Advertisement

14 ವರ್ಷ ಬಾಂಬ್‌ ಪತ್ತೆ ದಳದಲ್ಲಿ ಸೇವೆ ಸಲ್ಲಿಸಿದ “ರ್‍ಯಾಂಬೋ’ನಾಯಿ ನಿಧನ

10:02 AM Aug 27, 2020 | sudhir |

ಮಂಡ್ಯ: ಜಿಲ್ಲಾ ಶಸಸ್ತ್ರ ಪಡೆಯಲ್ಲಿ ಬಾಂಬೆ ಪತ್ತೆ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ “ರ್‍ಯಾಂಬೋ’ ಹೆಸರಿನ ಲ್ಯಾಬ್ರಡಾರ್‌ ನಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Advertisement

ನಗರದ ಡಿಎಆರ್‌ ಮೈದಾನದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ ಅವರು ಪುಷ್ಪ ನಮನ ಸಲ್ಲಿಸಿ ಸರ್ಕಾರಿ ಗೌರವಗಳೊಂದಿಗೆ ಪೊಲೀಸ್‌ ಕ್ವಾಟ್ರಸ್‌ನಲ್ಲಿರುವ ತೋಟದಲ್ಲಿ ಅಂತ್ಯಕ್ರಿಯೆ ನಡೆಸಿದರು. ಎಸ್ಪಿ ಪರಶುರಾಮ ಮಾತನಾಡಿ, ಜಿಲ್ಲಾ ಶಸಸ್ತ್ರ ಪಡೆಯಲ್ಲಿ ಕಳೆದ 14 ವರ್ಷಗಳಿಂದ ಬಾಂಬ್‌ ಪತ್ತೆ ಕಾರ್ಯ ದಳದಲ್ಲಿ ಕಾರ್ಯನಿರ್ವಹಿಸುತ್ತಿತ್ತು. 2007 ಫೆಬ್ರ ವರಿ 20ರಂದು ಬೆಂಗಳೂರಿನಲ್ಲಿ ಜನಿಸಿತ್ತು.

2007ರ ಮಾರ್ಚ್‌ 20ರಂದು ಮಂಡ್ಯ ಶಸಸ್ತ್ರ ಪಡೆಯಲ್ಲಿ ತರಬೇತಿ ನೀಡಲಾಗಿತ್ತು. ಅಂದಿನಿಂದ ಬಾಂಬ್‌ ದಳದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿತ್ತು, ಇಂದು ಮೃತಪಟ್ಟಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next