Advertisement

ಪತಂಜಲಿ ‘ಕಿಂಭೋ’ನಾಪತ್ತೆ

02:10 AM Jun 01, 2018 | Team Udayavani |

ಹೊಸದಿಲ್ಲಿ: ಯೋಗಗುರು ಬಾಬಾ ರಾಮ್‌ ದೇವ್‌ ನೇತೃತ್ವದ ಪತಂಜಲಿ ಸಂಸ್ಥೆಯಿಂದ ಅಧಿಕೃತವಾಗಿ ಬಿಡುಗಡೆಯಾಗಿರುವ ‘ಕಿಂಭೋ’ ಸಾಮಾಜಿಕ ಮೆಸೇಜಿಂಗ್‌ ಆ್ಯಪ್‌, ಐಒಎಸ್‌ ಆ್ಯಪ್‌ ಸ್ಟೋರ್‌ ನಲ್ಲಿ ಮಾತ್ರ ಲಭ್ಯವಿದ್ದು, ಆ್ಯಂಡ್ರಾಯ್ಡ್ ಗೂಗಲ್‌ ಪ್ಲೇ ಸ್ಟೋರ್‌ ನಲ್ಲಿ ಕಾಣಸಿಗುತ್ತಿಲ್ಲವೆಂದು ಕೆಲವು ಇಂಟರ್ನೆಟ್‌ ಬಳಕೆದಾರರು ದೂರಿದ್ದಾರೆ. ಏತನ್ಮಧ್ಯೆ, ಫ್ರಾನ್ಸ್‌ನ ಅಂತರ್ಜಾಲ ಭದ್ರತಾ ಸಂಶೋಧಕರಾದ ಈಲಿಯಟ್‌ ಆ್ಯಂಡರ್ಸನ್‌ ಎಂಬವರು ಕಿಂಭೋ ಸುರಕ್ಷಿತವಾಗಿಲ್ಲ. ಇದನ್ನು ಸಾಬೀತು ಮಾಡಲು ಈ ಆ್ಯಪ್‌ ಡೌನ್‌ ಲೋಡ್‌ ಮಾಡಿರುವ ಕೆಲವರ ಐಡಿ, ದೂರವಾಣಿ ಸಂಖ್ಯೆಗಳನ್ನು ತಾವು ಹ್ಯಾಕ್‌ ಮಾಡಿರುವುದಾಗಿ ತಿಳಿಸಿದ್ದಾರೆ. ಗೂಗಲ್‌ ಪ್ಲೇ ಸ್ಟೋರ್‌ ನಲ್ಲಿ ಕಿಂಭೋ ಕಾಣೆಯಾಗಿದ್ದು, ಭದ್ರತೆಯ ಸಮಸ್ಯೆಯಿಂದಲೇ ಇದನ್ನು ತೆಗೆಯಲಾಗಿದೆಯೇ ಎಂಬ ಶಂಕೆ ಎದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next