Advertisement

Ramayan: ಮಾ.2ರಂದು ರಾಮಾಯಣ್‌ ಶೂಟಿಂಗ್‌ ಆರಂಭ

12:06 AM Jan 13, 2024 | Team Udayavani |

ಬಾಲಿವುಡ್‌ನ‌ ಖ್ಯಾತ ನಿರ್ದೇಶಕ ನಿತೀಶ್‌ ತಿವಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಬಹುನಿರೀಕ್ಷಿತ ಸಿನೆಮಾ ರಾಮಾಯಣ್‌ನ ಚಿತ್ರೀಕರಣ ಮಾ. 2ರಿಂದ ಆರಂಭವಾಗಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

Advertisement

ಇತ್ತೀಚೆಗೆಷ್ಟೇ ಅನಿಮಲ್‌ ಚಿತ್ರದ ಯಶಸ್ಸು ಮುಡಿಗೇರಿಸಿಕೊಂಡಿರುವ ರಣಬೀರ್‌ ಕಪೂರ್‌ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಟಿ ಸಾಯಿ ಪಲ್ಲವಿ ಸೀತಾ ದೇವಿಯಾಗಿ ಹಾಗೂ ಕನ್ನಡದ ಯಶಸ್ವೀ ನಟ ಯಶ್‌ ರಾವಣನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಲಾಸ್‌ ಏಂಜಲೀಸ್‌ನ ಟೆಕ್ನಿಕಲ್‌ ತಂಡವು ಸಿನೆಮಾಗೆ ಕೆಲಸ ಮಾಡಲಿದ್ದು, 2025ಕ್ಕೆ ಚಿತ್ರ ತೆರೆಕಾಣುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next