Advertisement

ರಾಮಾಯಣ, ರಾಮಚರಿತೆಯ ಮಧುರ ಕಾವ್ಯ

03:25 AM Nov 03, 2018 | |

ರಾಮಾಯಣ, ಎಲ್ಲರೂ ಓದಲೇ ಬೇಕಾದ ಕಾವ್ಯ. ಇದರಲ್ಲಿ ಯಾವುದು ಧರ್ಮ? ಯಾವುದು ಅಧರ್ಮ? ಎಂಬುದು ಬಿಂಬಿತವಾಗಿದೆ. ರಾಮನ ಬಾಲ್ಯ ಮಕ್ಕಳಿಗೆ ಮಾದರಿಯಾದರೆ ಆತನ ಆದರ್ಶ ಮನುಜರಿಗೆಲ್ಲರಿಗೂ ಮಾದರಿ. ಯಾವುದೇ ಓದು ನಮಗೆ ಮುದವನ್ನು ನೀಡುವ ಜೊತೆಗೆ ಒಂದು ಜ್ಞಾನವನ್ನೋ ಅರಿವನ್ನೂ ನೀಡಬೇಕಂತೆ. ಅಂತಹ ಓದಿಗೆ ಹೇಳಿಮಾಡಿಸಿದ್ದು ಈ ರಾಮಾಯಣ. 

Advertisement

ರಾಮಾಯಣವೆಂಬ ಮಹಾನ್‌ ಕಾವ್ಯದ ಪಿತಾಮಹರಾದ ವಾಲ್ಮೀಕಿ ಮಹರ್ಷಿಗಳು ಸದಾ ವಂದನಾರ್ಹರು. ಯುಗಯುಗಗಳೇ ಉರುಳಿದರೂ, ರಾಮಾಯಣ ಜೀವಂತವಾಗಿದೆ. ಅಂತೆಯೇ, ವಾಲ್ಮೀಕಿ ಮಹರ್ಷಿಗಳೂ ಜನಮಾನಸದಲ್ಲಿ ಜೀವಂತವಾಗಿರುವ ಕವಿಶ್ರೇಷ್ಠರು. ಅವರೊಬ್ಬ ಕಾವ್ಯದ ಶಕ್ತಿ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸೇನನ ಮಗ. ಇವರು ಹಲವು ವರ್ಷಗಳ ಕಾಲ ತಪಸ್ಸು ಆಚರಿಸಿದ್ದರು. ಆ ಸಮಯದಲ್ಲಿ ಇವರ ದೇಹದ ಸುತ್ತಲೂ ಹುತ್ತ ಬೆಳೆದುಕೊಂಡಿತ್ತು. ನಂತರ ಆ ಹುತ್ತವನ್ನು ಒಡೆದುಕೊಂಡು ಹೊರಬಂದಿದ್ದರಿಂದ ವಾಲ್ಮೀಕಿ ಎಂಬ ಹೆಸರು ಬಂತು. ಸಂಸ್ಕೃತದಲ್ಲಿ ವಾಲ್ಮೀಕಿ ಎಂದರೆ ಹುತ್ತ ಎಂಬರ್ಥವಿದೆ.

ವಾಲ್ಮೀಕಿ ಮಹರ್ಷಿಗಳ ಬಗ್ಗೆ ದಂತಕಥೆಯೊಂದಿದೆ. ಅವರು ಮೊದಲು ದಾರಿಹೋಕರನ್ನು ದರೋಡೆ ಮಾಡಿಕೊಂಡು ಬದುಕುತ್ತಿದ್ದರಂತೆ. ಒಮ್ಮೆ ನಾರದರನ್ನು ದರೋಡೆ ಮಾಡಲು ಮುಂದಾದಾಗ-“ನೋಡು, ಆ ಮರವನ್ನು ನೋಡಿಕೊಂಡು ಆಮರ.. ಆಮರ..ಆಮರ ಎಂದು ಹೇಳುತ್ತಲೇ ಇರು, ಆಗ ನಿನಗೆ ಸಕಲೈಶ್ವರ್ಯ ದೊರೆಯುತ್ತದೆ ಎಂದು ಹೇಳಿ ಅಲ್ಲಿಂದ ಮಾಯವಾದವರಂತೆ. ಆ ಮರುಕ್ಷಣದಿಂದ ಆ ದರೋಡೆಕೋರ ಆಮರ..ಆಮರ..ಆಮರ ಎಂದು ಜಪಿಸುತ್ತ ಅದು ಆಮರದಿಂದ ರಾಮ, ರಾಮ, ರಾಮ ಎಂದು- ರಾಮಜಪವಾಗಿ ಪರಿವರ್ತಿತವಾಗಿ ರಾಮಾಯಣವನ್ನು ಬರೆದ ಮಹಾನ್‌ ಕವಿ, ಆದಿಕವಿಯಾದರು ಎಂದು ಈ ಕಥೆ ಹೇಳುತ್ತದೆ.

