Advertisement

ರಾಮದುರ್ಗ: ಈ ಕ್ಷೇತ್ರದಲ್ಲಿ ಗೆದ್ದವರು ಇನ್ನೂ ಸಚಿವರೇ ಆಗಿಲ್ಲ

12:26 AM Mar 09, 2023 | Team Udayavani |

ಗಡಿ ಜಿಲ್ಲೆ ಬೆಳಗಾವಿ ರಾಜಕೀಯವಾಗಿ ಹಲವಾರು ವೈಶಿಷ್ಟ್ಯ ಗಳನ್ನು ಹೊಂದಿದೆ. ಕುಟುಂಬ ರಾಜಕಾರಣಕ್ಕೆ ಬಹಳ ಗಟ್ಟಿಯಾಗಿ ಬೆಸೆದುಕೊಂಡಿದೆ. ಒಂದೇ ಕುಟುಂಬ ದಲ್ಲ ಸಹೋದರರು, ಪತಿ-ಪತ್ನಿಯರು ಶಾಸಕರಾಗಿದ್ದಾರೆ, ಸಚಿವರಾಗಿದ್ದಾರೆ. ಇದರಿಂದ ರಾಮದುರ್ಗ ಕ್ಷೇತ್ರ ಸಹ ಹೊರತಾಗಿಲ್ಲ.

Advertisement

ರಾಮದುರ್ಗ ಕ್ಷೇತ್ರದಿಂದ ಇದುವರೆಗೆ ಯಾರೂ ಸಚಿವರಾಗಿ ಕಾರ್ಯನಿರ್ವಹಿಸಿಲ್ಲ. ಆದರೆ ಈ ಕ್ಷೇತ್ರದಲ್ಲಿ ಸಹ ಕುಟುಂಬ ರಾಜಕಾರಣ ಗಟ್ಟಿಯಾಗಿ ಬೇರು ಬಿಟ್ಟಿದೆ. ಇದಕ್ಕೆ ಪಟ್ಟಣ ಕುಟುಂಬ ಉತ್ತಮ ಉದಾಹರಣೆ. ಮೊದಲು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಮಹದೇವಪ್ಪ ಪಟ್ಟಣ ಅನಂತರ ಅವರ ಪತ್ನಿ ಶಾರದವ್ವ ಪಟ್ಟಣ ಶಾಸಕರಾಗಿ ಆಯ್ಕೆಯಾದರೆ ಅನಂತರ ಅವರ ಪುತ್ರ ಅಶೋಕ ಪಟ್ಟಣ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷ.

ಈ ಕ್ಷೇತ್ರದ ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ 2004ರ ಚುನಾವಣೆಯಲ್ಲಿ ಬಿಜೆಪಿಯ ಮಹದೇವಪ್ಪ ಯಾದ ವಾಡ ಅತೀ ಹೆಚ್ಚಿನ ಮತಗಳ ಅಂತರದಿಂದ ಅಂದರೆ 25541 ಮತಗಳಿಂದ ಕಾಂಗ್ರೆ ಸ್‌ನ ಅಶೋಕ ಪಟ್ಟಣ ಅವರನ್ನು ಸೋಲಿಸಿದ್ದರು. ಇದು ಈ ಕ್ಷೇತ್ರದ ಇದುವರೆಗಿನ ದಾಖಲೆಯಾಗಿದೆ.

ಅದೇ ರೀತಿ 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಶೋಕ ಪಟ್ಟಣ ಅತ್ಯಂತ ಕಡಿಮೆ ಮತಗಳ ಅಂತರದಿಂದ ಅಂದರೆ ಕೇವಲ 384 ಮತಗಳ ಅಂತರದಿಂದ ಜಯ ಗಳಿಸಿದ್ದರು. ಈ ಚುನಾವಣೆಯಲ್ಲಿ ಅಶೋಕ ಪಟ್ಟಣ 49,246 ಮತಗಳನ್ನು ಪಡೆದಿದ್ದರೆ, ಅವರ ಸಮೀಪದ ಸ್ಪರ್ಧಿ ಬಿಜೆಪಿಯ ಮಹದೇವಪ್ಪ ಯಾದವಾಡ 48,862 ಮತಗಳನ್ನು ಪಡೆದುಕೊಂಡಿದ್ದರು. ಇದು ಸಹ ರಾಮದುರ್ಗ ಕ್ಷೇತ್ರದಲ್ಲಿ ಇದುವರೆಗೆ ದಾಖಲೆಯಾಗಿ ಉಳಿದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next