಿದ್ದ ಜಿ.ಇ.ರಾಮೇ ಗೌಡರು 2008 ರ ವಿಧಾನಸಭೆಗೆ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿ ವಿಫಲ ಪ್ರಯತ್ನ ನಡೆಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಂದು ಜೆಡಿಎಸ್ ಸೇರಿದ್ದ ರಾಮೇ ಗೌಡರು 2013 ವಿಧಾನಸಭಾ ಚುನಾವಣೆಗೆಅನೇಕ ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಕೊನೆಯಗಳಿಗೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು 19,480 ಮತ ಪಡೆದು ಎಸ್.ಎನ್.ಕೃಷ್ಣಯ್ಯಶೆಟ್ಟಿಯವರ ಸೋಲಿಗೆ ಪ್ರಮುಖ ಕಾರಣರಾಗಿದ್ದರು.
2018ರ ಚುನಾವಣೆ ವೇಳೆಯಲ್ಲಿ ನಡೆದ ರಾಜಕೀಯ ದೃವೀಕರಣದಲ್ಲಿ ಮತ್ತೇ ಕಾಂಗ್ರೆಸ್ ಸೇರಿದ್ದ ರಾಮೇಗೌಡರು ಶಾಸಕ ಕೆ.ವೈ.ನಂಜೇಗೌಡರ ಬೆಂಬಲಕ್ಕೆ ನಿಂತಿದ್ದರು. ಕೆಲವೇ ದಿನಗಳಲ್ಲಿ ಎದುರಾಗಲಿರುವ ಜಿಪಂ ಮತ್ತು ತಾಪಂ ಚುನಾವಣೆ, 2023ರ ವಿಧಾನಸಭಾ ಚುನಾವಣೆಯ ಪ್ರಮುಖ ಆಕಾಂಕ್ಷಿಯಾಗಿರುವ ರಾಮೇಗೌಡರುಅಧಿಕೃತವಾಗಿ ಜೆಡಿಎಸ್ ಸೇರಿದ್ದಾರೆ. ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಡದಿಯ ಬಳಿಯಲ್ಲಿ ತೋಟದ ಮನೆಯಲ್ಲಿ ಜೆಡಿಎಸ್‌ಗೆ ಸೇರಿದ್ದಾರೆ. ಈ ಸಂಧರ್ಭದಲ್ಲಿ ತಾಲೂಕಿನ ಜೆಡಿಎಸ್ ಕಾರ್ಯಕರ್ತರೊಂದಿಗೆ ತಾಲೂಕು ಜೆಡಿಎಸ್‌ನ ಬಲ್ಲಹಳ್ಳಿ ನಾರಾಯಣಸ್ವಾಮಿ ಇದ್ದರು.
ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ! ; ಜೆಡಿಎಸ್ ಪಕ್ಷಕ್ಕೆ ಜಿ.ಇ.ರಾಮೇಗೌಡರು ಸೇರ್ಪಡೆಯಾಗಿದ್ದು, ಪಕ್ಷದ ವರಿಷ್ಠರು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ ಯಂದು ಘೋಷಣೆ ಮಾಡುವ ಸಂಕಲ್ಪ ಮಾಡಿದ್ದಾರೆ. ಮಾರ್ಚ್ ಅಂತ್ಯದ ವೇಳೆಗೆ ಜೆಡಿಎಸ್ ಯುವ ಬ್ರಿಗೇಡ್ ವತಿಯಿಂದ ನಿಖೀಲ್‌ಕುಮಾರ ಸ್ವಾಮಿ ಅವರ ಸಾರಥ್ಯದಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿ ತಾಲೂಕಿನಲ್ಲಿ ಬೃಹತ್ ಸಮಾ ವೇಶ ನಡೆಸುವ ಸಿದ್ಧತೆ ನಡೆಸುತ್ತಿರುವು ದಾಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ವಿ.ಚಂದ್ರಶೇಖರಗೌಡ ತಿಳಿಸಿದ್ದಾರೆ.