Advertisement

ಅಬ್ಬಾ ವಿಶ್ವ ದಾಖಲೆ ಬರೆದ “ರಾಮಾಯಣ”! ವಿಶ್ವದಲ್ಲಿಯೇ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಶೋ

08:27 AM May 02, 2020 | Nagendra Trasi |

ನವದೆಹಲಿ: ರಮಾನಂದ ಸಾಗರ್ ಅವರು ಜನಪ್ರಿಯ ಟಿವಿ ಧಾರಾವಾಹಿ “ರಾಮಾಯಣ” ಲಾಕ್ ಡೌನ್ ಸಂದರ್ಭದಲ್ಲಿ ದೂರದರ್ಶನದಲ್ಲಿ ಮತ್ತೆ ಮರು ಪ್ರಸಾರವಾಗುವ ಮೂಲಕ ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ವೀಕ್ಷಿಸಲ್ಪಟ್ಟ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಏಪ್ರಿಲ್ 16ರಂದು ಬರೋಬ್ಬರಿ 7.7 ಕೋಟಿ ಮಂದಿ ಧಾರಾವಾಹಿಯನ್ನು ವೀಕ್ಷಿಸಿರುವುದಾಗಿ ಡಿಡಿ ಇಂಡಿಯಾ ತನ್ನ ಅಧಿಕೃತ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24ರಂದು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರು. ಬಸ್, ರೈಲು, ವಿಮಾನ ಸಂಚಾರ ಬಂದ್, ಅಂಗಡಿ, ಮಾಲ್, ರೆಸ್ಟೋರೆಂಟ್ ಮುಚ್ಚಿದ್ದು, ದಿನಬಳಕೆ ವಸ್ತು ಖರೀದಿಸಲು ಮಾತ್ರ ಜನರಿಗೆ ಅವಕಾಶ ನೀಡಿಲಾಗಿತ್ತು. ಈ ನಿಟ್ಟಿನಲ್ಲಿ ಜನರು ಅಂದಿನ ಜನಪ್ರಿಯ ಧಾರವಾಹಿ ರಾಮಾಯಣ, ಮಹಾಭಾರತವನ್ನು ಮರುಪ್ರಸಾರ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ್ದ ಕೇಂದ್ರ ಸರ್ಕಾರ ಮಾರ್ಚ್ 28ರಿಂದ ರಾಮಾಯಣವನ್ನು ಮರುಪ್ರಸಾರ ಮಾಡಲು ಆರಂಭಿಸಿತ್ತು.

ಇದೀಗ ಮರುಪ್ರಸಾರವಾದ ಬಳಿಕ ಈ ಧಾರಾವಾಹಿ ಎಲ್ಲಾ ಜನಪ್ರಿಯ ದಾಖಲೆಗಳನ್ನು ಮುರಿದು ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. ಏಳು ಕೋಟಿಗೂ ಅಧಿಕ ಮಂದಿ ವೀಕ್ಷಿಸುವ ಮೂಲಕ ರಾಮಾಯಣ ವೀಕ್ಷಕರು ಮತ್ತೊಂದು ದಾಖಲೆ ಬರೆದಿರುವುದಾಗಿ ವರದಿ ತಿಳಿಸಿದೆ.

ರಮಾನಂದ್ ಸಾಗರ್ ಅವರು ವಾಲ್ಮೀಕಿ ರಾಮಾಯಣ ಮತ್ತು ತುಳಸಿದಾಸರ ರಾಮಚರಿತ ಮಾನಸ ಆಧರಿಸಿ ಒಟ್ಟು 78 ಎಪಿಸೋಡುಗಳ ಧಾರಾವಾಹಿಯನ್ನು ನಿರ್ಮಿಸಿದ್ದರು. ಇದು ದೇಶದಲ್ಲಿ ಮೊತ್ತ ಮೊದಲ ಬಾರಿಗೆ 1987ರ ಜನವರಿ 25ರಿಂದ 1988ರ ಜುಲೈ 31ರವರೆಗೆ ಪ್ರತಿದಿನ ಭಾನುವಾರ 9,30ಕ್ಕೆ ಪ್ರಸಾರವಾಗುತ್ತಿತ್ತು.

1987ರಿಂದ 1988ರವರೆಗೆ ರಾಮಾಯಣ ಧಾರವಾಹಿ ಇಡೀ ಜಗತ್ತಿನಲ್ಲಿಯೇ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಸೀರಿಯಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ಮತ್ತೊಮ್ಮೆ ದಾಖಲೆಯ ನಿರ್ಮಿಸುವ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದೆ ಎಂದು ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next