ವಾಲ್ಮೀಕಿ ಮುನಿಗಳು ಸಂಸ್ಕೃತದಲ್ಲಿ ರಚಿಸಿದ ರಾಮಯಾಣ ಕಾವ್ಯವು,  ಹಿಂದೂಧರ್ಮದ ಮಹಾಕಾವ್ಯವಾಗಿ ಪರಿಗಣಿಸಲ್ಪಟ್ಟಿದೆ. ಇಡೀ ರಾಮಾಯಣ ಕಾವ್ಯವು ಜೀವನದ ಸನ್ಮಾರ್ಗವನ್ನು ತೋರಿಸಿಕೊಟ್ಟಿದೆ. ಬಾಲಕರಿಂದ ಹಿಡಿದು ಹಿರಿಯರತನಕ ಅಳವಡಿಸಿಕೊಳ್ಳಬೇಕಾದ ವಿವೇಕ, ಸಾಧನೆ, ಸತ್ಯ, ಸನ್ನಡತೆಗಳನ್ನು ಎಳೆಎಳೆಯಾಗಿ ಪ್ರತಿಯೊಂದು ಪಾತ್ರದ ಮೂಲಕ ಇದರಲ್ಲಿ ಹೇಳಿ¨ªಾರೆ. ವಾಲ್ಮೀಕಿ ರಾಮಾಯಣವು ರಾಮಚರಿತ್ರೆಯನ್ನು ಮಧುರವಾಗಿ ಬಿಡಿಸಿಟ್ಟ ಮುತ್ತಿನ ಕಾವ್ಯ. ಇದು ಎÇÉಾ ಕವಿಗಳಿಗೆ ಸ್ಫೂರ್ತಿಯೂ ಮಾದರಿಯೂ ಆಗಿದೆ. ರಾಮಾಯಣದ ಪ್ರತಿಯೊಂದು ಸನ್ನಿವೇಶವೂ ರೋಚಕ ಮತ್ತು ಕುತೂಹಲಕಾರಿಯಾಗಿದೆ. ಓದಲು ಬರೆಯಲು ಬಾರದ ನಮ್ಮ ಪೂರ್ವಜರಿಗೂ ರಾಮಾಯಣ ಸಂಪೂರ್ಣವಾಗಿ ಗೊತ್ತಿತ್ತು. ವಾಲ್ಮೀಕಿಯ ಬಗ್ಗೆ ಗೊತ್ತಿತ್ತು. ಸಣ್ಣ ಮಕ್ಕಳನ್ನು ಸಂತಸವಾಗಿಡುವ ಹಲವು ಸಂಗತಿಗಳಲ್ಲಿ ರಾಮಾಯಣದ ಕಥೆಗಳೂ ಸೇರಿದ್ದುವು. ಇದು ಕೇವಲ ಕಥೆಯಾಗಿರದೆ ಮಕ್ಕಳ ಮನಸ್ಸಿನಲ್ಲಿ ಸುಸಂಸ್ಕಾರವನ್ನು ಬೆಳೆಸಲು ಸಹಾಯಕವಾಗಿರುವುದು ವಿಶೇಷ.

ಇಂತಹ ವಿಶೇಷ ಕಾವ್ಯವನ್ನು ನಮ್ಮೆಲ್ಲರಿಗೂ ಒದಗಿಸಿಕೊಟ್ಟ ಮಹಾನ್‌ ಚೇತನ ವಾಲ್ಮೀಕಿ ಮಹರ್ಷಿಗಳನ್ನು ನೆನೆದು ವಂದಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ರಾಮಾಯಣ, ಎಲ್ಲರೂ ಓದಲೇ ಬೇಕಾದ ಕಾವ್ಯ. ಇದರಲ್ಲಿ ಯಾವುದು ಧರ್ಮ? ಯಾವುದು ಅಧರ್ಮ? ಎಂಬುದು ಬಿಂಬಿತವಾಗಿದೆ. ರಾಮನ ಬಾಲ್ಯ ಮಕ್ಕಳಿಗೆ ಮಾದರಿಯಾದರೆ ಆತನ ಆದರ್ಶ ಮನುಜರಿಗೆಲ್ಲರಿಗೂ ಮಾದರಿ. ಯಾವುದೇ ಓದು ನಮಗೆ ಮುದವನ್ನು ನೀಡುವ ಜೊತೆಗೆ ಒಂದು ಜ್ಞಾನವನ್ನೋ ಅರಿವನ್ನೂ ನೀಡಬೇಕಂತೆ. ಅಂತಹ ಓದಿಗೆ ಹೇಳಿಮಾಡಿಸಿದ್ದು ಈ ರಾಮಾಯಣ. ಇಂತಹ ರಾಮಾಯಾಣದ ಜನಕನನ್ನು ಮರೆಯುದು ಸಾಧ್ಯವೇ? ಸರಿಯೇ?

Advertisement

ವಾಲ್ಮೀಕಿ ಮಹರ್ಷಿಗಳನ್ನು ಸ್ಮರಿಸುತ್ತ, ಅವರು ರಾಮಾಯಣದ ಮೂಲಕ ಹೇಳಿದ ಆದರ್ಶಗಳನ್ನು ಅಳವಡಿಸಿಕೊಳ್ಳೋಣ. ಆದಿಕವಿಯ ಚರಣಗಳಿಗೆ ವಂದಿಸಿ, ಸನ್ನಡತೆಯ ದಾರಿಯಲ್ಲಿ ನಡೆಯೋಣ.

Advertisement

Udayavani is now on Telegram. Click here to join our channel and stay updated with the latest news.

Next